Viral Video : ನನ್ನ ನಾಯಿಗೂ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶ ಕೊಡಿ
Specially abled girl : ವಿಶೇಷ ಬಾಲಕಿಯೊಬ್ಬಳು ಶ್ವಾನಪ್ರದರ್ಶನಕ್ಕೆ ಬಂದಿದ್ದಳು. ಅವಳ ನಾಯಿಯನ್ನು ನೋಡಿದ ತೀರ್ಪುಗಾರರು ಮುಂದೆ ಏನು ಮಾಡಿದರು? 5 ಮಿಲಿಯನ್ ನೆಟ್ಟಿಗರು ಬಹುವಾಗಿ ಮೆಚ್ಚಿದ ವಿಡಿಯೋ ಇದು.
Viral Video : ಇಲ್ಲೊಂದು ಶ್ವಾನಪ್ರದರ್ಶನ ನಡೆದಿದೆ. ಪುಟ್ಟಹುಡುಗಿಯೊಬ್ಬಳು ತನ್ನ ನಾಯಿಯನ್ನೂ ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದಾಳೆ. ಅಲ್ಲಿರುವ ತೀರ್ಪುಗಾರರು ಅವಳ ನಾಯಿಯನ್ನು ನೋಡಿ ಅಚ್ಚರಿಪಡುತ್ತಾರೆ. ಅದನ್ನು ಮುಟ್ಟಿ ಮಾತನಾಡಿಸಲೆತ್ನಿಸುತ್ತಾರೆ. ಆದರೆ ಅದು ಹೇಗೆ ಪ್ರತಿಕ್ರಿಯಿಸಲು ಸಾಧ್ಯ? ಅದು ಆಟಿಕೆನಾಯಿ. ಯಾರಾದರೂ ಶ್ವಾನಪ್ರದರ್ಶನಕ್ಕೆ ಆಟಿಕೆನಾಯಿಯನ್ನು ತರುತ್ತಾರಾ? ಆದರೆ ಈ ಹುಡುಗಿ ತಂದಿದ್ದಳು. ಕಾರಣ ಅದು ಆಕೆಯ ನಾಯಿ. ಆಕೆಯ ದೃಷ್ಟಿಯಲ್ಲಿ ಅದೇ ನಾಯಿ. ಹೌದು, ಆಕೆ ವಿಶೇಷ ಬಾಲಕಿ, ಆಟಿಸ್ಟಿಕ್ ಚೈಲ್ಡ್. ತೀರ್ಪುಗಾರರು ಈ ಸನ್ನಿವೇಶವನ್ನು ಹೃದಯಸ್ಪರ್ಶಿಯಾಗಿ ನಿಭಾಯಿದ್ದಾರೆ. ನಾಯಿಯನ್ನು ಪ್ರದರ್ಶಿಸಲು ಆಕೆಗೆ ಅವಕಾಶ ಕೊಟ್ಟಿದ್ದಾರೆ. ನಂತರ ಅಪ್ಪಿಕೊಂಡು ಆಪ್ತತೆ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ನೆಟ್ಟಿಗರ ಮನ ಗೆದ್ದಿದೆ. ಐದು ಮಿಲಿಯನ್ ವೀಕ್ಷಕರ ಮನಕರಗಿಸಿದೆ.
This little girl has autism. She brought her stuffed-puppy to the dog show.
One of the judges stopped, walked over to her, and asked if she wanted to show her dog as well.
This is what happened.. pic.twitter.com/15clqgtx18
— Buitengebieden (@buitengebieden) September 1, 2022
ವಿಶೇಷ ಮಗುವಿಗೆ ಹೀಗೆ ಪ್ರೋತ್ಸಾಹಿಸಿದ್ದನ್ನು ನೋಡಿ ನೆರೆದಿದ್ದ ಅಲ್ಲಿಯವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮನಸಾರೆ ಕೊಂಡಾಡಿದ್ದಾರೆ. ಸಾವಿರಾರು ಪ್ರತಿಕ್ರಿಯೆಗಳ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.
ವಿಶೇಷ ಮಕ್ಕಳಿಗೆ ಅವರದೇ ಆದ ರೀತಿಯಲ್ಲಿ ವಿಶೇಷ ಪ್ರಜ್ಞೆಯೂ ಇರುತ್ತದೆ. ಜಗತ್ತಿನ ವೇಗಕ್ಕೆ ಅವರು ಹೆಜ್ಜೆ ಹಾಕಲಾರರು ನಿಜ. ಅವರ ವಾಸ್ತವಲೋಕ ಇತರರಿಗಿಂತ ಬೇರೆಯೇ ಇರುತ್ತದೆ. ಇಂಥ ಮಕ್ಕಳನ್ನು ಪಡೆದ ತಂದೆ-ತಾಯಿಯರು ಹಗಲೂ ರಾತ್ರಿ ಶ್ರಮಿಸಬೇಕಾದಂಥ ಪರಿಸ್ಥಿತಿ ಇರುತ್ತದೆ. ಆದರೂ ಇದ್ದುದರಲ್ಲಿಯೇ ನಗುವುದು, ನಗಿಸುವುದು ತಮ್ಮ ಮಕ್ಕಳ ನಿಧಾನ ಬೆಳವಣಿಗೆಯಲ್ಲಿ ಒಪ್ಪಿಕೊಂಡು ಖುಷಿಪಡುವುದು ಇಂಥ ತಂದೆತಾಯಿಗಳಿಗೆ ಅನಿವಾರ್ಯ. ಹೀಗೆ ಈ ಹುಡುಗಿ ಭಾಗವಹಿಸಿದ್ದು ಆಕೆಯ ಅಪ್ಪ ಅಮ್ಮನಿಗೆ ಅದೆಷ್ಟು ಖುಷಿ ಕೊಟ್ಟಿರಬೇಡ? ಸ್ವತಃ ಆ ಹುಡುಗಿಯೂ ಸ್ವಲ್ಪಾದರೂ ಆತ್ಮವಿಶ್ವಾಸವನ್ನು ಅನುಭವಿಸಿರಲು ಸಾಕು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:34 pm, Sat, 3 September 22