ಬೈಕ್ ಸವಾರನಿಗೆ ಯಮನಾದ ರಸ್ತೆಯಲ್ಲಿ ಅಡ್ಡಲಾಗಿ ಕಟ್ಟಿದ್ದ ಹಗ್ಗ; ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆ

|

Updated on: Dec 06, 2024 | 5:05 PM

ಕೇರಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಹಗ್ಗವನ್ನು ಗಮನಿಸದ ಬೈಕ್ ಸವಾರ ವೇಗವಾಗಿ ಬಂದು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, 20 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಕಾರು ಅಥವಾ ಬೈಕು ಚಲಾಯಿಸುವಾಗ ಯಾವಾಗಲೂ ಜಾಗರೂಕರಾಗಿರಬೇಕು. ಕೆಲವೊಂದು ಪುಟ್ಟ ನಿರ್ಲಕ್ಷ್ಯ ಭಾರೀ ಅಪಘಾತಕ್ಕೆ ಕಾರಣವಾಗಬಹುದು. ಇದೀಗ ಅಂತದ್ದೇ ಘಟನೆಯೊಂದು ಕೇರಳದಲ್ಲಿ ನಡೆದಿದೆ. ರಸ್ತೆಯಲ್ಲಿ ಅಡ್ಡಲಾಗಿ ಕಟ್ಟಲಾದ ಬಿಳಿ ಬಣ್ಣದ ಬ್ಯಾಂಡ್ ಒಂದನ್ನು ಗಮನಿಸದ ಬೈಕ್​ ಸವಾರ ವೇಗವಾಗಿ ಬಂದಿದ್ದಾನೆ. ಬಂದ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದಿದ್ದು, ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮೂವರು ಪೊಲೀಸರು ರಸ್ತೆಯಲ್ಲಿ ನಿಂತಿರುವುದನ್ನು ಕಾಣಬಹುದು. ಚೆಕ್‌ಪಾಯಿಂಟ್ ಗೇಟ್ ರಸ್ತೆಗೆ ಅಡ್ಡಿಪಡಿಸುವ ರೀತಿಯಲ್ಲಿ ಹಗ್ಗವೊಂದನ್ನು ರಸ್ತೆಗೆ ಅಡ್ಡಲಾಗಿ ಕಟ್ಟಿದ್ದು, ಇದನ್ನು ಗಮನಿಸದ ಬೈಕ್​ ಸವಾರ ಶರವೇಗದಲ್ಲಿ ಬಂದಿದ್ದಾನೆ. ವ್ಯಕ್ತಿ ಬೈಕಿನಿಂದ ರಸ್ತೆಗೆ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಜಾಯಿಂಟ್​ ವೀಲ್​ನಿಂದ ಹೊರಬಿದ್ದ ಬಾಲಕಿ, 60 ಅಡಿಯಲ್ಲಿ ನೇತಾಡುತ್ತಿದ್ದವಳ ರಕ್ಷಣೆಯೇ ರೋಚಕ

@SiddharthKG7 ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಡಿಸೆಂಬರ್​ 05ರಂದು ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನದಲ್ಲಿ 2.1 ಮಿಲಿಯನ್​ ಅಂದರೆ 20ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ