AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈನಾ ಬಯೋಪಿಕ್​ಗಾಗಿ 30 ಕೆಜಿ ತೂಕ ಇಳಿಸಿಕೊಂಡ ಪರಿಣೀತಿ ಚೋಪ್ರಾಳ ಬದ್ದತೆಯನ್ನು ಬಾಲಿವುಡ್ ಬಹಳ ಮೆಚ್ಚುತ್ತಿದೆ!

ಸೈನಾ ಬಯೋಪಿಕ್​ಗಾಗಿ 30 ಕೆಜಿ ತೂಕ ಇಳಿಸಿಕೊಂಡ ಪರಿಣೀತಿ ಚೋಪ್ರಾಳ ಬದ್ದತೆಯನ್ನು ಬಾಲಿವುಡ್ ಬಹಳ ಮೆಚ್ಚುತ್ತಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 18, 2021 | 5:20 PM

Share

ಸಿಹಿತಿಂಡಿ, ಸ್ಪೈಸೀ ಆಹಾರ, ಆಕೆಗೆ ಅತ್ಯಂತ ಪ್ರಿಯವಾಗಿದ್ದ ಚಾಟ್ಸ್ ಮತ್ತು ಐಸ್ ಕ್ರೀಮನ್ನು ಸಿನಿಮಾದ ಶೂಟಿಂಗ್ ಮುಗಿಯುವವರೆಗೆ ಅಕೆ ಮುಟ್ಟಲೇ ಇಲ್ಲವಂತೆ. ಡಯಟ್ ನೊಂದಿಗೆ ಆಕೆ ವರ್ಕ್ಔಟ್ ಸಹ ಮಾಡುತ್ತಿದ್ದರು.

ಪ್ರಖ್ಯಾತ ಶಟ್ಲರ್ ಮತ್ತು ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕವೊಂದನ್ನು ಗೆದ್ದ ಖ್ಯಾತಿಯ ಸೈನಾ ನೆಹ್ವಾಲ್ ಅವರ ಬಯೋಪಿಕ್​ನಲ್ಲಿ ಲೀಡ್ ಪಾತ್ರ ನಿರ್ವಹಿಸಿ ಮನೋಜ್ಞ ಅಭಿನಯದ ಮೂಲಕ ಮೆಚ್ಚುಗೆಗೆ ಪಾತ್ರರಾಗಿರುವ ಪರಿಣಿತಿ ಚೋಪ್ರಾಗೆ ಪರಿಚಯದ ಅವಶ್ಯಕತೆಯಿಲ್ಲ. ಒಂದು ದಶಕದಿಂದ ಬಾಲಿವುಡ್​ನಲ್ಲಿ ಮಿಂಚುತ್ತಿರುವ ಪರಿಣಿತಿ ಇದುವರೆಗೆ ಸುಮಾರು 25 ಚಿತ್ರಗಳಲ್ಲಿ ನಟಿಸಿದ್ದಾರೆ.

ಪರಿಣಿತಿ ಸ್ವಾಭಾವಿಕ ಸುಂದರಿ. ಮಾಡ್ ಮತ್ತು ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲೂ ಅಂದವಾಗಿ ಕಾಣುತ್ತಾರೆ. ಸಿನಿಮಾರಂಗಕ್ಕೆ ಪ್ರವೇಶ ಮಾಡಿದಾಗ ಗುಂಡು ಗುಂಡಗೆ ಚಬ್ಬಿ ಚಬ್ಬಿಯಂತಿದ್ದ ಪರಿಣಿತಿ, ಸೈನಾ ಚಿತ್ರಕ್ಕಾಗಿ ಬಹಳ ಪ್ರರಿಶ್ರಮ ಪಟ್ಟರೆಂದು ಸಿನಿಮಾದ ನಿರ್ಮಾಪಕರು ಹೇಳುತ್ತಾರೆ. ಅಕೆಯ ಮೈಕಟ್ಟು ಒಬ್ಬ ಕ್ರೀಡಾಪಟುವಿನಂತೆ ಇರಲಿಲ್ಲ. ಸೈನಾ 55 ಕೆಜಿ ತೂಕದವರಾಗಿದ್ದರೆ ಪರಿಣಿತಿ 80 ಪ್ಲಸ್! ಹಾಗಾಗಿ ಆಕೆ ತಮ್ಮ ತೂಕ ಕಡಿಮೆ ಮಾಡಿಕೊಳ್ಳಲೇಬೇಕಿತ್ತು.

ಸಿನಿಮಾದ ನಿರ್ದೇಶಕ ಅಮೋಲ್ ಗುಪ್ತೆ ಅವರು ಪರಿಣಿತಿಯ ಬದ್ಧತೆ ಮತ್ತು ಸಂಕಲ್ಪವನ್ನು ಕೊಂಡಾಡಿದ್ದಾರೆ. ಸೈನಾರಂತೆ ಪರಿಣಿತಿ ಸಹ ಹರಿಯಾಣದವರು. ಅಂದರೆ, ಹರಿಯಾಣ ಮತ್ತು ಪಂಜಾಬ ರಾಜ್ಯದ ಜನ ಊಟದ ವಿಷಯದಲ್ಲಿ ಭಿಡೆ ಬಿನ್ನಾಣ ಇಲ್ಲದವರು. ಚೆನ್ನಾಗಿ ಊಟ ಮಾಡುತ್ತಾರೆ ಮತ್ತು ಅದಕ್ಕೆ ತಕ್ಕನಾಗಿ ಕೆಲಸವನ್ನೂ ಮಾಡುತ್ತಾರೆ. ಮಹಾ ತಿಂಡಿಪೋತೆಯಾಗಿದ್ದ ಪರಿಣಿತಿ ಅದ್ಯಾವ ಪರಿ ಡಯಟ್ ಮಾಡಿದರೆಂದರೆ ಕೆಲವೇ ತಿಂಗಳುಗಳಲ್ಲಿ ತಮ್ಮ ತೂಕವನ್ನು 55 ಕ್ಕೆ ಇಳಿಸಿಕೊಂಡರು.

ಸಿಹಿತಿಂಡಿ, ಸ್ಪೈಸೀ ಆಹಾರ, ಆಕೆಗೆ ಅತ್ಯಂತ ಪ್ರಿಯವಾಗಿದ್ದ ಚಾಟ್ಸ್ ಮತ್ತು ಐಸ್ ಕ್ರೀಮನ್ನು ಸಿನಿಮಾದ ಶೂಟಿಂಗ್ ಮುಗಿಯುವವರೆಗೆ ಅಕೆ ಮುಟ್ಟಲೇ ಇಲ್ಲವಂತೆ. ಡಯಟ್ ನೊಂದಿಗೆ ಆಕೆ ವರ್ಕ್ಔಟ್ ಸಹ ಮಾಡುತ್ತಿದ್ದರು. ಹಾಗಾಗೇ ಪರಿಣಿತಿಯ ಸಂಕಲ್ಪವನ್ನು ಗುಪ್ತೆ ಮೆಚ್ಚುತ್ತಾರೆ.

ಪರಿಣಿತಿಗೆ ಈಗ 32 ರ ಪ್ರಾಯ. ಇನ್ನೂ ಕೆಲ ವರ್ಷಗಳ ಕಾಲ ನಾಯಕಿಯಾಗಿ ನಟಿಸಲಿದ್ದಾರೆ. ನಟನೆಯಲ್ಲೂ ಆಕೆ ಅಪಾರ ಪ್ರತಿಭಾವಂತೆ ಅನ್ನೋದು ಸುಳ್ಳಲ್ಲ.

ಇದನ್ನೂ ಓದಿ:  Viral Video: ಪ್ಯಾರಾಗ್ಲೈಡಿಂಗ್​ ಮಾಡಿದ ಶ್ವಾನ; ನೆಟ್ಟಿಗರ ಮನಗೆದ್ದಿರುವ ಅಪರೂಪದ ವಿಡಿಯೊ ಇಲ್ಲಿದೆ