AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಜೆಮ್​ಶೆಡ್​ಪುರದಲ್ಲಿ ಹೀಗೊಬ್ಬ ‘ಆಧಾರ ಕಾರ್ಡ್​ ಗಣಪ್ಪ’

Aadhar Card Ganesh : ಶ್ರೀ ಗಣೇಶ, S/o ಮಹದೇವ, ಕೈಲಾಸ ಪರ್ವತ, ಮೇಲ್​ಮಹಡಿ ಹತ್ತಿರ, ಮಾನಸ ಸರೋವರ, ಕೈಲಾಸ ಪಿನ್‌ಕೋಡ್- 000001. ಮತ್ತು ಹುಟ್ಟಿದ ವರ್ಷ 01/01/600CE.

Viral : ಜೆಮ್​ಶೆಡ್​ಪುರದಲ್ಲಿ ಹೀಗೊಬ್ಬ ‘ಆಧಾರ ಕಾರ್ಡ್​ ಗಣಪ್ಪ’
ಆಧಾರ ಕಾರ್ಡ್​ ಗಣಪ್ಪ
TV9 Web
| Edited By: ಶ್ರೀದೇವಿ ಕಳಸದ|

Updated on:Sep 02, 2022 | 11:34 AM

Share

Viral : ಬಗೆಬಗೆಯ ಥೀಮ್​ನಡಿ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸಿ ಪೂಜಿಸುವ ಪರಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವಂಥದ್ದು ಗೊತ್ತೇ ಇದೆ. ಜೆಮ್​ಶೆಡ್​ಪುರದಲ್ಲಿರುವ ಈ ಗಣೇಶ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಾನೆ. ಕಾರಣ, ಆಧಾರ ಕಾರ್ಡ್​ ಮಾದರಿಯಲ್ಲಿ ಮಂಟಪದ ವಿನ್ಯಾಸದಲ್ಲಿ ಇವನನ್ನು ಕೂರಿಸಿದ್ದಾರೆ. 6ನೇ ಶತಮಾನದಲ್ಲಿ ಕೈಲಾಸದಲ್ಲಿರುವ ಗಣೇಶನ ವಿಳಾಸ ಮತ್ತು ಅವನ ಜನ್ಮದಿನಾಂಕವನ್ನು ಆಧಾರ್ ಕಾರ್ಡಿನ ಮಾದರಿಯಲ್ಲಿ ನಮೂದಿಸಿದ್ದಾರೆ. ಫೋಟೋ ಸ್ಥಳದಲ್ಲಿ ಗಣೇಶನ ವಿಗ್ರಹ ಇರಿಸಿದ್ದಾರೆ. ಪಕ್ಕದಲ್ಲಿರುವ ಬಾರ್ ಕೋಡ್​ ಸ್ಕ್ಯಾನ್ ಮಾಡಿದಾಗ ಗಣೇಶನ ಚಿತ್ರಗಳಿರುವ ಗೂಗಲ್​ ಲಿಂಕ್​ ಪರದೆ ತೆರೆದುಕೊಳ್ಳುತ್ತದೆ. ಅದರ ಮೇಲೆ ನಮೂದಿಸಲಾದ ವಿಳಾಸ ಹೀಗಿದೆ. ಶ್ರೀ ಗಣೇಶ, S/o ಮಹದೇವ, ಕೈಲಾಸ ಪರ್ವತ, ಮೇಲ್​ಮಹಡಿ ಹತ್ತಿರ, ಮಾನಸ ಸರೋವರ, ಕೈಲಾಸ ಪಿನ್‌ಕೋಡ್- 000001. ಮತ್ತು ಹುಟ್ಟಿದ ವರ್ಷ 01/01/600CE.

ಈ ವಿನ್ಯಾಸದ ಆಯೋಜಕ ಸರವ್ ಕುಮಾರ್, ‘ಕೊಲ್ಕೊತ್ತಾದಲ್ಲಿ ಫೇಸ್‌ಬುಕ್ ಥೀಮ್​ನಲ್ಲಿ ಗಣೇಶನನ್ನು ಕೂರಿಸಿದ್ದರು. ಅಲ್ಲಿಗೆ ಭೇಟಿ ನೀಡಿದ ನಂತರ ಆಧಾರ ಕಾರ್ಡ್​ ಥೀಮ್​ನಲ್ಲಿ ಯಾಕೆ ಮಾಡಬಾರದು? ಎಂಬ ಆಲೋಚನೆ ಬಂದಿತು. ದೇವರೂ ಆಧಾರ್ ಕಾರ್ಡ್ ಹೊಂದಲು ಸಾಧ್ಯವಾಗಿದೆಯೆಂದರೆ ನಮಗೂ ಸಾಧ್ಯವಾಗುತ್ತದೆ ಎಂದು ಜನಕ್ಕೆ ಮನವರಿಕೆ ಆಗಬೇಕು. ಈ ಮೂಲಕ ಎಲ್ಲರೂ ಬೇಗ ಆಧಾರ ಕಾರ್ಡ್​ ಪಡೆದುಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರಲು ಪ್ರಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ.

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:26 am, Fri, 2 September 22

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?