Viral Video: ಜೇಡರಹುಳದಂತ ಹುಡುಗಿ ಇವಳು; ಗೋಡೆ ಹತ್ತುವ ವಿಚಿತ್ರ ಭಂಗಿಗೆ ನೆಟ್ಟಿಗರು ಫಿದಾ

Ffs OMG Vids ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದ್ದು, ಸ್ಪೈಡರ್ ಗರ್ಲ್​ ಎಂದು ಕ್ಯಾಪ್ಷನ್ ಬರೆಯಲಾಗಿದೆ. ಸೆಪ್ಟೆಂಬರ್​ 16ರಂದು ಅಪ್​ಲೋಡ್ ಆದ ವಿಡಿಯೋಕ್ಕೆ 3 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಬಂದಿವೆ.

Viral Video: ಜೇಡರಹುಳದಂತ ಹುಡುಗಿ ಇವಳು; ಗೋಡೆ ಹತ್ತುವ ವಿಚಿತ್ರ ಭಂಗಿಗೆ ನೆಟ್ಟಿಗರು ಫಿದಾ
ಗೋಡೆಯನ್ನು ಹತ್ತುವ ಸ್ಪೈಡರ್​ ಗರ್ಲ್​
Edited By:

Updated on: Sep 18, 2021 | 6:16 PM

ಇಂಟರ್​ನೆಟ್​ನಲ್ಲಿ ವೈರಲ್​ ಆಗುವ ಕೆಲವು ವಿಡಿಯೋ (Viral Videos)ಗಳು ಸಿಕ್ಕಾಪಟೆ ಕ್ಯೂಟ್​ ಆಗಿ ಇರುತ್ತವೆ. ಅದರಲ್ಲೂ ಚಿಕ್ಕಮಕ್ಕಳ ಸ್ಟಂಟ್​, ಡ್ಯಾನ್ಸ್​ಗಳ ವಿಡಿಯೋಗಳಂತೂ ನೋಡಲು ತುಂಬ ಖುಷಿಯಾಗುತ್ತದೆ. ಈಗ ಸುಮಾರು 5 ವರ್ಷದ ಬಾಲಕಿಯೊಬ್ಬಳು ತುಂಬ ಸಲೀಗಾಗಿ ಗೋಡೆ ಹತ್ತುವ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಅದನ್ನು ನೋಡಿದ ಜನರು ಈ ಬಾಲಕಿ ಪಕ್ಕಾ ಒಂದು ಜೇಡವೇ ಸರಿ ಎಂದಿದ್ದಾರೆ.  

ವಿಡಿಯೋದಲ್ಲಿ ಪುಟ್ಟ ಬಾಲಕಿ, ಎರಡು ಗೋಡೆಗಳು ಕೂಡುವ ಮೂಲೆಯಲ್ಲಿ ತನ್ನ ಎರಡೂ ಕೈಗಳು ಮತ್ತು ಎರಡೂ ಕಾಲುಗಳ ಮೂಲಕ ಹಿಮ್ಮುಖವಾಗಿ ಗೋಡೆ ಏರುವ ವಿಡಿಯೋ ನೋಡಿದರೆ ಅಬ್ಬಾ ಎನ್ನಿಸದೆ ಇರದು. ಇದು ನಿಜಕ್ಕೂ ವಿಭಿನ್ನ ವಿಡಿಯೋವೇ ಆಗಿದೆ. ಬಾಲಕಿ ಗೋಡೆಗೆ ಬೆನ್ನು ಹಾಕಿ ಸರಸರನೇ ಏರುತ್ತಾಳೆ. ಇನ್ನು ಸೀಲಿಂಗ್​ಗೆ ತಲೆ ತಾಗುವಂತೆ ನಿಂತು ಗೋಡೆ ಮೇಲೆ ವಿವಿಧ ಸ್ಟಂಟ್​ಗಳನ್ನೂ ಮಾಡಿದ್ದನ್ನು ನೀವು ನೋಡಬಹುದು. ಕೆಲ ನಿಮಿಷಗಳ ಕಾಲ ಅಲ್ಲಿಯೇ ಇದ್ದು ನಿಧಾನಕ್ಕೆ ಎರಡು ಸ್ಟೆಪ್​ ಕೆಳಗೆ ಇಳಿದು, ನೆಲಕ್ಕೆ ಹಾರುತ್ತಾಳೆ.

Ffs OMG Vids ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದ್ದು, ಸ್ಪೈಡರ್ ಗರ್ಲ್​ ಎಂದು ಕ್ಯಾಪ್ಷನ್ ಬರೆಯಲಾಗಿದೆ. ಸೆಪ್ಟೆಂಬರ್​ 16ರಂದು ಅಪ್​ಲೋಡ್ ಆದ ವಿಡಿಯೋಕ್ಕೆ 3 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಬಂದಿದ್ದು, 500ಕ್ಕೂ ಹೆಚ್ಚು ಬಾರಿ ಶೇರ್​ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರಂತೂ ಭರ್ಜರಿ ಖುಷಿ ವ್ಯಕ್ತಪಡಿಸಿ, ಕಾಮೆಂಟ್​ಗಳನ್ನು ಹಾಕಿದ್ದಾರೆ. ಕೆಲವು ಮೀಮ್ಸ್​ಗಳನ್ನೂ ತಯಾರಿಸಿ ಹಾಕಿದ್ದಾರೆ. ಇಷ್ಟು ಪುಟ್ಟ ಬಾಲಕಿಯಲ್ಲಿ ಅದ್ಭುತ ಕೌಶಲವಿದೆ ಎಂದು ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ..

ಇದನ್ನೂ ಓದಿ: ‘ವಿಷ್ಣು​-ಅಂಬಿ​ ಇಷ್ಟಪಡುತ್ತಿದ್ದ ಕಾರು ಇನ್ನೂ ನನ್ನ ಬಳಿ ಇದೆ’; ನಾಗತಿಹಳ್ಳಿ ಚಂದ್ರಶೇಖರ್​

ಸೈನಾ ಬಯೋಪಿಕ್​ಗಾಗಿ 30 ಕೆಜಿ ತೂಕ ಇಳಿಸಿಕೊಂಡ ಪರಿಣೀತಿ ಚೋಪ್ರಾಳ ಬದ್ದತೆಯನ್ನು ಬಾಲಿವುಡ್ ಬಹಳ ಮೆಚ್ಚುತ್ತಿದೆ!