Viral Video : ಆಫ್ರಿಕಾದ ಅನೇಕರು ಭಾರತೀಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ರೀಲ್ಸ್ ಮಾಡಿದ್ದನ್ನು ಈಗಾಗಲೇ ನೋಡಿದ್ದೀರಿ. ಈ ಮೂಲಕ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿ ವ್ಯಕ್ತಿಗಳು ಎನ್ನಿಸಿಕೊಂಡಿದ್ದೂ ಇದೆ. ಹೀಗೆ ಲಿಪ್ ಸಿಂಕ್ ರೀಲ್ ಮಾಡುತ್ತಲೇ ಹೆಸರುವಾಸಿಯಾಗಿರುವ ತಾಂಜಾನಿಯಾದ ಕಿಲಿ ಪೌಲ್ ಈ ಬಾರಿ ಲಿಪ್ ಸಿಂಕ್ ಮಾಡದೆ ರಾಜ್ ಕಪೂರರ ಜೀನಾ ಇಸೀ ಕಾ ನಾಮ್ ಹೈ ಹಾಡನ್ನು ಹಾಡಿದ್ದಾರೆ. ಇಂದಿಗೂ ಹಚ್ಚಹಸಿರಾದ ಈ ಹಾಡನ್ನು ನೆಟ್ಟಿಗರು ಹೊಸ ಹುರುಪಿನಿಂದ ಕೇಳಿದ್ದಾರೆ.
ಇತ್ತೀಚೆಗೆ ಕಿಲಿ ಶಾರುಖ್ ಖಾನ್ ಮತ್ತು ಅನುಷ್ಕಾ ಅಭಿನಯದ ರಬ್ ನೇ ಬನಾ ದಿ ಜೋಡಿ ಹಾಡನ್ನು ಹಾಡಿ 4.4 ಮಿಲಿಯನ್ ಕೇಳುಗರೆದುರು ತನ್ನ ನಿಜವಾದ ಕಂಠಸಿರಿಯನ್ನು ಪ್ರದರ್ಶಿಸಿದ್ದರು. ಅಂದಿನಿಂದ ಕಿಲಿ ಲಿಪ್ ಸಿಂಕ್ ಮತ್ತು ಡ್ಯಾನ್ಸ್ ಮಾಡಿದ ರೀಲ್ಗಳಿಗಿಂತ ತಾವೇ ಸ್ವತಃ ಹಾಡಿದ ರೀಲ್ಸ್ಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಪಂಜಾಬಿ ಹಾಡುಗಳನ್ನೂ ಹಾಡಿದ್ದಾರೆ. ಸಾಧ್ಯವಾದಷ್ಟು ಭಾರತೀಯ ಭಾಷೆಗಳನ್ನು ಸರಿಯಾಗಿ ಉಚ್ಚರಿಸಲು ಪ್ರಯತ್ನಿಸುತ್ತಿದ್ದಾರೆ.
ಪ್ರಸ್ತುತ ವಿಡಿಯೋ 1.1 ಮಿಲಿಯನ್ ವೀಕ್ಷಕರನ್ನು ಸೆಳೆದಿದೆ. 1.4 ಲಕ್ಷ ಜನರು ಇದನ್ನು ಇಷ್ಟಪಟ್ಟಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:43 am, Wed, 16 November 22