ಕಾಲೇಜಿನ ತರಗತಿಯಲ್ಲಿ ವಿದ್ಯಾರ್ಥಿಯನ್ನು ಮದುವೆಯಾದ ಪ್ರಾಧ್ಯಾಪಕಿ

ಪಶ್ಚಿಮ ಬಂಗಾಳದ ಕಾಲೇಜಿನಲ್ಲಿ ಪ್ರಾಧ್ಯಾಪಕಿ ವಿದ್ಯಾರ್ಥಿಯನ್ನು ಮದುವೆಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಅವರು ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ಪ್ರಾಧ್ಯಾಪಕರನ್ನು ರಜೆಯ ಮೇಲೆ ಕಳುಹಿಸಿರುವ ಆಡಳಿತ ಇದು ಪ್ರಾಜೆಕ್ಟ್​ನಲ್ಲಿ ಭಾಗವಾಗಿತ್ತು ಎಂದು ಹೇಳಿದ್ದಾರೆ.ಬಂಗಾಳದ ಹರಿಂಗಟಾದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿಈ ಘಟನೆ ನಡೆದಿದೆ.

ಕಾಲೇಜಿನ ತರಗತಿಯಲ್ಲಿ ವಿದ್ಯಾರ್ಥಿಯನ್ನು ಮದುವೆಯಾದ  ಪ್ರಾಧ್ಯಾಪಕಿ
ಮದುವೆ
Image Credit source: India Today

Updated on: Jan 30, 2025 | 9:57 AM

ಪಶ್ಚಿಮ ಬಂಗಾಳದ ಕಾಲೇಜಿನ ತರಗತಿಯಲ್ಲೇ ಮಹಿಳಾ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಯನ್ನು ಮದುವೆಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಅವರು ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ಪ್ರಾಧ್ಯಾಪಕರನ್ನು ರಜೆಯ ಮೇಲೆ ಕಳುಹಿಸಿರುವ ಆಡಳಿತ ಇದು ಪ್ರಾಜೆಕ್ಟ್​ನಲ್ಲಿ ಭಾಗವಾಗಿತ್ತು ಎಂದು ಹೇಳಿದ್ದಾರೆ.

ಬಂಗಾಳದ ಹರಿಂಗಟಾದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿಈ ಘಟನೆ ನಡೆದಿದೆ. ಅಪ್ಲೈಡ್ ಸೈಕಾಲಜಿ ವಿಭಾಗದ ಅಧ್ಯಾಪಕರೊಬ್ಬರು ವಧುವಿನಂತೆ ಬಟ್ಟೆ ಧರಿಸಿ , ಹೂಮಾಲೆಯನ್ನು ಪರಸ್ಪರ ಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಆತ ಆಕೆಯ ಹಣೆಗೆ ಸಿಂಧೂರ ಇಟ್ಟಿದ್ದಾನೆ.

ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಜೊತೆಗೆ ಮೂವರು ಸಾಕ್ಷಿಗಳು ಸಹಿ ಮಾಡಿದ ಕೈಬರಹದ ಪ್ರಮಾಣಪತ್ರವೂ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಇದು ಕಾಲೇಜಿನ ಪ್ರಾಜೆಕ್ಟ್​ನ ಒಂದು ಭಾಗ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ. ವೀಡಿಯೊ ಪ್ರಸಾರವಾದ ನಂತರ, ವಿಶ್ವವಿದ್ಯಾಲಯದ ಅಧಿಕಾರಿಗಳು ವಿಚಾರಣೆಯನ್ನು ಪ್ರಾರಂಭಿಸಿದರು ಮತ್ತು ಪ್ರಾಧ್ಯಾಪಕರನ್ನು ರಜೆಯ ಮೇಲೆ ಕಳುಹಿಸಿದ್ದಾರೆ.

ಫ್ರೆಷರ್ ಪಾರ್ಟಿ ವೇಳೆ ಈ ಘಟನೆ ನಡೆದಿದೆ, ಇದು ಪ್ರಾಜೆಕ್ಟ್​ನ ಒಂದು ಭಾಗವಾಗಿತ್ತು, ನಮ್ಮ ಕಾಲೇಜಿನ ಪ್ರತಿಷ್ಠೆಗೆ ಧಕ್ಕೆ ತರಲು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಅದಕ್ಕೆ ಕಾರಣರಾದವರ ವಿರುದ್ಧ ಪೊಲೀಸ್ ದೂರು ದಾಖಲಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ನಾವು ಫ್ರೆಷರ್ ಪಾರ್ಟಿಗಾಗಿ ಯೋಜಿಸಿದ್ದ ನಾಟಕ. ಇದನ್ನು ನನ್ನ ವಿರುದ್ಧದ ಪಿತೂರಿಯ ಭಾಗವಾಗಿ ಉದ್ದೇಶಪೂರ್ವಕವಾಗಿ ವೈರಲ್ ಮಾಡಲಾಗಿದೆ.

ಮತ್ತಷ್ಟು ಓದಿ: ಕುಡುಕ ಗಂಡಂದಿರ ಕಾಟ ತಾಳಲಾರದೆ ಮನೆ ಬಿಟ್ಟು ಪರಸ್ಪರ ಮದುವೆಯಾದ ಇಬ್ಬರು ಮಹಿಳೆಯರು!

ನನ್ನ ಮಾನಹಾನಿ ಮಾಡಲು ಪ್ರಯತ್ನಿಸಿದವರ ವಿರುದ್ಧ ನಾನು ಪೊಲೀಸ್ ದೂರು ನೀಡುತ್ತೇನೆ ಎಂದು ಪ್ರಾಧ್ಯಾಪಕಿ ಕೂಡ ಹೇಳಿದ್ದಾರೆ. ಯಾವುದೇ ಅನುಚಿತತೆ, ಅನೈತಿಕ ನಡವಳಿಕೆ ಇಲ್ಲ ಮತ್ತು ಇದು ಸಂಪೂರ್ಣವಾಗಿ ಕಾಲೇಜಿಗೆ ಸಂಬಂಧ ಪಟ್ಟ ನಾಟಕದ ಭಾಗವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:52 am, Thu, 30 January 25

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us