Viral Video : ನೀರಿನಾಳದೊಳಗೆ ಈ ಯುವತಿಯ ಉಲ್ಟಾ ಕ್ಯಾಟ್ವಾಕ್!
Underwater : ಈ ಯುವತಿ ಈಜಿನಲ್ಲಿ ನಾಲ್ಕು ಬಾರಿ ವಿಶ್ವಚಾಂಪಿಯನ್ಶಿಪ್ ಗಳಿಸಿದ್ದಾರೆ. ಈಗಿಲ್ಲಿ ನೀರಿನೊಳಗೆ ಎಷ್ಟು ಲೀಲಾಜಾಲವಾಗಿ ಕ್ಯಾಟ್ವಾಕ್ ಮಾಡಿದ್ದಾರೆ ನೋಡಿ.
Viral Video : ನಾವು ಟಿವಿಯಲ್ಲಿ ನೋಡುವ ಕ್ಯಾಟ್ವಾಕ್ನ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ ಎಂದಮೇಲೆ ನೀರಿನಲ್ಲಿ ನಡೆಯುವುದರ ಹಿಂದೆ ಎಷ್ಟು ಕಠಿಣ ಶ್ರಮ ಇರಬೇಡ? ಅದೂ ಲೀಲಾಜಾಲವಾಗಿ ನರ್ತಕಿಯಂತೆ ಹೆಜ್ಜೆ ಇಟ್ಟು ನಡೆಯುವುದು! ಯುವತಿಯೊಬ್ಬಳು ನೀರಿನಲ್ಲಿ ಕ್ಯಾಟ್ವಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ಯುವತಿಯ ಹೆಸರು ಅಮೆರಿಕದ ಕ್ರಿಸ್ಟಿನಾ ಮಕುಶೆಂಕೋ. ನೀವು ಸರಿಯಾದ ಆ್ಯಂಗಲ್ನಲ್ಲಿ ನೋಡಲು ನಿಮ್ಮ ಫೋನ್ ಉಲ್ಟಾ ಹಿಡಿದು ನೋಡಬಹುದು ಎಂಬ ನೋಟ್ ಈ ವಿಡಿಯೋದಲ್ಲಿದೆ. ಏಕೆಂದರೆ ನೀರಿನಾಳದಲ್ಲಿ ತಲೆಕೆಳಗಾಗಿ ಉಲ್ಟಾ ವಾಕ್ ಮಾಡಿದ ದೃಶ್ಯ ಇದರಲ್ಲಿದೆ!
ಮಕುಶೆಂಕೊ ಹೀಲ್ಸ್ ಚಪ್ಪಲಿ ಧರಿಸಿ ನಡೆಯುತ್ತ ಬರುತ್ತಾರೆ. ಪೂಲ್ನ ಮೇಲ್ಭಾಗದಲ್ಲಿರುವ ಬ್ಯಾಗ್ ಅನ್ನು ಎತ್ತಿಕೊಂಡು 180 ಡಿಗ್ರಿಗಳಷ್ಟು ತನ್ನನ್ನು ತಾನೇ ತಿರುಗಿಸಿಕೊಳ್ಳುತ್ತಾರೆ. ವೃತ್ತಿಪರ ಈಜುಗಾರರಂತೆ ಈ ಫ್ರೇಮ್ನಿಂದ ಹೊರಬರುತ್ತಾರೆ. ಈ ವಿಡಿಯೋ ಜುಲೈನಲ್ಲಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಆಗಿದೆ. ಆರು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಈ ಪುಟ ಹೊಂದಿದೆ. ಈಕೆ ಸ್ವಿಮ್ಮಿಂಗ್‌ನಲ್ಲಿ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಈ ಕ್ಲಿಪ್ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ.
View this post on Instagram
‘ತಲೆಕೆಳಗಾದ ನಡಿಗೆ ತುಂಬಾ ಚೆನ್ನಾಗಿತ್ತು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಇದೆಲ್ಲ ಹೇಗೆ ಮಾಡಿದಿರಿ? ಅಚ್ಚರಿಗೊಳಗಾಗಿದ್ದೇನೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪರಿಶ್ರಮ ಮತ್ತು ಫೋಕಸ್ ಇಲ್ಲದೆ ಯಾವುದು ಸಾಧ್ಯವಿದೆ? ಅದಕ್ಕಿಂತ ಮೊದಲು ನಮ್ಮ ಆಸಕ್ತಿ ಏನು ಎಂದು ಗುರುತಿಸಿಕೊಳ್ಳುವುದು ಮುಖ್ಯ!
ಮತ್ತಷ್ಟು ವೈರಲ್ ಆದ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:18 pm, Sat, 3 September 22