AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನೆಮ್ಮದಿಯಿಂದ ಮಲಗಿದ್ದ ವೇಳೆ ಯುಟ್ಯೂಬ್‌ ವ್ಲಾಗ್‌ ಮಾಡಿ ಡಿಸ್ಟರ್ಬ್‌ ಮಾಡಿದ ಮಗನಿಗೆ ಹಿಗ್ಗಾಮುಗ್ಗಾ ಜಾಡಿಸಿದ ತಾಯಿ

ಇತ್ತೀಚಿಗೆ ದೊಡ್ಡವರು ಮಾತ್ರವಲ್ಲ ಪುಟ್‌ಪುಟ್ಟ ಮಕ್ಕಳು ಕೂಡಾ ಕೈಯಲ್ಲಿ ಮೊಬೈಲ್‌ ಹಿಡಿದು ರೀಲ್ಸ್‌, ಯುಟ್ಯೂಬ್‌ ವ್ಲಾಗ್‌ ಅಂತೆಲ್ಲಾ ಕಸರತ್ತು ಮಾಡ್ತಿರ್ತಾರೆ. ಮಕ್ಕಳ ಇಂತಹ ವಿಡಿಯೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಸಿಗುತ್ತಿರುತ್ತವೆ. ಇಲ್ಲೊಬ್ಬ ಹುಡುಗ ಕೂಡಾ ತನ್ನ ತಾಯಿ ಮಲಗಿದ್ದ ವೇಳೆ ಮೊಬೈಲ್‌ ಮುಂದೆ ಕುಳಿತು, ಜೋರಾಗಿ ಕಿರುಚುತ್ತಾ ವ್ಲಾಗ್‌ ಮಾಡಿದ್ದು, ಕೋಪಗೊಂಡ ತಾಯಿ ನಿದ್ರೆ ಹಾಳು ಮಾಡಿದ ಮಗನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 06, 2024 | 3:48 PM

Share

ರೀಲ್ಸ್‌, ಯುಟ್ಯೂಟ್‌ ವ್ಲಾಗ್‌ ಮಾಡುವುದು ಜನರಿಗೆ ಒಂದು ಪ್ಯಾಶನ್‌ ಆಗಿಬಿಟ್ಟಿದೆ. ಇದು ಪ್ಯಾಷನ್‌ ಮಾತ್ರವಲ್ಲದೆ ಹಣ ಗಳಿಸುವ ಉತ್ತಮ ವೇದಿಕೆಯೂ ಹೌದು. ಇದೇ ಕಾರಣದಿಂದ ಹೆಚ್ಚಿನವರು ಬಹಳ ಉತ್ಸಾಹದಿಂದ ಪ್ರತಿನಿತ್ಯ ವ್ಲಾಗ್‌ ಮಾಡಿ ಯುಟ್ಯೂಬ್‌ನಲ್ಲಿ ಶೇರ್‌ ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾತ್ರವಲ್ಲ ವಯಸ್ಸಾದವರು, ಪುಟ್‌ಪುಟ್ಟ ಮಕ್ಕಳು ಕೂಡಾ ಕೈಯಲ್ಲೊಂದು ಮೊಬೈಲ್‌ ಹಿಡಿದುಕೊಂಡು ವ್ಲಾಗ್‌ ಮಾಡಲು ಶುರು ಹಚ್ಚಿಕೊಂಡಿದ್ದಾರೆ. ಅದೇ ರೀತಿ ಇಲ್ಲೊಬ್ಬ ಹುಡುಗ ಕೂಡಾ ತನ್ನ ತಾಯಿ ಮಲಗಿದ್ದ ವೇಳೆ ಮೊಬೈಲ್‌ ಮುಂದೆ ಕುಳಿತು, ಜೋರಾಗಿ ಕಿರುಚುತ್ತಾ ವ್ಲಾಗ್‌ ಮಾಡಿದ್ದು, ಕೋಪಗೊಂಡ ತಾಯಿ ನಿದ್ರೆ ಹಾಳು ಮಾಡಿದ ಮಗನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

ಪುಟ್ಟ ಹುಡುಗನೊಬ್ಬ ತನ್ನ ತಾಯಿ ನೆಮ್ಮದಿಯಿಂದ ಮಲಗಿದ್ದ ವೇಳೆ ರೂಮ್‌ನಲ್ಲಿ ಮೊಬೈಲ್‌ ಹಿಡಿದು ವ್ಲಾಗ್‌ ಮಾಡಿದ್ದಾನೆ. ವಿಡಿಯೋದಲ್ಲಿ ಆತ ಜೋರು ಧ್ವನಿಯಲ್ಲಿ ಮಾತನಾಡಿದ್ದು, ಇದರಿಂದ ಕೋಪಗೊಂಡ ತಾಯಿ ನನ್ನ ನಿದ್ರೆಯನ್ನು ಹಾಳು ಮಾಡ್ತಿಯಾ ಎಂದು ಮಗನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. Gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗನೊಬ್ಬ ಮನೆಯ ರೂಮ್‌ನಲ್ಲಿ ಮೊಬೈಲ್‌ ಹಿಡಿದು ಯುಟ್ಯೂಬ್‌ ವ್ಲಾಗ್‌ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಆ ವೇಳೆ ಆತನ ಎಂಟ್ರಿ ಕೊಟ್ಟಿದ್ದು, ಮಲಗಿದ್ದಾಗ ವಿಡಿಯೋ ಮಾಡಿ ನಿದ್ರೆ ಹಾಳು ಮಾಡ್ತಿಯಾ ಅಂತ ಕೋಪದಿಂದ ಆತನಿಗೆ ಸರಿಯಾಗಿ ಪೆಟ್ಟು ಕೊಟ್ಟಿದ್ದಾರೆ.

ಇದನ್ನೂ ಓದಿ: ಏನ್‌ ಸ್ಟೆಪ್ಸ್‌ ಗುರು; ಈ ಮದುಮಗನ ಬಿಂದಾಸ್‌ ಡ್ಯಾನ್ಸ್‌ಗೆ ಫಿದಾ ಆಗದವರೇ ಇಲ್ಲ…

ಡಿಸೆಂಬರ್‌ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅನೇಕ ಪೋಷಕರಿಗೆ ಸೋಷಿಯಲ್‌ ಮೀಡಿಯಾದ ಶಕ್ತಿಯ ಬಗ್ಗೆ ಗೊತ್ತಿಲ್ಲ, ಅರಿವಿನ ಕೊರತೆಯಿಂದಾಗಿ ಮಕ್ಕಳನ್ನು ಅವರ ಇಷ್ಟದಂತೆ ಬೆಳೆಯಲು ಕೂಡಾ ಬಿಡಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮ ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬಗಳ ಅವಸ್ಥೆಯೇ ಹೀಗೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಕಲಿಯಿರಿʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು