Viral Video : ನಾವುಗಳು ನೆಲಕ್ಕೆ ಕುಳಿತುಕೊಳ್ಳಬೇಕಾ? ಸಾಧ್ಯವಿಲ್ಲ ಸಾಧ್ಯವೇ ಇಲ್ಲ!

Dog Camping : ಒಮ್ಮೆ ಆರಾಮದಾಯಕ ಜೀವನಶೈಲಿ ಮನುಷ್ಯನಿಗೆ ಅಭ್ಯಾಸವಾದರೆ ಮುಗಿಯಿತು ಎನ್ನುವ ಮಾತು ಈಗ ಈ ನಾಯಿಗಳಿಗೂ ಅನ್ವಯಿಸುತ್ತದೆ. 56,000 ಜನರು ಇಷ್ಟಪಟ್ಟ ಈ ವಿಡಿಯೋದಲ್ಲಿ ಏನಿದೆ ವಿಶೇಷ? ನೋಡಿ.

Viral Video : ನಾವುಗಳು ನೆಲಕ್ಕೆ ಕುಳಿತುಕೊಳ್ಳಬೇಕಾ? ಸಾಧ್ಯವಿಲ್ಲ ಸಾಧ್ಯವೇ ಇಲ್ಲ!
ಸಾಧ್ಯವೇ ಇಲ್ಲ ನೆಲಕ್ಕೆ ಕುಳಿತುಕೊಳ್ಳೋದು!
Follow us
TV9 Web
| Updated By: ಶ್ರೀದೇವಿ ಕಳಸದ

Updated on: Sep 03, 2022 | 1:41 PM

Viral video :  ಕ್ಯಾಂಪಿಂಗ್​ ನೀಡುವ ಮುದ, ತಾಜಾತನಕ್ಕೆ ಮನಸೋಲದವರು ಯಾರಿದ್ದಾರೆ? ನಮಗೆ ಹೇಗೆ ಬೇಕೋ ಹಾಗೆ ನಮ್ಮ ಸಾಕುಪ್ರಾಣಿಗಳಿಗೂ ಆಗಾಗ ಕ್ಯಾಂಪಿಂಗ್ ಬೇಕೆನ್ನಿಸುತ್ತದೆ. ಪ್ರಾಣಿ ಪೋಷಕರು ತಮ್ಮ ಪ್ರಾಣಿಗಳನ್ನು ತಮ್ಮೊಂದಿಗೆ ಕ್ಯಾಂಪಿಗ್​ಗೆ ಕರೆದುಕೊಂಡು ಹೋಗುವ ಅಭ್ಯಾಸವಿದೆ. ಅಲ್ಲಿ ಅವು ಹೇಗೆ ವರ್ತಿಸುತ್ತವೆ ಎನ್ನುವುದು ಮಾತ್ರ ಕರೆದೊಯ್ದು ಅನುಭವವಿರುವವರಿಗೇ ಗೊತ್ತು. ಮನೆಗಳಲ್ಲಿ ತೀರಾ ಕಂಫರ್ಟ್​ ಝೋನ್​ನಲ್ಲಿ ಬೆಳೆದ ನಾಯಿಗಳು ಇಲ್ಲಿಯೂ ಅದನ್ನೇ ಬಯಸುತ್ತವೆಯಾ ಅಥವಾ ಸದ್ಯ ನಾಲ್ಕು ಗೋಡೆಗಳಾಚೆ ಕರೆದುಕೊಂಡು ಬಂದರಲ್ಲ ಅಂತ ಮಣ್ಣಿನಲ್ಲಿ ಬಿದ್ದು ಉರುಳಾಡುವುದು, ಕಾಯ್ದ ಕಲ್ಲುಬಂಡೆಗಳ ಮೇಲೆ ಮೈ ಹರವಿಕೊಂಡು ಮಲಗುವುದನ್ನೆಲ್ಲ ಮಾಡುತ್ತವಾ? ಇಲ್ಲಿರುವ ಈ ನಾಯಿಗಳು ಮಾತ್ರ ನೆಲದ ಮೇಲೆ ಸುತರಾಂ ಕುಳಿತುಕೊಳ್ಳಲಾರೆವು ಎಂದು ಪಣತೊಟ್ಟಂತಿವೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಶೇನ್ ಬ್ರಾಕ್ ಎಂಬುವವರ ಇನ್​​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್​ ಇನ್ನೊಂದು ಪುಟದಲ್ಲಿ ಮರುಹಂಚಿಕೆಯಾದಾಗ ಇದು ವೈರಲ್​ ಆಗಿದೆ.

‘ನಾವು ನಮ್ಮ ನಾಯಿಗಳನ್ನು ಕ್ಯಾಂಪಿಂಗ್‌ಗೆ ಕರೆದೊಯ್ದಿದ್ದೇವೆ. ಅವುಗಳು ನೆಲಕ್ಕೆ ಕುಳಿತುಕೊಳ್ಳಲು ನಿರಾಕರಿಸಿದವು’ ಎಂಬ ಟೆಕ್ಸ್ಟ್​ನೊಂದಿಗೆ ಈ ವಿಡಿಯೋ ತೆರೆದುಕೊಳ್ಳುತ್ತದೆ. ಒಂದೆರಡು ಟೆಂಟ್​​ನ ಹಾಸಿಗೆಯೊಳಗೆ ಕುಳಿತಿವೆ. ಇನ್ನೆರಡು ಹೊರಗೆ ರಜಾಯಿ ಮೇಲೆ ಕುಳಿತಿವೆ. ಉಳಿದವೆರಡು ಕುರ್ಚಿಗಳ ಮೇಲೆ ಕುಳಿತಿವೆ.

ನಿನ್ನೆ ಪೋಸ್ಟ್ ಮಾಡಲಾದ ಈ ವಿಡಿಯೋ 9.5 ಲಕ್ಷಕ್ಕೂ ವೀಕ್ಷಣೆಗೆ ಒಳಗಾಗಿದೆ. ಸುಮಾರು 56,000  ಲೈಕ್‌ಗಳನ್ನು ಸಂಗ್ರಹಿಸಿದೆ. ವಿವಿಧ ರೀತಿಯಲ್ಲಿ ಅನೇಕರು ಕಮೆಂಟ್ ಮಾಡಿದ್ದಾರೆ.

ಒಮ್ಮೆ ಆರಾಮದಾಯಕ ಜೀವನಶೈಲಿ ಮನುಷ್ಯನಿಗೆ ಅಭ್ಯಾಸವಾದರೆ ಮುಗಿಯಿತು ಎನ್ನುವ ಮಾತು ಈಗ ಈ ನಾಯಿಗಳಿಗೂ ಅನ್ವಯಿಸುತ್ತದೆ ಅಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್