‘ನನ್ನ ನಂಬಿ, ನಾನು ಎಬ್ಬಿಸಿದ್ದು ಮೆಲ್ಲ, ಅತೀ ಮೆಲ್ಲ’ ಇಂತಿ ನಿಮ್ಮ ವಿಧೇಯ ಘೇಂಡಾ
Viral Video : ಇಂಥಾ ಒಂದು ದಿನ ನನ್ನ ಜೀವನದಲ್ಲಿ ಬರುತ್ತೆ ಅಂತ ಅನ್ಕೊಂಡೇ ಇರಲಿಲ್ಲ, ಕಿತ್ಗೊಟ್ಟು ಓಡಿದೆ ನೋಡಿ. ನನ್ನ ಆ ರೀತಿಗೆ ಘೇಂಡಾ ಮತ್ತೆ ವಾಪಸ್ ಬರ್ತಾನಾ? ವಿಡಿಯೋ ನೋಡಿ ನೀವೇ ಹೇಳಿ, ಅವ ಮತ್ತೆ ಬರ್ತಾನಾ?
Viral Video : ಯಾರಾದರೂ ಕಬಾಬ್ ಪೀಸ್ ತಂದು ಹಾಕುತ್ತಾರಾ, ಚಿಕನ್ ಬಿರಿಯಾನಿ ಹಾಕುತ್ತಾರಾ ಅಂತ ಕನಸಿನಲ್ಲೇ ನಾಲಗೆಯಾಡಿಸಿಕೊಂಡು ಹಾಯಾಗಿ ಬಿಸಿಲಿಗೆ ಮೈಚೆಲ್ಲಿ ಬೀದಿಯಲ್ಲಿ ಮಲಗಿದ್ದೆ. ಆದರೆ ಇಂಥಾ ಒಂದು ನನ್ನ ಬದುಕಿನಲ್ಲಿ ಬರಬಹುದು ಅಂತ ಅಂದುಕೊಂಡಿರಲೇ ಇಲ್ಲ. ಏಕೆಂದರೆ, ನಿಜಜೀನವನದಲ್ಲಿ ಹೋಗಲಿ ಕನಸಲ್ಲಿಯೂ ಇಂಥವನನ್ನು ಈತನಕ ಕಂಡೇ ಇರಲಿಲ್ಲ. ಎಂಥ ಭಯಂಕರ ಅವನು! ನೋಡಿ ನೀವೂ.
If you wanted any proof that the Rhinos are really gentle ?? pic.twitter.com/6WhK5VMyqr
ಇದನ್ನೂ ಓದಿ— Susanta Nanda (@susantananda3) November 15, 2022
ಹಾಗೆ ನೋಡಿದರೆ ಪಾಪ ಅವನು ಮೆಲ್ಲ, ಅತೀ ಮೆಲ್ಲ ತನ್ನ ಮೂತಿಯಿಂದ ತಾಕಲು ನೋಡಿದ್ದಾನೆ. ಮಾತು ಬರುತ್ತಿದ್ದರೆ ಮಧುರವಾಗಿ ಕರೆಯುತ್ತಿದ್ದನೇನೋ. ಹಾಂ, ಏಕೆಂದರೆ ಅವ ನೋಡಲಷ್ಟೇ ದೈತ್ಯ ಒಳಗೆ ಮೃದುಕುಸುಮ. ಆದರೆ ಯಾಕೆ ಬಂದ ಅವ ಕಾಡುಬಿಟ್ಟು ನಾಡಿಗೆ? ಸ್ನೇಹ ಬೆಳೆಸಲು ಬಂದವನಿರಬೇಕು. ನಮ್ಮ ವಂಶ ಬೇರೆ ನಂಬಿಕೆಗೆ, ನಿಷ್ಠೆಗೆ ಹೆಸರುವಾಸಿ ಎಂದು ಅವನಿಗೂ ಸುದ್ದಿ ಮುಟ್ಟಿರಬೇಕು. ಆದರೂ ನಾನು ಈ ಪರಿ ಓಡಬಾರದಿತ್ತು ಹೃದಯವೇ ಬಾಯಿಗೆ ಬಂದಂತೆ. ನನ್ನ ನಾನೇ ನೆನಪಿಸಿಕೊಂಡು ನಾಚಿಕೆಯೂ, ಭಯವೂ ಇನ್ನೇನೆಲ್ಲವೂ ಆಗುತ್ತಿದೆ.
ಐಎಎಸ್ ಆಫೀಸರ್ ಸುಸಾಂತ ನಂದಾ ಟ್ವೀಟ್ ಮಾಡಿದ ಈ ವಿಡಿಯೋ ಅನ್ನು ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ನೀವು ಯಾರನ್ನಾದರೂ ಎಬ್ಬಿಸುವಾಗ ನಾಯಿಯ ಸ್ಥಾನದಲ್ಲಿ ಅವರನ್ನು ಕಲ್ಪಿಸಿಕೊಂಡು ನೋಡಿ ಎಂದಿದ್ದಾರೆ ಒಬ್ಬರು. ಈ ನಾಯಿ ಇನ್ನೆಂದೂ ಮಲಗುವುದೇ ಇಲ್ಲ, ಕನಸಿನಲ್ಲಿಯೂ ಘೇಂಡಾಮೃಗದ ಭಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಬೇಗ ಎದ್ದೇಳಲು ದೇವರು ಸಹಾಯ ಮಾಡುತ್ತಿದ್ದಾನೆ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮಗೇನು ಅನ್ನಿಸಿತು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:36 am, Wed, 16 November 22