Viral: ಏನ್‌ ಸ್ಟೆಪ್ಸ್‌ ಗುರು; ಈ ಮದುಮಗನ ಬಿಂದಾಸ್‌ ಡ್ಯಾನ್ಸ್‌ಗೆ ಫಿದಾ ಆಗದವರೇ ಇಲ್ಲ…

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಕ್ಷಣ ಮಾತ್ರದಲ್ಲಿ ನಮ್ಮ ಮನಸ್ಸನ್ನು ಗೆದ್ದು ಬಿಡುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ವರನೊಬ್ಬ ತನ್ನ ಮದುವೆ ಸಮಾರಂಭದಲ್ಲಿ ಕಪ್ಪು ಬಿಳುಪು ಸೂಟ್‌ ತೊಟ್ಟು ಸ್ಟೇಜ್‌ ಮೇಲೆ ಚಿಂದಿ ಡ್ಯಾನ್ಸ್‌ ಮಾಡಿದ್ದಾನೆ. ಮದುಮಗನ ಈ ಬಿಂದಾಸ್‌ ಡ್ಯಾನ್ಸ್‌ ಸ್ಟೆಪ್ಸ್‌ಗೆ ನೆಟ್ಟಿಗರು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ.

Viral: ಏನ್‌ ಸ್ಟೆಪ್ಸ್‌ ಗುರು; ಈ ಮದುಮಗನ ಬಿಂದಾಸ್‌ ಡ್ಯಾನ್ಸ್‌ಗೆ ಫಿದಾ ಆಗದವರೇ ಇಲ್ಲ…
ವರನ ಡ್ಯಾನ್ಸ್​​​ ವಿಡಿಯೋ ವೈರಲ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 06, 2024 | 2:27 PM

ಮದುವೆ ಅಂದ್ಮೇಲೆ ಡ್ಯಾನ್ಸ್‌, ಹಾಡು, ಮೋಜು-ಮಸ್ತಿ, ತರ್ಲೆ ತಮಾಷೆ ಇವೆಲ್ಲವೂ ಇರುತ್ತವೆ. ಅದರಲ್ಲೂ ಮದುವೆ ಸಮಾರಂಭಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ವಧು-ವರರ ನೃತ್ಯ ಪ್ರದರ್ಶನವನ್ನು ನೋಡುವುದೇ ಕಣ್ಣಿಗೊಂದು ಹಬ್ಬ ಇದ್ದಂತೆ. ವಿವಾಹ ಸಮಾರಂಭಗಳಲ್ಲಿ ವಧು-ವರರ ನೃತ್ಯ ಪ್ರದರ್ಶನಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಅಂತಹದ್ದೇ ಸುಂದರ ವಿಡಿಯೋ ಇದೀಗ ವೈರಲ್‌ ಆಗಿದೆ. ವರನೊಬ್ಬ ತನ್ನ ಮದುವೆ ಸಮಾರಂಭದಲ್ಲಿ ಕಪ್ಪು ಬಿಳುಪು ಸೂಟ್‌ ತೊಟ್ಟು ಸ್ಟೇಜ್‌ ಮೇಲೆ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ದು. ಮದುಮಗನ ಈ ಚಿಂದಿ ಡ್ಯಾನ್ಸ್‌ ಸ್ಟೆಪ್ಸ್‌ಗೆ ನೆಟ್ಟಿಗರು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ.

ಜೈಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರ ಆಕಾಶ್‌ ವಸೈಕರ್‌ ವೇದಿಕೆಯ ಮೇಲೆ ತನ್ನ ನೃತ್ಯ ಕಲೆಯನ್ನು ಪ್ರದರ್ಶಿಸಿದ್ದು, ಮದುಮಗನ ಈ ಡ್ಯಾನ್ಸ್‌ ಟ್ಯಾಲೆಂಟ್‌ಗೆ ನೆರೆದಿದ್ದ ಅತಿಥಿಗಳು ಫುಲ್‌ ಫಿದಾ ಆಗಿದ್ದಾರೆ.

ಈ ವಿಡಿಯೋವನ್ನು the_shaadi_Shakers ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ತನ್ನ ನಯವಾದ ಡ್ಯಾನ್ಸ್‌ ಸ್ಟೆಪ್ಸ್‌ ಮೂಲಕ ವೇದಿಕೆಯ ಮೇಲೆ ಧೂಳೆಬ್ಬಿಸಿದ ವರ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಸೂಟ್‌ ತೊಟ್ಟು ಮದುಮಗ ವೇದಿಕೆಯ ಮೇಲೆ ಹಿಂದಿ ಹಾಡಿಗೆ ಚಿಂದಿಯಾಗಿ ನೃತ್ಯ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಏಳು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 15.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆಹಾ… ಎಂಥಾ ಅದ್ಭುತ ಡ್ಯಾನ್ಸ್‌ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಮ್ಮ ಡ್ಯಾನ್ಸ್‌ ಯಾವುದೇ ಹೀರೋಗಳಿಗೂ ಕಮ್ಮಿಯಿಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ನಿಜಕ್ಕೂ ಈ ಮದುಮಗನ ನೃತ್ಯ ಪ್ರದರ್ಶನ ಅದ್ಭುತವಾಗಿತ್ತು ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ