ಪ್ರತೀ ಸಲದಷ್ಟು ಕಠಿಣ ಸವಾಲು ಇದರಲ್ಲಿಲ್ಲ; ಸುಲಭವಾಗಿ ಮೊಸಳೆ ಹುಡುಕುತ್ತೀರಿ
Optical Illusion : ಈ ದಟ್ಟ ಅರಣ್ಯದಲ್ಲಿ, ಕಾಡತೊರೆಯಲ್ಲಿ ಮೊಸಳೆಯೊಂದು ಅಡಗಿ ಕುಳಿತಿದೆ. 12 ಸೆಕೆಂಡಿನಲ್ಲಿ ನೀವು ಕಂಡುಹಿಡಿಯುತ್ತೀರಿ ಎಂಬ ಭರವಸೆ ನಮಗಿದೆ.
Optical Illusion : ಈ ಸಲ ನಿಮಗೆಂದೇ ಅತೀ ಸುಲಭವಾದ ಆಪ್ಟಿಕಲ್ ಇಲ್ಲ್ಯೂಷನ್ ತಂದಿದ್ದೇವೆ. ಈ ದಟ್ಟವಾದ ಕಾಡತೊರೆಯಲ್ಲಿ ಮೊಸಳೆಯೊಂದು ಅಡಗಿ ಕುಳಿತಿದೆ. 12 ಸೆಕೆಂಡಲ್ಲ ಬಲುಬೇಗನೇ ಗುರುತಿಸುತ್ತೀರಿ ಎಂಬ ಭರವಸೆ ನಮಗಿದ್ದೇ ಇದೆ. ಈಗಾಗಲೇ ನೀವು ಮತ್ತೊಮ್ಮೆ ಈ ಚಿತ್ರವನ್ನು ನೋಡಿ ಮೊಸಳೆಯನ್ನು ಹುಡುಕಿರುತ್ತೀರಿ. ನೆಟ್ಟಿಗರು ಅನೇಕರು ಈಗಾಗಲೇ ಮೊಸಳೆಯನ್ನು ಹುಡುಕಿ ಖುಷಿಪಟ್ಟಿದ್ದಾರೆ.
ಹಸಿರು ಮರಗಳು, ನೀಲಿನೀರು, ಅಲ್ಲಲ್ಲಿ ಬೆಳೆದ ಗಿಡಗಳು ಮಧ್ಯೆ ಎಲ್ಲೋ ಒಂದೆಡೆ ಮೊಸಳೆ ಮುಖ ತೂರಿಸಿದೆ! ನಿಮ್ಮ ತಾಳ್ಮೆಯನ್ನು ನಾವು ಬಹುವಾಗಿ ಮೆಚ್ಚುತ್ತೇವೆ. ಪ್ರತೀ ಸಲ ಎಷ್ಟೇ ಕಷ್ಟಕರವಾದ ಸವಾಲು ಕೊಟ್ಟಾಗಲೂ ನೀವು ಅಷ್ಟೇ ಶ್ರದ್ಧೆಯಿಂದ ಹುಡುಕಲು ಪ್ರಯತ್ನಿಸಿದ್ದು ನಮಗೆ ಗೊತ್ತಾಗಿದೆ. ಹಾಗಾಗಿ ಈಗ ಮೊಸಳೆ ಹುಡುಕುವುದು ಖಂಡಿತ ಕಷ್ಟವಲ್ಲ.
ನಿಮ್ಮ ಮೆದುಳು ಮತ್ತು ಕಣ್ಣಿನ ಮಧ್ಯೆ ನಡೆಯುವ ಈ ‘ಆಟ’ವನ್ನು ನೀವು ಗೆದ್ದೇ ಗೆಲ್ಲುತ್ತೀರಿ ಎಂಬುದು ನಮಗೆ ತಿಳಿದಿದೆ. ಒಂದು ಸುಳಿವು ಬೇಕಾ? ನೀರಿನೊಳಗೆ ಒಂದೆರಡು ಮರಗಳು ಮುರಿದುಕೊಂಡು ಬಿದ್ದಿವೆ. ಚಿತ್ರದ ಬಲಬದಿ ಗಮನಿಸಿ. ಮರದ ಬೊಡ್ಡೆಯ ಬಳಿಯಿಂದ ಮೊಸಳೆ ಇಣುಕಿದೆ. ಈಗಲೂ ಕಾಣಲಿಲ್ಲವಾ? ಹಾಗಿದ್ದರೆ ಒಮ್ಮೆ ಕೆಳಗಿನ ಚಿತ್ರ ನೋಡಿಬಿಡಿ.
ಈಗ ಹೇಳಿ ಈ ಸವಾಲು ಕಠಿಣವಾಗಿತ್ತಾ? ಉತ್ತರ ಸಿಕ್ಕ ಮೇಲೆ ಎಷ್ಟೊಂದು ಸರಳವಾಗಿದೆಯಲ್ಲ ಇದು ಎಂದು ನೀವು ಖುಷಿಗೊಂಡಿರುತ್ತೀರಿ ತಾನೆ? ಮತ್ತಷ್ಟು ಸರಳ ಚಿತ್ರಗಳನ್ನು ನಿಮಗಾಗಿ ನಾವು ಆಗಾಗ ತರಲು ಪ್ರಯತ್ನಿಸುತ್ತೇವೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:41 pm, Tue, 15 November 22