Trending : ಈ ನಾಯಿಯ ಹುಟ್ಟುಹಬ್ಬದ ಥೀಮ್ ಹೇಗಿದೆ?
Birthday Theme : ತಮ್ಮ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನೂ ಥೀಮ್ನಡಿ ಸಂಭ್ರಮಿಸುವ ಟ್ರೆಂಡ್ ಈಗ ಚಾಲ್ತಿಯಲ್ಲಿದೆ. ಪ್ರೀತಿಸುವವರಿಗೆ ಮಕ್ಕಳಾದರೇನು, ಪ್ರಾಣಿಗಳಾದರೇನು? ಎಲ್ಲವೂ ಒಂದೇ ಅಲ್ಲವೆ?
Trending : ನಮ್ಮವು, ನಮ್ಮ ಮಕ್ಕಳು ಎಂದು ನೋಡಿಕೊಳ್ಳುವ ಪೋಷಕರಿಗೆ ಬೆಕ್ಕು, ನಾಯಿಗಳ ಹುಟ್ಟುಹಬ್ಬವನ್ನು ಹೇಗೆ ವಿಶೇಷವಾಗಿ ಆಚರಿಸಬೇಕು ಎನ್ನುವ ಆಲೋಚನೆ ಇರದಿದ್ದೀತೆ? ಈಗಂತೂ ಮುದ್ದು ಬೆಕ್ಕು ನಾಯಿಗಳ ಬರ್ತಡೇ ಆಚರಿಸುವುದು ಅವುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಚಾಲ್ತಿಯಲ್ಲಿರುವ ಟ್ರೆಂಡ್. ಏಕೆಂದರೆ ಲಾಕ್ಡೌನ್ ಶುರುವಾಗುತ್ತಿದ್ದ ಹಾಗೆ ಜೀವನವೇ ಆನ್ಲೈನ್ಮಯ ಆಗಿಹೋಯ್ತು. ಅದರಲ್ಲೂ ನಾಯಿಬೆಕ್ಕುಗಳಿಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೇಜ್ಗಳನ್ನು ನಿರ್ವಹಿಸುವವರ ಸಂಖ್ಯೆಯಂತೂ ಮಿಲಿಯಗಟ್ಟಲೆ ಮೀರಿದೆ. ನಿತ್ಯವೂ ಮಕ್ಕಳಂತೆ ಅವುಗಳನ್ನು ಪೋಷಿಸುವುದು. ಒಂದೊಂದು ವಿಡಿಯೋ ಅನ್ನು ಅಷ್ಟೇ ಶ್ರದ್ಧೆಯಿಂದ ಅಪ್ಲೋಡ್ ಮಾಡುವುದು. ಬೆಳವಣಿಗೆಯನ್ನೆಲ್ಲ ದಾಖಲಿಸುವುದು. ಬದುಕು ಕೊಡುವ ಏರಿಳಿತಗಳನ್ನೆಲ್ಲ ಪ್ರಾಣಿಗಳನ್ನು ಪ್ರೀತಿಸುವುದರ ಮೂಲಕ ಹೀಗೆ ಇಲ್ಲಿ ಸಮದೂಗಿಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಈಗಿಲ್ಲಿ ಕ್ರಿಸ್ಟಲ್ ಎಂಬ ಟ್ವಿಟರಲ್ ಪುಟದಲ್ಲಿ ಇರುವ ಮುದ್ದಿನ ನಾಯಿಗೆ ಎರಡನೇ ಹುಟ್ಟುಹಬ್ಬದ ಸಂತಸ. ಈ ಫೋಟೋಗಳು ವೈರಲ್ ಆಗಿವೆ. ಯಾಕೆ? ನೀವೇ ನೋಡಿ.
My bb boy turned two yesterday?? Two Infinity and Beyond ? pic.twitter.com/UkS3XCfUtZ
ಇದನ್ನೂ ಓದಿ— Crystal (@crystaaals_) August 29, 2022
ನಾಯಿ ಧರಿಸಿರುವ ಆ ಬಟ್ಟೆಯ ವಿನ್ಯಾಸ ಗಮನಿಸಿ. ಬರ್ತಡೇ ಥೀಮ್ ಗಮನಿಸಿ. ಈ ಮೂಲಕ ಅದರ ಪೋಷಕರ ಅಭಿರುಚಿಯನ್ನೂ ಗ್ರಹಿಸಬಹುದು. ಬಝ್ ಲೈಟ್ಇಯರ್ ಕಾಸ್ಟ್ಯೂಮ್ ಅನ್ನು ಅದು ಧರಿಸಿದೆ. ಈ ಪೋಸ್ಟ್, ನಾಯಿಯನ್ನು ಸಾಕಿದ ಇತರರಿಂದ ಸಾಕಷ್ಟು ಲೈಕ್ಸ್, ಕಮೆಂಟ್ಗಳನ್ನು ಪಡೆಯುತ್ತಿದೆ. ಆಗಸ್ಟ್ 29ರಂದು ಮಾಡಿದ ಪೋಸ್ಟ್ ಸುಮಾರು 20,000 ಲೈಕ್ಸ್, 14,000 ರೀಟ್ವೀಟ್ ಪಡೆದಿದೆ.
ನೀವು ನಿಮ್ಮ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ಹೇಗೆ, ಯಾವ ಥೀಮ್ನಲ್ಲಿ ಆಚರಿಸಬೇಕು ಎಂದು ಯೋಚಿಸುತ್ತಿದ್ದೀರಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:18 pm, Sat, 3 September 22