AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಗೆ ಬಂಗಾರದ ಚೈನು ಹಾಕಿ ಅಚ್ಚರಿ ಅರಳಿಸಿದ ಮಗ

Son surprises mother : ಊಟ ಬಡಿಸುವಲ್ಲಿ ಮಗ್ನಳಾಗಿದ್ದಾಳೆ ಈ ತಾಯಿ. ಮಗ ಆಕೆಗೆ ಬಂಗಾರದ ಚೈನನ್ನು ತಂದು ಕೊರಳಿಗೆ ಹಾಕಿದ್ದಾನೆ. ಕಿಂಚಿತ್ತೂ ಇದರ ಸುಳಿವೇ ಇಲ್ಲದ ತಾಯಿ ಅಪಾರ ಅಚ್ಚರಿಗೆ ಒಳಗಾಗಿದ್ದಾಳೆ. ನೋಡಿ ವಿಡಿಯೋ.

ತಾಯಿಗೆ ಬಂಗಾರದ ಚೈನು ಹಾಕಿ ಅಚ್ಚರಿ ಅರಳಿಸಿದ ಮಗ
Son surprises mother with new gold chain. Her million-dollar smile
TV9 Web
| Edited By: |

Updated on:Nov 15, 2022 | 1:42 PM

Share

Viral Video : ಮಕ್ಕಳ ಜೀವನ ಚೆನ್ನಾಗಿರಬೇಕೆಂದು ಅದೆಷ್ಟೋ ಪೋಷಕರು ಹಗಲೂ ರಾತ್ರಿ ಶ್ರಮಿಸುತ್ತಾರೆ. ಅವರು ಪಟ್ಟ ಕಷ್ಟ ಕೆಲವೇ ಕೆಲವು ಮಕ್ಕಳಿಗೆ ಮಾತ್ರ ಅರ್ಥವಾಗುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ತನ್ನಪಾಡಿಗೆ ತಾನು ಅಡುಗೆಮನೆಯಲ್ಲಿ ಊಟಕ್ಕೆ ಬಡಿಸುತ್ತಿರುವಾಗ ತಾಯಿಗೆ ಮಗ ಬಂಗಾರದ ಚೈನು ಹಾಕಿ ಸರ್​​ಪ್ರೈಝ್​ ಕೊಟ್ಟಿದ್ದಾನೆ. ಆಕೆಯ ಮುಖದ ಮೇಲಿನ ಅಚ್ಚರಿಯ ನಗುವನ್ನು ಗಮನಿಸಿ.

5,000ಕ್ಕೂ ಹೆಚ್ಚು ಜನರನ್ನು ಈ ಪೋಸ್ಟ್​ ಟ್ವಿಟ್​ ಮೂಲಕ ತಲುಪಿದೆ. ಹೀಗೊಂದು ಅಚ್ಚರಿಯ ಉಡುಗೊರೆ ಮಗನಿಂದ ದೊರೆಯಬಹುದೆಂಬ ಇರಾದೆ ಆಕೆಗೆ ಇರಲಿಲ್ಲವೆನ್ನಿಸುತ್ತದೆ ಆಕೆಯ ಮುಖದಲ್ಲಿ ಅರಳಿದ ನಗು ಮತ್ತು ಅಚ್ಚರಿ ನೋಡಿದಾಗ. ನೆಟ್ಟಿಗರು ಈ ಹೃದಯಸ್ಪರ್ಶಿ ವಿಡಿಯೋ ನೋಡಿ ಪ್ರತಿಕ್ರಿಯಿಸುತ್ತಿದ್ದಾರೆ.

ನಮ್ಮ ಖುಷಿಯನ್ನು ಪಡೆಯುವುದು ಸುಲಭ. ಆದರೆ ನಮಗೆ ಜೀವ ತೇಯ್ದವರ ಖುಷಿಯನ್ನು ಅವರ ಮುಖದಲ್ಲಿ ಮರಳಿಸುವುದು ಬಹಳೇ ಕಷ್ಟ. ಅಂಥ ಕಷ್ಟವನ್ನು ಕೆಲವೇ ಕೆಲವರು ತೆಗೆದುಕೊಳ್ಳಲು ಸಿದ್ಧರಿರುತ್ತಾರೆ.

ಏನನ್ನಿಸಿತು ಈ ವಿಡಿಯೋ ನೋಡಿ ನಿಮಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:41 pm, Tue, 15 November 22