Suzuki: ಜಪಾನ್​ನ ಆ ಪಟ್ಟಣದಲ್ಲಿ ವಾಸಿಸುವ ಜನರಿಗೆ ಸರ್ಕಾರ ಕೊಡುತ್ತದೆ ಈ ಗ್ಯಾರಂಟಿ ಉಡುಗೊರೆ, ಒಂದು ಷರತ್ತಿನ ಮೇಲೆ!

|

Updated on: Dec 10, 2023 | 12:07 PM

ವರದಿಗಳ ಪ್ರಕಾರ, ಕೈನಾನ್ ಪಟ್ಟಣವನ್ನು ಮತ್ತೆ ಜನನಿಬಿಡ ಮಾಡಲು ಈ ಕಾರ್ಯ ಯೋಜನೆಯನ್ನು 2021 ರಲ್ಲಿ ಪ್ರಾರಂಭಿಸಲಾಗಿದೆ. ಆದರೆ ಈ ಅಭಿಯಾನದಲ್ಲಿ, ಸುಜುಕಿ ಮನೆತನದ ಹೆಸರನ್ನು ಹೊಂದಿರುವ ಒಬ್ಬೇ ಒಬ್ಬ ವ್ಯಕ್ತಿಯನ್ನು ಆಕರ್ಷಿಸಲು ನಗರವು ವಿಫಲವಾಗಿದೆಯಂತೆ!

Suzuki: ಜಪಾನ್​ನ ಆ ಪಟ್ಟಣದಲ್ಲಿ ವಾಸಿಸುವ ಜನರಿಗೆ ಸರ್ಕಾರ ಕೊಡುತ್ತದೆ ಈ ಗ್ಯಾರಂಟಿ ಉಡುಗೊರೆ, ಒಂದು ಷರತ್ತಿನ ಮೇಲೆ!
ಈ ಟೌನ್​ನಲ್ಲಿ ವಾಸಿಸುವ ಜನರಿಗೆ ಸರ್ಕಾರ ಗ್ಯಾರಂಟಿ ಉಡುಗೊರೆ ಕೊಡುತ್ತದೆ
Follow us on

ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಜನರಿದ್ದಾರೆ. ಅವರು ತಮ್ಮ ಆಯ್ಕೆಯ ಸ್ಥಳಗಳಲ್ಲಿ ವಾಸಿಸಲು ಬಯಸುತ್ತಾರೆ. ಈ ರೀತಿ ಬದುಕುವ ಕನಸು ಕಾಣುವ ಅನೇಕ ಸ್ಥಳಗಳು ಭೂಮಿಯ ಮೇಲೆ ಅಸಂಖ್ಯಾತವಿವೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ವಾಸ್ತವವಾಗಿ ಈ ಸ್ಥಳಗಳು ಸ್ವರ್ಗಕ್ಕಿಂತ ಕಡಿಮೆಯೇನೂ ಅಲ್ಲ. ಅದೇ ಸಮಯದಲ್ಲಿ, ಅವು ತುಂಬಾ ದುಬಾರಿ ಮತ್ತು ಅಲ್ಲಿ ವಾಸಿಸಲು ಸಾಮಾನ್ಯ ಜನರಿಗೆ (Residents) ಸಾಧ್ಯವಾಗುವುದಿಲ್ಲ. ಜಪಾನ್‌ನಲ್ಲಿಯೂ (Japan) ಅಂತಹ ಒಂದು ದುಬಾರಿ ಸ್ಥಳವಿದೆ. ಈ ಸ್ಥಳವು ವಾಸ್ತವವಾಗಿ ಪಟ್ಟಣ ಪ್ರದೇಶವಾಗಿದೆ. ಇಲ್ಲಿ ಜನಸಂಖ್ಯೆಯು (Population) ಬಹಳ ವೇಗವಾಗಿ ಕಡಿಮೆಯಾಗುತ್ತಿದೆ. ಈ ಕಾರಣದಿಂದಾಗಿ, ಈ ನಗರಕ್ಕೆ ಬಂದು ನೆಲೆಸುವಂತೆ ಸರ್ಕಾರವು ಜನರಿಗೆ ಮನವಿ ಮಾಡುತ್ತದೆ. ಈ ನಗರಕ್ಕೆ ಬಂದು ವಾಸಿಸುವವರಿಗೆ ಲಕ್ಷಾಂತರ ರೂಪಾಯಿಗಳನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ.

ವಾಸ್ತವವಾಗಿ, ಜಪಾನ್‌ನ ವಾಕಯಾಮಾ ಪ್ರಾಂತ್ಯದಲ್ಲಿರುವ ಕೈನಾನ್ ಪಟ್ಟಣದಲ್ಲಿ (Kainan coastal town in Wakayama, Japan) ಜನಸಂಖ್ಯೆಯು ನಿರಂತರವಾಗಿ ಕ್ಷೀಣಿಸುತ್ತಿದೆ. ನಗರದಲ್ಲಿ ಜನಸಂಖ್ಯೆ ತೀವ್ರವಾಗಿ ಇಳಿಮುಖವಾಗುತ್ತಿರುವುದರಿಂದ ಸರ್ಕಾರ ಆತಂಕಕ್ಕೆ ಒಳಗಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿಗೆ ಜನರನ್ನು ಸ್ಥಳಾಂತರಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿಯೇ ಈ ಪಟ್ಟಣಕ್ಕೆ ಬರುವ ಜನರಿಗೆ ಗ್ಯಾರಂಟಿ ಉಡುಗೊರೆಗಳು, ಬಂಪರ್ ಆಫರ್ ಘೋಷಿಸಲಾಗಿದೆ. ಈ ನಗರದಲ್ಲಿ ವಾಸಿಸುವ ವ್ಯಕ್ತಿಗೆ ಸರ್ಕಾರವು 10 ಲಕ್ಷ ಯೆನ್ ಅನ್ನು ನೀಡುತ್ತದೆ, ಅಂದರೆ ನಮ್ಮ ರಾಷ್ಟ್ರೀಯ ಕರೆನ್ಸಿಯಲ್ಲಿ ಅಂದಾಜು 5 ಲಕ್ಷ 80 ಸಾವಿರ ರೂ. ನೀಡುತ್ತದೆ. ಅಷ್ಟೇ ಅಲ್ಲ, 18 ವರ್ಷದೊಳಗಿನ ಮಕ್ಕಳು ಜೊತೆಗಿದ್ದರೆ ಅವರಿಗೆ ವಿಶೇಷ ಮೊತ್ತವಾಗಿ 10 ಲಕ್ಷ ಯೆನ್ ನೀಡಲಾಗುತ್ತದೆ. ಆದರೆ ಇದಕ್ಕೆ ಒಂದು ಸಣ್ಣ ಷರತ್ತು ಇದೆ. ಆ ಸಣ್ಣ ಷರತ್ತು ಪೂರೈಸಿದರೆ ಮಾತ್ರ ಸರ್ಕಾರ ಹಣ ನೀಡುತ್ತದೆ.

ಮಾಧ್ಯಮದ ವರದಿಗಳ ಪ್ರಕಾರ, ಯಾರಾದರೂ ಈ ನಗರದಲ್ಲಿ ಬಂದು ನೆಲೆಸಿದರೆ ಮಾತ್ರ ಅವರು ಅಷ್ಟು ರೂಪಾಯಿ ಗ್ಯಾರಂಟಿ ಉಡುಗೊರೆಗಳನ್ನು ಪಡೆಯಬಹುದು. ಆದರೆ ಅದಕ್ಕಾಗಿ ಇಲ್ಲಿಗೆ ಬಂದು ವಾಸಿಸುವವರ ಹೆಸರು ‘ಸುಜುಕಿ’ ಅಂತಲೇ ಇರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಜನರು ‘ಸುಜುಕಿ’ ಹೆಸರನ್ನು ಬಳಸಲು ಕೇಳಲು ಒಂದು ಕಾರಣವಿದೆ. ಸುಜುಕಿ ಜಪಾನ್‌ನಲ್ಲಿ ಎರಡನೇ ಅತ್ಯಂತ ಸಾಮಾನ್ಯ ಮನೆಯ ಹೆಸರು. ಕೈನಾನ್ ನಗರವು ಈ ಮನೆತನದ ಜನ್ಮಸ್ಥಳವಾಗಿದೆ.

ಕೈನಾನ್ ಪಟ್ಟಣದಲ್ಲಿ 2 ವರ್ಷಗಳ ಹಿಂದೆಯಷ್ಟೇ ಗ್ಯಾರಂಟಿ ಅಭಿಯಾನ ಆರಂಭವಾಯ್ತು!

ವರದಿಗಳ ಪ್ರಕಾರ, ನಗರವನ್ನು ಜನರಿಂದ ತುಂಬಲು ಈ ಕಾರ್ಯ ಯೋಜನೆಯನ್ನು 2021 ರಲ್ಲಿ ಪ್ರಾರಂಭಿಸಲಾಗಿದೆ. ಕೈನಾನ್ ಪಟ್ಟಣವನ್ನು ಮತ್ತೆ ಜನನಿಬಿಡ ಮಾಡಲು ಪ್ರಾರಂಭಿಸಿದರು. ಸುಜುಕಿ ( Suzuki) ಹೆಸರಿನ ಸುಮಾರು 7 ಲಕ್ಷ 50 ಸಾವಿರ ಜನರು ಟೋಕಿಯೊ ಮತ್ತು ನೆರೆಯ ಪ್ರಾಂತ್ಯಗಳಾದ ಚಿಬಾ, ಸೈತಮಾ, ಕನಗಾವಾದಲ್ಲಿ ವಾಸಿಸುತ್ತಿದ್ದಾರೆಂದು ಅಂದಾಜಿಸಲಾಗಿದೆ. ಆದರೆ ಎರಡು ವರ್ಷಗಳ ಅಭಿಯಾನದಲ್ಲಿ, ಸುಜುಕಿ ಮನೆತನದ ಹೆಸರನ್ನು ಹೊಂದಿರುವ ಒಬ್ಬೇ ಒಬ್ಬ ವ್ಯಕ್ತಿಯನ್ನು ಸಹ ಆಕರ್ಷಿಸಲು ನಗರವು ವಿಫಲವಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಕೈನಾನ್ ಪಟ್ಟಣದಲ್ಲಿ ವಾಸಿಸಲು ನೀವು ಹಣವನ್ನು ಏಕೆ ಪಾವತಿಸುತ್ತೀರಿ?

ವಾಸ್ತವವಾಗಿ, ಜಪಾನ್‌ನಾದ್ಯಂತ ವಿವಿಧ ಪ್ರಾಂತ್ಯಗಳಲ್ಲಿರುವ ನಿವಾಸಿಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. 2022 ರಲ್ಲಿ, ಜಪಾನಿನ ನಾಗರಿಕರ ಜನಸಂಖ್ಯೆಯು ದಾಖಲೆಯ 125.4 ಮಿಲಿಯನ್‌ನಿಂದ ಕೇವಲ 8 ಲಕ್ಷಕ್ಕೆ ಇಳಿದಿದೆ. ಮತ್ತೊಂದೆಡೆ, ದಿ ಗಾರ್ಡಿಯನ್ ವರದಿಯ ಪ್ರಕಾರ, ಇಲ್ಲಿ ವಿದೇಶಿಗರ ಸಂಖ್ಯೆ ಸುಮಾರು ಮೂರು ಮಿಲಿಯನ್ ಅಂದರೆ 30 ಲಕ್ಷದಷ್ಟು ದಾಖಲೆಯ ಮಟ್ಟಕ್ಕೆ ಏರಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಅಂಡ್ ಸೋಶಿಯಲ್ ಸೆಕ್ಯುರಿಟಿ ರಿಸರ್ಚ್ ಪ್ರಕಾರ, 2070 ರ ವೇಳೆಗೆ, ಜಪಾನ್‌ನ ಜನಸಂಖ್ಯೆಯು ಕೇವಲ 87 ಮಿಲಿಯನ್ ಅಥವಾ 8.7 ಕೋಟಿಗೆ ಕುಸಿಯಲಿದೆ. ಪರಿಸ್ಥಿತಿ ಹೀಗಿರುವಾಗ ಹೇಗಾದರೂ ಮಾಡಿ ದೇಶದ ಜನಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:06 pm, Sun, 10 December 23