
Viral Video : ಮೊನ್ನೆಯಷ್ಟೇ ಒಂದು ವೈರಲ್ ವಿಡಿಯೋ ನೋಡಿದಿರಿ, ಟರ್ಕಿಯ ಕ್ರೀಡಾ ವರದಿಗಾರರೊಬ್ಬರು ವರ್ಕ್ ಫ್ರಾಂ ಹೋಂ ಮಾಡುತ್ತ ಲೈವ್ನಲ್ಲಿರಬೇಕಾದರೆ ಬೆಕ್ಕೊಂದು ಅವರ ಬೆನ್ನು ಏರಿದ್ದಲ್ಲದೆ ಅವರ ಹಿಂದೆಲೆಗೆ ಒಂದೇಟು ಹೊಡೆದ ದೃಶ್ಯವನ್ನೂ. ಹೀಗೆ ಆ್ಯಂಕರ್ಗಳಿಗೆ, ಪತ್ರಕರ್ತರಿಗೆ ಸುದ್ದಿಮನೆಯ ಹೊರಗೂ ಒಳಗೂ ಲೈವ್ನಲ್ಲಿರಬೇಕಾದರೆ ಅಚಾತುರ್ಯಗಳು ಘಟಿಸುವುದುಂಟು. ಆದರೆ ತಮ್ಮನ್ನು ಟಿವಿ ಮೂಲಕ ಲಕ್ಷಾಂತರ ಜನರು ವೀಕ್ಷಿಸುತ್ತಾರೆ ಎಂಬ ಪ್ರಜ್ಞೆಯೊಂದಿಗೆ ಸಂದರ್ಭವನ್ನು ನಿಭಾಯಿಸುವ ಜಾಣ್ಮೆ ಕೆಲವರಿಗೆ ಇರುತ್ತದೆ, ಕೆಲವರು ನಿಭಾಯಿಸುವಲ್ಲಿ ಅಸಮರ್ಥರಾಗುತ್ತಾರೆ. ಆದರೆ ಇದೀಗ ವೈರಲ್ ಆದ ಈ ವಿಡಿಯೋದಲ್ಲಿ ಪತ್ರಕರ್ತೆ ಫರಾ ನಾಸೀರ್ ಎಲ್ಲೂ ಆಭಾಸವಾಗದಂತೆ ನಿರ್ವಹಿಸಿದ ರೀತಿ ನೆಟ್ಟಿಗರಲ್ಲಿ ಅಚ್ಚರಿಯುಂಟು ಮಾಡಿದೆ.
ಫರಾ ಲೈವ್ನಲ್ಲಿದ್ದಾಗ ಅಕಸ್ಮಾತ್ ಆಗಿ ನೊಣವೊಂದನ್ನು ನುಂಗಿದರು. ಆದರೆ ಲೈವ್ನಲ್ಲಿದ್ದ ಕಾರಣ ಆ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳದೆ ಮಾತು ಮುಂದುವರಿಸಿದರು. ಪಾಕಿಸ್ತಾನದಲ್ಲಿ ಮಳೆಯು ಹೇಗೆ ಹಾನಿಯನ್ನುಂಟುಮಾಡುತ್ತಿದೆ ಎಂದು ಲೈವ್ ರಿಪೋರ್ಟ್ ಕೊಡುತ್ತಿರುವಾಗ ಈ ಘಟನೆ ನಡೆಯಿತು. ‘ಪಾಕಿಸ್ತಾನವು ಇಂಥ ಮಳೆಯನ್ನು ಎಂದೂ ನೋಡಿಲ್ಲ. ಎಂಟು ವಾರಗಳಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇದೆ. ಕಾರಣ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ’ ಎಂಬ ಸುದ್ದಿಯ ಸುತ್ತ ನಾಸರ್ ವಿವರಿಸುತ್ತಿದ್ದರು. ಆಗಲೇ ನೊಣವೊಂದು ಅವರ ಬಾಯಿಯನ್ನು ಹೊಕ್ಕಿತು! ಆದರೆ ಅದರಿಂದ ಕಂಗೆಡದ ಆಕೆ ಅದನ್ನು ನುಂಗಿಯೇಬಿಟ್ಟರು. ಮತ್ತು ಲೈವ್ ರಿಪೋರ್ಟ್ ಕೊಡುವುದನ್ನು ಮುಂದುವರಿಸಿದರು.
ನಂತರ ಅವರು ಟ್ವಿಟರ್ನಲ್ಲಿ ಈ ವಿಡಿಯೋ ಹಂಚಿಕೊಂಡು, ‘ಈ ದಿನಗಳಲ್ಲಿ ನಮಗೆಲ್ಲರಿಗೂ ನಗು ಬೇಕಿದೆ. ಅದಕ್ಕಾಗಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ನಾನು ಇಂದು ನೊಣವನ್ನು ನುಂಗಿದ್ದೇನೆ.’ ಎಂದು ಈಕೆ ನೋಟ್ ಬರೆದಿದ್ದಾರೆ.
ನೆಟ್ಟಿಗರು, ಸಹೋದ್ಯೋಗಿಗಳು, ಕೆನಡಾದ ಪತ್ರಕರ್ತರು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ಅವರನ್ನು ಪ್ರಶಂಸಿಸಿದ್ದಾರೆ.
‘ಇದು ವೃತ್ತಿಪರತೆ, ಸಂದರ್ಭವನ್ನು ಚೆನ್ನಾಗಿ ನಿಭಾಯಿಸಿದ್ದೀರಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಮಗೆಲ್ಲರಿಗೂ ನಗು ಹಂಚಿದ್ದಕ್ಕಾಗಿ ಧನ್ಯವಾದ’ ಎಂದು ಮತ್ತೊಬ್ಬರು ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:06 am, Sat, 3 September 22