Viral Video : ಸಾಕುಪ್ರಾಣಿಗಳ ಪೋಷಕರು ತಮ್ಮ ಮಕ್ಕಳಿಗೆ, ಅಂದರೆ ಬೆಕ್ಕು ನಾಯಿಗಳಿಗೆ ಆರಾಮದಾಯಕವಾಗಿರುವ ಮತ್ತು ಆಕರ್ಷಕವಾಗಿರುವ ಕೊಠಡಿಗಳನ್ನು ನಿರ್ಮಿಸಿರುವ ವಿಡಿಯೋಗಳನ್ನು ನೀವು ನೋಡಿರುತ್ತೀರಿ ಆಥವಾ ನೀವೂ ಸಾಕುಪ್ರಾಣಿಗಳನ್ನು ಹೊಂದಿದ್ದರೆ ಅವುಗಳ ವಾಸಕ್ಕೆ ನಿಮ್ಮದೇ ಆದ ಕಲ್ಪನೆಯಲ್ಲಿ ಪುಟ್ಟ ಮನೆಗಳನ್ನು ನಿರ್ಮಿಸಿರುತ್ತೀರಿ. ಇಲ್ಲಿರುವ ಈ ಬೆಕ್ಕಿನ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದರೆ ಮತ್ತೇನು ಮಾಡಬಹುದು ನಿಮ್ಮ ಸಾಕುಪ್ರಾಣಿಗಳಿಗಾಗಿ ಎನ್ನುವ ಆಲೋಚನೆ ಬರುವ ಸಾಧ್ಯತೆ ಇದೆ. ಈ ಪುಟ್ಟ ವಿಡಿಯೋ ಕೆಲಸವೇ ಸೆಕೆಂಡುಗಳಲ್ಲಿ ಮುಗಿದುಬಿಡುತ್ತದೆ. ಮತ್ತೆ ಮತ್ತೆ ರೀಪ್ಲೇ ಮಾಡಿ ಇಲ್ಲಿ ಬೆಕ್ಕಿಗಾಗಿ ಅಲಂಕರಿಸಿರುವ ಬಾಗಿಲನ್ನು ನೀವು ಮತ್ತೆ ಮತ್ತೆ ನೋಡಲು ಇಚ್ಛಿಸುತ್ತೀರಿ. ನೋಡಿ ಹೇಗಿದೆ ಈ ಮಿನಿಡೋರ್!
View this post on Instagram
ಕಾರ್ಟೂನ್ ನೋಡಿದಂತೆ ಭಾಸವಾಗುತ್ತದೆಯಲ್ಲ… ಇಲ್ಲಿರುವ ಗೋಡೆ, ಕಿಟಕಿ, ಚಿಮಣಿ, ಬಾಲ್ಕನಿ ಮತ್ತು ಮೇಲ್ಚಾವಣಿಯನ್ನು ವಿನ್ಯಾಸಗೊಳಿಸಿದ ರೀತಿಯನ್ನು ನೋಡಿದರೆ? ಈ ವೀಡಿಯೊವನ್ನು ಆಗಸ್ಟ್ 17 ರಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಎರಡು ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಇದು ಪಡೆದಿದೆ. ವೈರಲ್ ಆಗಿರುವ ಈ ವಿಡಿಯೋಕ್ಕೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದಾರೆ.
ಒಬ್ಬರು, ‘ಇದು ತುಂಬಾ ಮುದ್ದಾಗಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ಎಂತಹ ಸುಂದರ ಮನೆ. ಬಹಳ ಮೋಹಕವಾಗಿದೆ’ ಎಂದಿದ್ದಾರೆ. ಇಂಥ ಮುದ್ದಾದ ವಿಡಿಯೋ ನಿಮಗೂ ಇಷ್ಟವಾಗಿರಬೇಕಲ್ಲ? ನಿಮ್ಮನೆ ಬೆಕ್ಕು ನಾಯಿಯನ್ನು ಖುಷಿಪಡಿಸಲು ನೀವೇನು ಮಾಡುತ್ತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ