ಚಿಕಾಗೋದಲ್ಲಿ ಸ್ನೇಹಿತನ ಮದುವೆಗೆ ಸೀರೆಯುಟ್ಟು ಬಂದ ಪುರುಷಮಣಿಗಳು
Men Wearing Saree : ಈ ಯುವಕರಿಬ್ಬರೂ ಹೀಗೆ ಸೀರೆಯುಟ್ಟು ವಧುವರರನ್ನು ಅಚ್ಚರಿಗೆ, ಗೊಂದಲಕ್ಕೆ ಕೆಡವಿದ್ದಾರೆ. ಬಹಳ ಮಜವಾಗಿದೆ ಈ ವಿಡಿಯೋ ಎನ್ನುತ್ತಿದ್ದಾರೆ ನೆಟ್ಟಿಗರು.
Viral Video : ಎಲ್ಲಾದರೂ ನೋಡಿದ್ದೀರಾ ಇಂಥ ದೃಶ್ಯ? ಹಾಗಿದ್ದರೆ ಇಲ್ಲಿ ನೋಡಿ. ಚಿಕಾಗೋದಲ್ಲಿ ವರನ ಸ್ನೇಹಿತರು ಸೀರೆಯುಟ್ಟು ಮದುವೆಗೆ ಬಂದಿದ್ದಾರೆ. ವರ ಅಚ್ಚರಿಯಷ್ಟೇ ಗೊಂದಲಕ್ಕೂ ಒಳಗಾಗಿ ಇವರನ್ನು ನೋಡುತ್ತ ಕುಳಿತಿದ್ದಾನೆ. ವಧುವಂತೂ… ವಿವರಿಸುವುದೇ ಬೇಡ. ನೀವೇ ನೋಡಿ. ಇದೀಗ ಆನ್ಲೈನ್ನಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ ಈ ವಿಡಿಯೋ. ಸೀರೆಯುಟ್ಟ ಈ ಪುರುಷಮಣಿಗಳನ್ನು ನೀವೂ ನೋಡಿ.
View this post on Instagram
ವರ ಮೊದಲು ದಂಗುಬಡಿದ. ಆದರೆ ಕ್ರಮೇಣ ಇವರ ಒಂದೊಂದು ಅಲಂಕಾರವನ್ನೂ ನೋಡುತ್ತ ನಗಲು ಶುರುಮಾಡಿದ. ಚಿಕಾಗೋ ವೆಡ್ಡಿಂಗ್ ಫೋಟೋಗ್ರಾಫರ್ ಒಬ್ಬರು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರಿಗೆ ಸೀರೆ ಉಡಿಸಲು ಸ್ಥಳೀಯ ಮಹಿಳೆಯೊಬ್ಬರು ಸಹಕರಿಸಿದ್ದಾರೆ. ಕಂಚೀ ರೇಷಿಮೆ ಸೀರೆಯನ್ನು ಇವರಿಬ್ಬರೂ ಉಟ್ಟಿದ್ದಾರೆ. ಮದುವೆಗೆ ಬಂದ ಜನರ ಗಮನ ಸೆಳೆಯಲು ಮತ್ತು ತಮಾಷೆಗಾಗಿ ಹೀಗೆ ಉಡುಗೆ ತೊಡುಗೆ ಮತ್ತು ಅಲಂಕಾರ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ನೋಡಿದಿರಲ್ಲ ವಧು ಮತ್ತು ವರರ ಪ್ರತಿಕ್ರಿಯೆಯನ್ನು. ಎಂಥ ನಗುವಿನಲ್ಲಿ ತೇಲಿ ಹೋಗಿದ್ದಾರೆ. ನಿಮಗೂ ನಗು ಉಕ್ಕಿತೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:10 pm, Tue, 15 November 22