Horn-Like Structure: ಮಗುವಿಗೆ ಕೊಂಬಿನಂತೆ ಕಾಣುವ ಕಾಲು, ಇದು ವೈದ್ಯಲೋಕಕ್ಕೆ ವಿಚಿತ್ರ ವಿಚಾರ
ಮಗುವೊಂದು ಕಾಲಿಗೆ ಬದಲಾಗಿ ಕೊಂಬಿನಂತಿರುವ ರಚನೆಯೊಂದಿಗೆ ಜನಿಸಿದೆ. ಮಧ್ಯ ಭಾರತದ ಶಿವಪುರಿ ಜಿಲ್ಲೆಯ ಮನ್ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಮಗುವೊಂದು ಕಾಲಿಗೆ ಬದಲಾಗಿ ಕೊಂಬಿನಂತಿರುವ ರಚನೆಯೊಂದಿಗೆ ಜನಿಸಿದೆ. ಮಧ್ಯ ಭಾರತದ ಶಿವಪುರಿ ಜಿಲ್ಲೆಯ ಮನ್ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ವೈದ್ಯರ ಪ್ರಕಾರ, ನವಜಾತ ಶಿಶುವು ಬೆಳವಣಿಗೆ ಹೊಂದಿಲ್ಲ ಮತ್ತು ಕೇವಲ 1.04 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ. ಇದು ನವಜಾತ ಶಿಶುಗಳ ಸಾಮಾನ್ಯ ತೂಕಕ್ಕಿಂತ ಸಾಕಷ್ಟು ಕಡಿಮೆಯಾಗಿದೆ. ಈ ಜನನವು ವೈದ್ಯಕೀಯವಾಗಿ ಅಪರೂಪವಾಗಿದ್ದರೂ ಸಹ, ಮಗು ಸ್ಥಿರ ಸ್ಥಿತಿಯಲ್ಲಿದೆ.
ಆಸ್ಪತ್ರೆಯ ವಿಶೇಷ ನವಜಾತ ಆರೈಕೆ ಘಟಕದಲ್ಲಿ (SNCU) ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಮಗು ಇದೆ. ಅಪರೂಪದ ವಿರೂಪತೆಯ ಪರಿಣಾಮವಾಗಿ ಮಗುವಿಗೆ ಯಾವುದೇ ಪ್ರತಿಕೂಲ ಆರೋಗ್ಯ ಪರಿಸ್ಥಿತಿಗಳಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಎರಡು ತಲೆ ಮತ್ತು ಮೂರು ಕೈಗಳೊಂದಿಗೆ ಜನಿಸಿದ ಮಗು
ವೈದ್ಯಲೋಕಕ್ಕೆ ಇದು ಅಪರೂಪದ ಘಟನೆಗಳು ಅಲ್ಲ ಇದಕ್ಕಿಂತ ಮೊದಲು ಅನೇಕ ಇಂತಹ ವಿಚಾರಗಳು ನಡೆದಿದೆ. ಕೆಲವು ತಿಂಗಳ ಹಿಂದೆ ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದರು. ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಗು ಎರಡು ತಲೆ ಮತ್ತು ಮೂರು ಕೈಗಳೊಂದಿಗೆ ಜನಿಸಿತು, ಮೂರನೇ ಕೈ ಎರಡು ಮುಖಗಳ ನಡುವೆ ಹಿಂಭಾಗದಲ್ಲಿದೆ. ಮಕ್ಕಳ ಶಸ್ತ್ರಚಿಕಿತ್ಸಕ ಡಾ ಬ್ರಿಜೇಶ್ ಲಹೋಟಿ ಅವರ ಪ್ರಕಾರ, ಈ ಸ್ಥಿತಿಯನ್ನು ಡೈಸೆಫಾಲಿಕ್ ಪ್ಯಾರಾಪಾಗಸ್ ಎಂದು ಕರೆಯಲಾಗುತ್ತದೆ. ಇದು ಒಂದು ಮುಂಡದ ಮೇಲೆ ಎರಡು ತಲೆಗಳು ಅಕ್ಕಪಕ್ಕದಲ್ಲಿ ಭಾಗಶಃ ಅವಳಿಯಾಗುವ ಅಪರೂಪದ ರೂಪವಾಗಿದೆ.
ಇಂತಹ ಅನೇಕ ಘಟನೆಗಳು ಜಗತ್ತಿನಲ್ಲಿ ನಡೆಯುತ್ತಿದೆ, ವೈದ್ಯಕೀಯ ಲೋಕಕ್ಕೆ ಒಂದೊಂದು ಸವಾಲು ಮತ್ತು ಅನೇಕ ಹೊಸ ಹೊಸ ವಿಚಾರಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ಇಂದು ಪ್ರಕೃತಿಕ ಮತ್ತು ವಾತಾವರಣದ ಕೆಟ್ಟ ಪರಿಣಾಮದಿಂದ ಇಂತಹ ವಿಚಾರಗಳು ಹುಟ್ಟುಕೊಂಡಿದೆ ಎಂದು ಹೇಳಲಾಗಿದೆ.
Published On - 12:37 pm, Fri, 2 September 22