Viral Video : ಮನುಷ್ಯನ ದುರಾಸೆಗೆ ಕ್ರೂರತನಕ್ಕೆ ಕೊನೆಯೇ ಇಲ್ಲವೆ?
Baby birds fall to death : ಸಾಕಷ್ಟು ಪುಟ್ಟಹಕ್ಕಿಗಳು ಒಂದೇ ಏಟಿಗೆ ಜೀವಕಳೆದುಕೊಳ್ಳುವಂಥ ಹೃದಯವಿದ್ರಾವಕ ಘಟನೆಯಿದು. ಇದು ನಡೆದದ್ದು ಕೇರಳದ ಮಲಪ್ಪುರಂನಲ್ಲಿ.
Viral Video : ಬೃಹತ್ ಮರವನ್ನು ಬುಡಸಮೇತ ನೆಲಕ್ಕುರುಳಿಸಿದಾಗ ಅದರಲ್ಲಿದ್ದ ಸಾಕಷ್ಟು ಹಕ್ಕಿಮರಿಗಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ಈ ವಿಡಿಯೋ ಟ್ವಿಟರ್ನಲ್ಲಿ ಹರಿದಾಡುತ್ತ ವೈರಲ್ ಆಗಿದೆ. ಏಳು ಗಂಟೆಗಳಲ್ಲಿ ಸುಮಾರು 7,000 ಕ್ಕೂ ಹೆಚ್ಚು ರೀಟ್ವೀಟ್ ಪಡೆದಿದೆ. ಈ ವಿಡಿಯೋ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡವರು ಐಎಫ್ಎಸ್ ಅಧಿಕಾರಿ ಪರವೀನ್ ಕಸ್ವಾನ್. ‘ಪ್ರತಿಯೊಬ್ಬರಿಗೂ ಮನೆ ಬೇಕು. ಆದರೆ, ನಾವು ಅದೆಷ್ಟು ಕ್ರೂರಿಗಳಾದೆವು’ ಎಂಬ ನೋಟ್ ಅವರ ಪೋಸ್ಟ್ನಲ್ಲಿದೆ. 44 ಸೆಕೆಂಡುಗಳ ಜೀವ ಚುರುಗುಟ್ಟುವ ಈ ವಿಡಿಯೋ ನೋಡಲು ನಿಜಕ್ಕೂ ಕಷ್ಟವಾಗುತ್ತದೆ. ಇನ್ನು ಜೀವ ಕಳೆದುಕೊಂಡ ಆ ಹಕ್ಕಿಗಳು, ಅವುಗಳ ಅಪ್ಪ ಅಮ್ಮ ಬಳಗ…
Everybody need a house. How cruel we can become. Unknown location. pic.twitter.com/vV1dpM1xij
ಇದನ್ನೂ ಓದಿ— Parveen Kaswan, IFS (@ParveenKaswan) September 2, 2022
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಕ್ಲಿಪ್ ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗಡಿಯ ವಿಕೆ ಪಾಡಿಯಿಂದ ವರದಿಯಾಗಿದೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಈ ಮರವನ್ನು ಜೆಸಿಬಿಯಿಂದ ನೆಲಕ್ಕುರುಳಿಸಲಾಗಿದೆ. ಮರ ಉರುಳಿ ಬೀಳುತ್ತಿದ್ದಂತೆ ಜನರೇ ಗಾಬರಿಯಾಗಿದ್ದಾರೆ, ಇನ್ನು ಸಣ್ಣಪುಟ್ಟ ಹಕ್ಕಿಗಳು? ಅದೂ ಅವುಗಳು ತಮ್ಮತಮ್ಮ ಮರಿಗಳೊಡನೆ ಗೂಡಿನೊಳಗೆ ಇರುವಾಗ ಹೇಗಾಗಿರಬೇಡ?
ಈ ಘಟನೆ ಕುರಿತು ಕೇರಳ ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ವರದಿಗಳ ಪ್ರಕಾರ, ಅಧಿಕೃತ ಪರವಾನಿಗೆ ಇಲ್ಲದೆ ಈ ಮರವನ್ನು ಕಡಿಯಲಾಗಿದೆ. ಹಾಗಾಗಿ ಜೆಸಿಬಿ ಚಾಲಕನೊಂದಿಗೆ ವಿಚಾರಣೆ ನಡೆಸಿ ಆತನನ್ನು ಬಂಧಿಸಲಾಗಿದೆ.
ಅರಣ್ಯ ಸಚಿವ ಎ.ಕೆ. ಸಸೀಂದ್ರನ್, ಈ ಘಟನೆ ಅತ್ಯಂತ ಕ್ರೂರ ಎಂದಿದ್ದಾರೆ. ಇಲಾಖೆಯ ಅನುಮತಿಯಿಲ್ಲದೆ ಹೀಗೆ ಮಾಡಿರುವುದು ಅಪರಾಧ. ಅದರಲ್ಲೂ ಪಕ್ಷಿಗಳು ಮತ್ತು ಗೂಡುಗಳಿದ್ದ ಮರವನ್ನು ಇದ್ದಕ್ಕಿದ್ದ ಹಾಗೆ ಹೀಗೆ ಕಡಿಯಬಾರದು. ಮರ ಕಡಿಯಲು ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಾದ ಮಾರ್ಗಸೂಚಿಗಳಿದ್ದು ಅವುಗಳನ್ನು ಪಾಲಿಸಬೇಕಾಗುತ್ತದೆ. ಈ ಘಟನೆಗೆ ಸಂಬಂಧಿಸಿ ಹೆಚ್ಚಿನ ತನಿಖೆ ಮಾಡಲಾಗುವುದು ಎಂದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:00 pm, Fri, 2 September 22