Kissing Device Viral: ವಿರಹ ವೇದನಾ, ರಿಮೋಟ್ ಚುಂಬನ ಸಾಧನ; ಚೀನೀ ನಾವೀನ್ಯತೆಗೆ ನೆಟ್ಟಿಗರು ಶಾಕ್!

|

Updated on: Feb 26, 2023 | 2:59 PM

ಝೊಂಗ್ಲಿ ಅವರ ಈ ಆಧುನಿಕ ಸಾಧನ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ. 'ಕಿಸ್ಸಿಂಗ್ ಡಿವೈಸ್' ಎಂದು ಕರೆಯಲ್ಪಡುವ ಈ ಸಾಧನವು ಚೀನಾದ ಚಾಂಗ್‌ಝೌ ವಿಶ್ವವಿದ್ಯಾಲಯದ ಆವಿಷ್ಕಾರವಾಗಿದೆ. ಈ 'ಸಿಲಿಕೋನ್ ತುಟಿಗಳು,' ಪ್ರೆಷರ್​ ಸೆನ್ಸರ್​ಗಳಿಂದ ಮಾಡಲಾಗಿದೆ

Kissing Device Viral: ವಿರಹ ವೇದನಾ, ರಿಮೋಟ್ ಚುಂಬನ ಸಾಧನ; ಚೀನೀ ನಾವೀನ್ಯತೆಗೆ ನೆಟ್ಟಿಗರು ಶಾಕ್!
ಕಿಸ್ಸಿಂಗ್ ಡಿವೈಸ್
Image Credit source: Instagram
Follow us on

ಪ್ರೇಮಿಗಳು ತಮ್ಮ ಸಂಗಾತಿಯನ್ನು ಕಾಣಲು ಸದಾ ಹಾತೊರೆಯುತ್ತಿರುತ್ತಾರೆ. ಲಾಕ್ ಡೌನ್ ಸಮಯದಲ್ಲಂತೂ ಪ್ರೇಮಿಗಳ ಜೀವನ ಬಹಳ ಕಷ್ಟವಾಗಿತ್ತು. ಇದೇ ಸ್ಥಿತಿಯಲ್ಲಿ ಚೀನಾದ ಜಿಯಾಂಗ್ ಝೊಂಗ್ಲಿ ಎಂಬ ವ್ಯಕ್ತಿ ಕೂಡ ಇದ್ದ. ಝೊಂಗ್ಲಿ ತನ್ನ ಗೆಳತಿಯೊಂದಿಗೆ ಲಾಂಗ್-ಡಿಸ್ಟೆನ್ಸ್ ರಿಲೇಷನ್ಶಿಪ್ ಹೊಂದಿದ್ದ. ಒಬ್ಬರಿಗೊಬ್ಬರು ದೂರವಿರುವಾಗ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿತ್ತು. ದೂರವಿದ್ದ ಕಾರಣ ಅವರ ಸಂವಹನವು ಕೇವಲ ಫೋನ್ ಕರೆಗಳಿಗೆ ಸೀಮಿತವಾಗಿತ್ತು. ಈ ಸಮಯದಲ್ಲಿ ಝೊಂಗ್ಲಿ ದೂರವಿರುವ ಸಂಗಾತಿಗಳು ಎದುರಿಸುವ ಸವಾಲುಗಳನ್ನು ನಿವಾರಿಸಲು ಹೊಸ ಪರಿಹಾರವನ್ನು ಕಂಡುಕೊಂಡರು. ಸಂಗಾತಿಗಳು ವಾಸ್ತವ ನಿಕಟ ಕ್ಷಣಗಳನ್ನು ಹಂಚಿಕೊಳ್ಳಲು ಅನುಮತಿಸುವ ಸಾಧನ ಒಂದನ್ನು ಆವಿಷ್ಕರಿಸಲು ಜಿಯಾಂಗ್ ಝೊಂಗ್ಲಿ ಮುಂದಾದರು.

ಝೊಂಗ್ಲಿ ಅವರ ಈ ಆಧುನಿಕ ಸಾಧನ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ. ‘ಕಿಸ್ಸಿಂಗ್ ಡಿವೈಸ್’ ಎಂದು ಕರೆಯಲ್ಪಡುವ ಈ ಸಾಧನವು ಚೀನಾದ ಚಾಂಗ್‌ಝೌ ವಿಶ್ವವಿದ್ಯಾಲಯದ ಆವಿಷ್ಕಾರವಾಗಿದೆ. ಈ ‘ಸಿಲಿಕೋನ್ ತುಟಿಗಳು,’ ಪ್ರೆಷರ್​ ಸೆನ್ಸರ್​ಗಳಿಂದ ಮಾಡಲಾಗಿದೆ. ಈ ಸೆನ್ಸಾರ್ ನೀವು ಚುಂಬಿಸುವಾಗ ನಿಮ್ಮ ತುಟಿಗಳ ಒತ್ತಡವನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದೆ ಇದರಿಂದ ನಿಮ್ಮ  ಸಂಗಾತಿಯೇ ನಿಮ್ಮನ್ನು ಚುಂಬಿಸಿದ ಅನುಭವ ಪಡೆಯುತ್ತೀರಿ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ತಿಳಿಸಿದೆ.

ಈ ಚುಂಬನ ಸಾಧನವು ದೂರದ ದಂಪತಿಗಳಿಗೆ “ನೈಜ” ದೈಹಿಕ ಅನ್ಯೋನ್ಯತೆಯನ್ನು ಹಂಚಿಕೊಳ್ಳಲು ಒಂದು ಮಾರ್ಗವಾಗಿದೆ ಎಂದು ಹೇಳಲಾಗುತ್ತಿದೆ. ಸಾಧನವು ಚೀನೀ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲವನ್ನು ಸೃಷ್ಟಿಸಿದೆ. ಅನೇಕರು ತಮ್ಮ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ. ಈ ಸಾಧನಕ್ಕೆ ಚುಂಬನದ ಚಾಲನೆ ಮತ್ತು ಧ್ವನಿಯನ್ನು ಅನುಕರಣೆ ಮಾಡುವ ಸಾಮರ್ಥ್ಯ, ಲಾಂಗ್-ಡಿಸ್ಟೆನ್ಸ್ ರಿಲೇಷನ್ಶಿಪ್ ಅಲ್ಲಿರುವ ಜೋಡಿಗಳ ಕುತೂಹಲವನ್ನು ಕೆರಳಿಸಿದೆ.

ಈ ಸಾಧನವನ್ನು ಉಪಯೋಗಿಸಲು ಬಳಕೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಸಾಧನವನ್ನು ತಮ್ಮ ಫೋನ್‌ನ ಚಾರ್ಜಿಂಗ್ ಪೋರ್ಟ್‌ಗೆ ಸೇರಿಸಬೇಕು. ನಂತರ ಇಬ್ಬರೂ ವೀಡಿಯೊ ಕಾನ್ಫರೆನ್ಸ್​ ಅನ್ನು ಪ್ರಾರಂಭಿಸಬಹುದು ಮತ್ತು ಅಪ್ಲಿಕೇಶನ್ ಮೂಲಕ ತಮ್ಮ ಸಂಗಾತಿಗಳೊಂದಿಗೆ ಚುಂಬನವನ್ನು ಅನುಭವಿಸಬಹುದು.