Viral Video : ಲೈವ್​​ನಲ್ಲಿ ನೊಣ ನುಂಗಿದ ಪತ್ರಕರ್ತೆ, ಮುಂದೇನಾಯಿತು?

Journalist swallows a fly : ‘ಈ ದಿನಗಳಲ್ಲಿ ನಮಗೆಲ್ಲರಿಗೂ ನಗು ಬೇಕಿದೆ. ಅದಕ್ಕಾಗಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ನಾನು ಇಂದು ಗಾಳಿಯಲ್ಲಿ ನೊಣವನ್ನು ನುಂಗಿದ್ದೇನೆ’ ಎಂದು ಈಕೆ ನೋಟ್​ ಬರೆದಿದ್ದಾರೆ. ವಿಡಿಯೋ ನೋಡಿ.

Viral Video : ಲೈವ್​​ನಲ್ಲಿ ನೊಣ ನುಂಗಿದ ಪತ್ರಕರ್ತೆ, ಮುಂದೇನಾಯಿತು?
ನೊಣ ನುಂಗಿದದ ಆ್ಯಂಕರ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 03, 2022 | 12:27 PM

Viral Video : ಮೊನ್ನೆಯಷ್ಟೇ ಒಂದು ವೈರಲ್​ ವಿಡಿಯೋ ನೋಡಿದಿರಿ, ಟರ್ಕಿಯ ಕ್ರೀಡಾ ವರದಿಗಾರರೊಬ್ಬರು ವರ್ಕ್​ ಫ್ರಾಂ ಹೋಂ ಮಾಡುತ್ತ ಲೈವ್​ನಲ್ಲಿರಬೇಕಾದರೆ ಬೆಕ್ಕೊಂದು ಅವರ ಬೆನ್ನು ಏರಿದ್ದಲ್ಲದೆ ಅವರ ಹಿಂದೆಲೆಗೆ ಒಂದೇಟು ಹೊಡೆದ ದೃಶ್ಯವನ್ನೂ. ಹೀಗೆ ಆ್ಯಂಕರ್​ಗಳಿಗೆ, ಪತ್ರಕರ್ತರಿಗೆ ಸುದ್ದಿಮನೆಯ ಹೊರಗೂ ಒಳಗೂ ಲೈವ್​ನಲ್ಲಿರಬೇಕಾದರೆ ಅಚಾತುರ್ಯಗಳು ಘಟಿಸುವುದುಂಟು. ಆದರೆ ತಮ್ಮನ್ನು ಟಿವಿ ಮೂಲಕ ಲಕ್ಷಾಂತರ ಜನರು ವೀಕ್ಷಿಸುತ್ತಾರೆ ಎಂಬ ಪ್ರಜ್ಞೆಯೊಂದಿಗೆ ಸಂದರ್ಭವನ್ನು ನಿಭಾಯಿಸುವ ಜಾಣ್ಮೆ ಕೆಲವರಿಗೆ ಇರುತ್ತದೆ, ಕೆಲವರು ನಿಭಾಯಿಸುವಲ್ಲಿ ಅಸಮರ್ಥರಾಗುತ್ತಾರೆ. ಆದರೆ ಇದೀಗ ವೈರಲ್ ಆದ ಈ ವಿಡಿಯೋದಲ್ಲಿ ಪತ್ರಕರ್ತೆ ಫರಾ ನಾಸೀರ್ ಎಲ್ಲೂ ಆಭಾಸವಾಗದಂತೆ ನಿರ್ವಹಿಸಿದ ರೀತಿ ನೆಟ್ಟಿಗರಲ್ಲಿ ಅಚ್ಚರಿಯುಂಟು ಮಾಡಿದೆ.

ಫರಾ ಲೈವ್​ನಲ್ಲಿದ್ದಾಗ ಅಕಸ್ಮಾತ್​ ಆಗಿ ನೊಣವೊಂದನ್ನು ನುಂಗಿದರು. ಆದರೆ ಲೈವ್​ನಲ್ಲಿದ್ದ ಕಾರಣ ಆ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳದೆ ಮಾತು ಮುಂದುವರಿಸಿದರು. ಪಾಕಿಸ್ತಾನದಲ್ಲಿ ಮಳೆಯು ಹೇಗೆ ಹಾನಿಯನ್ನುಂಟುಮಾಡುತ್ತಿದೆ ಎಂದು ಲೈವ್​ ರಿಪೋರ್ಟ್​ ಕೊಡುತ್ತಿರುವಾಗ ಈ ಘಟನೆ ನಡೆಯಿತು. ‘ಪಾಕಿಸ್ತಾನವು ಇಂಥ ಮಳೆಯನ್ನು ಎಂದೂ ನೋಡಿಲ್ಲ. ಎಂಟು ವಾರಗಳಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇದೆ. ಕಾರಣ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ’ ಎಂಬ ಸುದ್ದಿಯ ಸುತ್ತ ನಾಸರ್​ ವಿವರಿಸುತ್ತಿದ್ದರು. ಆಗಲೇ ನೊಣವೊಂದು ಅವರ ಬಾಯಿಯನ್ನು ಹೊಕ್ಕಿತು! ಆದರೆ ಅದರಿಂದ ಕಂಗೆಡದ ಆಕೆ ಅದನ್ನು ನುಂಗಿಯೇಬಿಟ್ಟರು. ಮತ್ತು ಲೈವ್​ ರಿಪೋರ್ಟ್​ ಕೊಡುವುದನ್ನು ಮುಂದುವರಿಸಿದರು.

ನಂತರ ಅವರು ಟ್ವಿಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡು, ‘ಈ ದಿನಗಳಲ್ಲಿ ನಮಗೆಲ್ಲರಿಗೂ ನಗು ಬೇಕಿದೆ. ಅದಕ್ಕಾಗಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ನಾನು ಇಂದು ನೊಣವನ್ನು ನುಂಗಿದ್ದೇನೆ.’ ಎಂದು ಈಕೆ ನೋಟ್​ ಬರೆದಿದ್ದಾರೆ.

ನೆಟ್ಟಿಗರು, ಸಹೋದ್ಯೋಗಿಗಳು, ಕೆನಡಾದ ಪತ್ರಕರ್ತರು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ಅವರನ್ನು  ಪ್ರಶಂಸಿಸಿದ್ದಾರೆ.

‘ಇದು ವೃತ್ತಿಪರತೆ, ಸಂದರ್ಭವನ್ನು ಚೆನ್ನಾಗಿ ನಿಭಾಯಿಸಿದ್ದೀರಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಮಗೆಲ್ಲರಿಗೂ ನಗು ಹಂಚಿದ್ದಕ್ಕಾಗಿ ಧನ್ಯವಾದ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:06 am, Sat, 3 September 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ