AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಕ್ಲಿಯರ್​ ಇಂಪ್ಲ್ಯಾಂಟ್ : ಹಚ್ಚೆ ಹಾಕಿಸಿಕೊಂಡು ಮಗನಿಗೆ ಸಾಥ್​ ನೀಡಿದ ತಂದೆ

Cochlear Implant : ಈವತ್ತು ಬಹಳ ತುಟ್ಟಿ ಮತ್ತು ಅಪರೂಪವಾಗಿರುವುದೆಂದರೆ ಪರಸ್ಪರ ಸಂಬಂಧಗಳಲ್ಲಿ ಭಾವನಾತ್ಮಕ ಆಸರೆ ನೀಡುವುದು. ಆದರೆ ಈ ವಿಡಿಯೋದಲ್ಲಿ ಈ ಅಪ್ಪಮಗನ ಜೋಡಿಯ ಕಣ್ಣಲ್ಲಿ ಮಿನುಗುವ ನಕ್ಷತ್ರ ನೋಡಿ.

ಕಾಕ್ಲಿಯರ್​ ಇಂಪ್ಲ್ಯಾಂಟ್ : ಹಚ್ಚೆ ಹಾಕಿಸಿಕೊಂಡು ಮಗನಿಗೆ ಸಾಥ್​ ನೀಡಿದ ತಂದೆ
Irish dad gets a tattoo of sons cochlear implant
TV9 Web
| Updated By: ಶ್ರೀದೇವಿ ಕಳಸದ|

Updated on: Nov 15, 2022 | 5:39 PM

Share

Viral Video : ಪುಟ್ಟಮಕ್ಕಳಿಗೆ ಆರೋಗ್ಯ ಸುಸ್ಥಿತಿಯಲ್ಲಿ ಇರದೇ ಇದ್ದರೆ ಹೆತ್ತವರಿಗೆ ಹೇಳತೀರದಷ್ಟು ಮನಸ್ಸು ಚಡಪಡಿಸುತ್ತದೆ. ಇನ್ನು ಶಾಶ್ವತವಾದ ಸಮಸ್ಯೆಗೆ ಈಡಾದರಂತೂ ಆ ನೋವನ್ನು ವಿವರಿಸಲಸಾಧ್ಯ. ಆದರೆ ಚಿಕಿತ್ಸೆಯಿಂದ ಪರಿಹಾರವಿದೆ ಎಂದು ಸಣ್ಣ ದಾರಿ ತೋರಿದರೂ ಆಶಾಭಾವ ಗರಿಗೆದರುತ್ತದೆ. ಆದರೂ ಎಲ್ಲರಂತಿರಲು ಆಗದು ಎಂಬ ನೋವು ಮಾತ್ರ ಥಣ್ಣಗೆ ಕೊರೆಯುತ್ತಲೇ ಇರುತ್ತದೆ. ಈಗಿಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಮಗುವಿಗೆ ಶ್ರವಣದೋಷ ನಿವಾರಣೆಗೆ ಕಾಕ್ಲಿಯರ್​ ಇಂಪ್ಲ್ಯಾಂಟ್ ಮಾಡಲಾಗಿದೆ. ಮಗುವಿಗೆ ಬೇಸರವಾಗಬಾರದೆಂದು ಅಪ್ಪನೂ ಕಾಕ್ಲಿಯರ್​ ಇಂಪ್ಲ್ಯಾಂಟ್ ಹೋಲುವ ಹಚ್ಚೆಯನ್ನು ಹಾಕಿಸಿಕೊಂಡಿದ್ದಾನೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಐರಿಶ್​ನಲ್ಲಿ ವಾಸಿಸುತ್ತಿದ್ದಾರೆ ಈ ಅಪ್ಪಮಗ ಜೋಡಿ. ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗುತ್ತಿದ್ದಾರೆ. ಇಷ್ಟು ಪ್ರೀತಿಸುವ ತಂದೆಯರು ಈಗ ಸಿಗುವುದು ಅತೀ ವಿರಳ ಎನ್ನುತ್ತಿದ್ದಾರೆ. ಮಗುವಿಗೆ ತನ್ನ ತಲೆಯಲ್ಲಿರುವ ಹಚ್ಚೆ ತೋರಿಸಿದಾಗ ಮಗುವಿನ ಮುಖ ಗಮನಿಸಿದ್ದೀರಾ? ಒಂದು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನರನ್ನು ಈ ವಿಡಿಯೋ ತಲುಪಿದೆ.

ಈ ವಿಡಿಯೋ ನೋಡಿದ ಯಾರಿಗೂ ಅಪ್ಪನೆಂದರೆ ಏನು ಅವನ ಶಕ್ತಿ ಮತ್ತು ಪ್ರೀತಿ ಎಂಥದು ಎನ್ನುವುದು ಅನುಭವಕ್ಕೆ ಬರುತ್ತದೆ ಎಂದಿದ್ದಾರೆ ಒಬ್ಬರು. ಈ ವಿಡಿಯೋ ನೋಡಿ ನನ್ನ ಕಣ್ಣುಗಳು ತುಂಬಿಕೊಳ್ಳುತ್ತಿವೆ ಹಾಗೆಯೇ ಸಣ್ಣನಗುವೂ ಅರಳುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮಿಬ್ಬರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ನೆಟ್ಟಿಗರನೇಕರು ಹಾರೈಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ