ಕಾಡು ಪ್ರಾಣಿಗಳು ನೆಲೆಸಿರುವ ಕಾಡಿನಲ್ಲಿ ಮನುಷ್ಯರು ವಾಸಿಸುವುದು ಸುಲಭದ ಮಾತಲ್ಲ. ಕೇವಲ ಒಂದು ದಿನ ಕಳೆಯುವುದೇ ಕಷ್ಟವಾಗಿರುವ ಆ ಕಾಡಿನಲ್ಲಿ ಮೂರು ದಿನಗಳ ಕಾಲ ಇದ್ದು, ಕಾಡು ಪ್ರಾಣಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಂಡು, ಘೋರಾಕಾರ ಮಳೆಯಲ್ಲಿ ನೆಂದು ಪುನಃ ವಾಸಸ್ಥಾನಕ್ಕೆ ಮರಳಿದ 72 ವರ್ಷದ ವೃದ್ಧರ ಸಾಹಸಗಾಥೆ ಇಲ್ಲಿದೆ. ನಡೆದ ಘಟನೆ ಕೇಳಿದಾಕ್ಷಣ ಬೆರಗಾಗುವುದಂತೂ ಗ್ಯಾರೆಂಟಿ!
ಲಿರೋನಾರ್ಡ್ ಬೆರ್ರಿ ವೆಲ್ಲರ್ ಎನ್ನುವವರು ಥೈಲ್ಯಾಂಡ್ನ ಕಾಡಿನಲ್ಲಿ ಮೂರು ದಿನಗಳ ಕಾಲ ವಾಸುವಿದ್ದು ಬಳಿಕ ಹಿಂತಿರುಗಿದ್ದಾರೆ. ಕರಡಿ, ವಿಷಕಾರಿ ಹಾವುಗಳಿರುವ ಆ ಕಾಡಿನಲ್ಲಿ ರಾತ್ರಿಯಿಡೀ ಮಳೆಯಲ್ಲಿ ನೆಂದು ಬಂದಿರುವ ಇವರ ಸಾಹಸ ನಿಜವಾಗಿಯೂ ಆಶ್ಚರ್ಯವಾಗುವಂತಿದೆ. ಯುವಪೀಳಿಗೆಯೂ ಸಹ ಹುಬ್ಬೇರಿಸಿ ನೋಡುವಂತಹ ಘಟನೆ ಇದಾಗಿದೆ.
ತನ್ನ ಸ್ನೇಹಿತರನ್ನು ಭೇಟಿ ಮಾಡುವ ಉದ್ದೇಶದಿಂದ 72 ವರ್ಷದ ಲಿಯೋನಾರ್ಡ್ ಬೆರ್ರಿ ಅವರು ಬೈಕ್ ಹತ್ತಿ ಹೊರಟರು. ಆದರೆ ದಾರಿ ತಪ್ಪಿ ಈಶಾನ್ಯ ಥೈಲ್ಯಾಂಡ್ನ ಖೋನ್ ಕೇನ್ ಪ್ರಾಂತ್ಯದಲ್ಲಿ ಕಳೆದು ಹೋದರು. ದಾರಿ ಮಧ್ಯದಲ್ಲಿ ಬೈಕ್ ಕೂಡಾ ಅವರ ಕೈ ಬಿಟ್ಟಿತು. ಮನೆಗ ಬಾರದ ಅವರನ್ನು ಪತ್ನಿ ತವ್ನಿ ಲಿಯೋನಾರ್ಡ್ ಹುಡುಕಲು ಹೊರಟರು.
ಲಿಯೋನಾರ್ಡ್ ಬೆರ್ರಿ ಅವರು ದಾರಿಯನ್ನು ಹುಡುಕಲು ಕಾಡಿನ ಮರಗಳನ್ನು ಹತ್ತಿದರು. ಆದರೆ ಘೋರಾಕಾರ ಮಳೆಯಿಂದ ಅದು ಸಾಧ್ಯವಾಗಲಿಲ್ಲ. ರಾತ್ರಿಯಿಡೀ ಕಾಡಿನಲ್ಲಿಯೇ ಕಳೆಯುವಂತಾಯಿತು. 3 ದಿನಗಳ ಕಾಲ ಹಸಿದ ಹೊಟ್ಟೆಯಲ್ಲಿ, ಮಳೆ ನೀರು ಕುಡಿಯುತ್ತಾ ದಾರಿ ಹುಡುಕುತ್ತಾ ಇದೀಗ ಜನರನ್ನು ತಲುಪಿದ್ದಾರೆ.
ಯಾವುದೋ ಊರಿಗೆ ಬಂದು ತಲುಪಿದ ಅವರು ಜನರನ್ನು ಕಂಡು ಖುಷಿಯಾದರು. ಸ್ಥಳೀಯರು ಅವರಿಗೆ ಸಹಾಯ ಮಾಡಿ ಪೊಲೀಸರಿಗೆ ಮಾಹಿತಿ ತಿಳಿಸಿದರು. ಬಳಿಕ ಅವರನ್ನು ಸುಕ್ಷಿತವಾಗಿ ಮನೆಗೆ ತಲುಪಿಸಲಾಗಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.
ಲಿಯೋನಾರ್ಡ್ ಬೆರ್ರಿ ಅವರ ಕಾಲುಗಳಿಗೆ ಗಾಯಗಳಾಗಿದ್ದವು. ಕಾಲಿಗೆ ಚಪ್ಪಲಿಯೂ ಸಹ ಇರಲಿಲ್ಲ. ರಾತ್ರಿ ಎಲೆಗಳನ್ನು ಹಾಸಿಕೊಂಡು ಮಲಗುತ್ತಿದ್ದೆ ಎಂಬ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ನನಗೆ ಆಶ್ಚರ್ಯದ ಜತೆಗೆ ಸಂತೋಷವೂ ಆಗುತ್ತಿದೆ. ಹೆಚ್ಚು ಭಯವಾಗುತ್ತಲೂ ಇದೆ ಆದರೆ ಆರಾಮವಾಗಿದ್ದೇನೆ. 15 ವರ್ಷಗಳ ಕಾಲ ಥೈಲ್ಯಾಂಡ್ನಲ್ಲಿ ವಾಸಿಸುತ್ತಿದ್ದೇನೆ. ನನಗೆ ನನ್ನ ಊರು ಹೊಸದೇನಲ್ಲ. ಆದರೆ ಇಂತಹ ಘಟನೆ ಭೀಕರವಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟೈಮ್ಸ್ ನೌ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ:
Viral News: ನ್ಯೂಜಿಲೆಂಡ್ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?
Viral News: ಹೊಟೆಲ್ನಲ್ಲಿ ಆರ್ಡರ್ ಮಾಡಿದ ಊಟದ ಬೆಲೆ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!
(Leonard barry weller was recently rescued from a jungle in thailand)
Published On - 9:30 am, Mon, 6 September 21