ಡೆಲಿವರಿ ಏಜೆಂಟ್​ಗಳಿಗಾಗಿಯೇ ಮನೆ ಮುಂದೆ ನೀರಿನ ಬಾಟಲಿಗಳನ್ನಿಟ್ಟು ಜನರ ಹೃದಯ ಗೆದ್ದ ವ್ಯಕ್ತಿ

ಬೇಸಿಗೆಯಲ್ಲಿ ಡೆಲಿವರಿ ಏಜೆಂಟ್‌ಗಳ ಬಾಯಾರಿಕೆ ತಣಿಸಲು, ವಿನೀತ್ ತಮ್ಮ ಮನೆಯ ಮುಂದೆ 300 ನೀರಿನ ಬಾಟಲಿಗಳನ್ನು ಇಡುತ್ತಾರೆ. ಪ್ರತಿದಿನ ನೂರಾರು ಮನೆಗಳಿಗೆ ಭೇಟಿ ನೀಡುವ ಡೆಲಿವರಿ ಸಿಬ್ಬಂದಿಗೆ ನಿರ್ಜಲೀಕರಣ ತಪ್ಪಿಸಲು ಈ ಕಾರ್ಯ ಸಹಕಾರಿಯಾಗಿದೆ. ವಿನೀತ್ ಅವರ ಈ ಮಾನವೀಯ ಕಾಯಕವು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಇತರರಿಗೂ ಇಂತಹ ಸತ್ಕಾರ್ಯ ಮಾಡಲು ಪ್ರೇರಣೆ ನೀಡುತ್ತಿದೆ.

ಡೆಲಿವರಿ ಏಜೆಂಟ್​ಗಳಿಗಾಗಿಯೇ ಮನೆ ಮುಂದೆ ನೀರಿನ ಬಾಟಲಿಗಳನ್ನಿಟ್ಟು ಜನರ ಹೃದಯ ಗೆದ್ದ ವ್ಯಕ್ತಿ
ಬಾಟಲಿ

Updated on: Dec 24, 2025 | 9:10 AM

ಸಾಮಾನ್ಯವಾಗಿ ಬೇಸಿಗೆ(Summer)ಯಲ್ಲಿ ಆಯಾಸ, ಬಾಯಾರಿಕೆ ಎರಡೂ ಹೆಚ್ಚು. ಡೆಲಿವರಿ ಏಜೆಂಟ್​ಗಳು ಇಡೀ ದಿನವೂ ನೂರಾರು ಮನೆಗಳಿಗೆ ಭೇಟಿ ನೀಡಿ ನಾವು ಆರ್ಡರ್ ಮಾಡಿರುವ ವಸ್ತುಗಳನ್ನು ತಲುಪಿಸುವ ಕೆಲಸ ಮಾಡುತ್ತಾರೆ. ಆದರೆ ಯಾರೂ ಕೂಡ ಅವರ ಕಡೆಗೆ ಗಮನ ಹರಿಸುವುದಲ್ಲ. ಆದರೆ ವಿನೀತ್ ಎಂಬುವವರು ಮನೆಯ ಹೊರಗಡೆ ಈ ಡೆಲಿವರಿ ಏಜೆಂಟ್​ಗಳಿಗಾಗಿಯೇ ಸುಮಾರು 1,500 ರೂ. ಮೌಲ್ಯದ 300 ನೀರಿನ ಬಾಟಲಿಗಳನ್ನು ಇಟ್ಟಿದ್ದಾರೆ.

ಅದಕ್ಕೆ ಪ್ರಣವ್ ಎಂಬುವವರು ಕಮೆಂಟ್ ಮಾಡಿದ್ದು, 2022ರಿಂದ ಪ್ರತಿ ಬೇಸಿಗೆಯಲ್ಲೂ ತಮ್ಮ ತಾಯಿ ಕೂಡ ಮಡಿಕೆಯಲ್ಲಿ ನೀರನ್ನು ಮನೆಯ ಹೊರಗಡೆ ಇಡಲು ಶುರು ಮಾಡಿದ್ದಾರೆ. ಬೇಸಿಗೆಯಲ್ಲಿ ಡೆಲಿವರಿ ಏಜೆಂಟ್​ಗಳಿಗೆ ಡಿ ಹೈಡ್ರೇಷನ್ ಆಗುವ ಸಾಧ್ಯತೆ ಹೆಚ್ಚಿರುವ ಕಾರಣ ಅವರ ಬಗ್ಗೆ ಸ್ವಲ್ಪ ಕಾಳಜಿ ತೋರುವುದು ಉದ್ದೇಶವಾಗಿದೆ.

ಪ್ರತಿ ವರ್ಷ, ವಿನೀತ್ ಸುಮಾರು 300 ನೀರಿನ ಬಾಟಲಿಗಳನ್ನು ಖರೀದಿಸಲು ಸುಮಾರು 1,500 ರೂ. ಖರ್ಚು ಮಾಡುತ್ತಾರೆ. ಅವುಗಳನ್ನು ಅವರ ಮನೆಯ ಪ್ರವೇಶದ್ವಾರದಲ್ಲಿ ಇರಿಸಲಾಗುತ್ತದೆ, ಹಾದುಹೋಗುವ ಯಾರಿಗಾದರೂ ತೆಗೆದುಕೊಂಡು ಹೋಗಬಹುದು.

ಪೋಸ್ಟ್​

 

ವಿನೀತ್ ಅವರ ಪೋಸ್ಟ್‌ಗೆ ನೆಟ್ಟಿಗರು ಸಂತೋಷದಿಂದ ಪ್ರತಿಕ್ರಿಯಿಸಿದ್ದಾರೆ. ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ದಯವಿಟ್ಟು ನೀರಿನ ಬಾಟಲಿಗಳನ್ನು ನೆರಳಿನಲ್ಲಿರಿಸಿ ಸೂರ್ಯನ ಕಿರಣಗಳು ಬಾಟಲಿಗಳನ್ನು ಸ್ಪರ್ಶಿಸಬಾರದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಡಿಸೆಂಬರ್ 23, 2025 ರಂದು ಹಂಚಿಕೊಳ್ಳಲಾಯಿತು ಮತ್ತು ಅಂದಿನಿಂದ, ಇದು 28,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ