ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಬ್ರಿಟನ್​​ನ ರಾಜ – ರಾಣಿ, ಇದೊಂದು ಸುಂದರ ಕ್ಷಣ ಎಂದ ಜನ

ಬ್ರಿಟನ್ ರಾಜ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ಯುರೋಪಿನ ಮೊದಲ ಹಿಂದೂ ಕಲ್ಲಿನ ದೇವಾಲಯವಾದ ನೀಸ್ಡೆನ್ BAPS ಶ್ರೀ ಸ್ವಾಮಿನಾರಾಯಣ ಮಂದಿರದ 30ನೇ ವಾರ್ಷಿಕೋತ್ಸವದ ಪ್ರಯುಕ್ತ ಭೇಟಿ ನೀಡಿದ್ದಾರೆ. ಈ ಐತಿಹಾಸಿಕ ಭೇಟಿಯು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಪ್ರಶಂಸಿಸಿದರೆ, ಇನ್ನು ಕೆಲವರು ಬ್ರಿಟಿಷ್ ರಾಜಮನೆತನದ ಸದಸ್ಯರು ಚರ್ಚ್‌ಗಳಿಗೆ ಮಾತ್ರ ಭೇಟಿ ನೀಡಬೇಕೆಂದು ಟೀಕಿಸಿದ್ದಾರೆ.

ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಬ್ರಿಟನ್​​ನ ರಾಜ - ರಾಣಿ, ಇದೊಂದು ಸುಂದರ ಕ್ಷಣ ಎಂದ ಜನ
ಬ್ರಿಟನ್​​ನ ರಾಜ - ರಾಣಿ

Updated on: Oct 30, 2025 | 12:29 PM

ಯುರೋಪಿನ ಮೊದಲ ಹಿಂದೂ ಕಲ್ಲಿನ ದೇವಾಲಯಕ್ಕೆ ಬ್ರಿಟನ್​​ನ ರಾಜ ಮತ್ತು ರಾಣಿ ಭೇಟಿ ನೀಡಿದ್ದಾರೆ. ದೇವಾಲಯ 30ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ರಾಜ ಚಾರ್ಲ್ಸ್ III (King Charles) ಹಾಗೂ ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಅವರ ಜತೆಗೆ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದ ಮುಂದೆ ದಂತಿಗಳಿಬ್ಬರು ನಿಂತಿರುವ ಫೋಟೋವನ್ನು ತಮ್ಮ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜ ಚಾರ್ಲ್ಸ್ III ದೇವಾಲಯದ ಆರಾಧಕರು ಹಾಗೂ ಅಧ್ಯಕ್ಷರನ್ನು, ಇತರ ಸಿಬ್ಬಂದಿಗಳನ್ನು ಭೇಟಿಯಾಗಿದ್ದಾರೆ. ಈ ಪೋಸ್ಟ್​​ನಲ್ಲಿ ದಿ ಫೆಲಿಕ್ಸ್ ಪ್ರಾಜೆಕ್ಟ್ ಮತ್ತು ವುಮೆನ್ ಆಫ್ ದಿ ವರ್ಲ್ಡ್ ಬಗ್ಗೆಯೂ ಉಲ್ಲೇಖಿಸಿದ್ದಾರೆ. ರಾಜ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ದೇವಾಲಯದ ಒಳಗೆ ನಡೆದ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ.

ಇನ್ನು ದೇವಾಲಯದ ಪುರೋಹಿತರು ರಾಜ ಮತ್ತು ರಾಣಿಯನ್ನು ದೇವಾಲಯದಲ್ಲಿ ಗುಲಾಬಿ ಮತ್ತು ಕಾರ್ನೇಷನ್‌ ಮಾಲೆ ಹಾಕಿ ಸ್ವಾಗತಿಸಿದ್ದಾರೆ. ಇನ್ನು ಬ್ರಿಟಿಷ್​​ ದೂರೆ ಕ್ರಿಶ್ಚಿಯನ್​​​ ಸಮುದಾಯದ ಸಂಪ್ರದಾಯವನ್ನು ಅನುಸರಿಸಿದ್ರೂ, ದೇವಾಲಯದಲ್ಲಿ ನೀಡುವ ಪವಿತ್ರ ದಾರವನ್ನು ಕೈಗೆ ಕಟ್ಟಿಸಿಕೊಂಡಿದ್ದಾರೆ. ಇನ್ನು ಇವರು ದೇವಾಲಯಕ್ಕೆ ಭೇಟಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಿಂದೂ ದೇವಾಲಯಕ್ಕೆ ಬ್ರಿಟಿಷ್​​ ದೊರೆ ಭೇಟಿ ನೀಡಿರುವ ಬಗ್ಗೆ ಟೀಕಿಸಿದ್ದಾರೆ. ಬ್ರಿಟಿಷ್​​ ದೊರೆಗಳು ಹಿಂದೂ ದೇವಾಲಯಕ್ಕೆ ಅಲ್ಲ ಚರ್ಚ್‌ಗೆ ಭೇಟಿ ನೀಡಬೇಕು ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ಈ ಭೇಟಿಯನ್ನು ಪ್ರಶಂಸಿದ್ದಾರೆ.

ಇದನ್ನೂ ಓದಿ: ನಾಲ್ಕು ನಿಮಿಷ ಮೊದಲೇ ಯಾಕೆ ಲಾಗ್ ಔಟ್ ಆಗಿದ್ದೀರಿ? ಎಚ್​ಆರ್​​ ಪ್ರಶ್ನೆಗೆ ಉದ್ಯೋಗಿ ತಬ್ಬಿಬ್ಬು

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

ಇದೊಂದು ಎಂತಹ ಸುಂದರ ಕ್ಷಣ ಎಂದು ಕೆಲವರು ಹೇಳಿದ್ದಾರೆ. ಒಬ್ಬ ಬಳಕೆದಾರ ನೀಸ್ಡೆನ್ ದೇವಾಲಯದ 30 ವರ್ಷಗಳು ಇದು ಶಾಂತಿ, ನಂಬಿಕೆ ಮತ್ತು ಒಗ್ಗಟ್ಟಿನ ನಿಜವಾದ ಸಂಕೇತ ಎಂದು ಹೇಳಿದ್ದಾರೆ. ರಾಜ ಉತ್ತಮ ಕೆಲಸ, ನಂಬಿಕೆಯ ರಕ್ಷಕ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಈ ಅದ್ಭುತ ಮೈಲಿಗಲ್ಲಿಗೆ ನೀಸ್ಡೆನ್ ದೇವಾಲಯಕ್ಕೆ ಅಭಿನಂದನೆಗಳು! ಇಂತಹ ಕೆಲಸಗಳು ನಡೆಯಲಿದ ಎಂದು ನಾನು ಆರೈಸುತ್ತೇನೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. 2009 ರಲ್ಲಿ ವೇಲ್ಸ್ ರಾಜಕುಮಾರ ತಮ್ಮ ಪತ್ನಿಯೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ. BAPS ಶ್ರೀ ಸ್ವಾಮಿನಾರಾಯಣ ಮಂದಿರ ಸಂಪೂರ್ಣವಾಗಿ ಪ್ರಾಚೀನ ವೈದಿಕ ವಾಸ್ತುಶಿಲ್ಪ ಗ್ರಂಥಗಳ ಪ್ರಕಾರ ಹಾಗೂ ಯಾವುದೇ ಆಧುನೀಕ ವೈಭವಗಳಿಲ್ಲದೆ ರಚನೆ ಮಾಡಲಾಗಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:21 pm, Thu, 30 October 25