AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾರ್ಜೊ 50 ಸರಣಿ ಎರಡು ಪೋನ್​ಳೊಂದಿಗೆ ಬ್ಯಾಂಡ್ 2 ಗಡಿಯಾರ ಮತ್ತು 32-ಇಂಚ್ ಸ್ಮಾರ್ಟ್ ಟಿವಿ ಲಾಂಚ್ ಮಾಡಲಿದೆ ರೀಯಲ್ಮೆ

ನಾರ್ಜೊ 50 ಸರಣಿ ಎರಡು ಪೋನ್​ಳೊಂದಿಗೆ ಬ್ಯಾಂಡ್ 2 ಗಡಿಯಾರ ಮತ್ತು 32-ಇಂಚ್ ಸ್ಮಾರ್ಟ್ ಟಿವಿ ಲಾಂಚ್ ಮಾಡಲಿದೆ ರೀಯಲ್ಮೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Sep 27, 2021 | 4:39 PM

Share

ರಿಯಲ್ಮೆ ನಾರ್ಜೊ 50 ಸಿರೀಸ್ ಒಂದಿಗೆ ರಿಯಲ್ಮೆ ಬ್ಯಾಂಡ್ 2 ಮತ್ತು ರಿಯಲ್ಮೆ ಸ್ಮಾರ್ಟ್ ಟಿವಿ ನಿಯೋ 32-ಇಂಚ್ ಸಹ ಅದೇ ದಿನ ಲಾಂಚ್ ಆಗಲಿವೆಯೆಂದು ಕಂಪನಿ ತಿಳಿಸಿದೆ.

ಗ್ಯಾಜೆಟ್ ಮತ್ತು ಮೊಟಾರು ವಾಹನ ಕಂಪನಿಗಳು ತಮ್ಮ ಹೊಸ ಬ್ರ್ಯಾಂಡ್​​ಗಳನ್ನು  ಲಾಂಚ್ ಮಾಡಲು ಸೆಪ್ಟೆಂಬರ್ ತಿಂಗಳು ಪ್ರಶಸ್ತ ಅಂದುಕೊಂಡಂತಿದೆ. ಈ ತಿಂಗಳು ಮಾರ್ಕೆಟ್ ಬಿಡುಗಡೆಯಾಗಿರುವ ಹೊಸ ಪ್ರಾಡಕ್ಟ್​ಗಳ ಲೆಕ್ಕ ಇಡೋದು ಸಾಧ್ಯವಾಗುತ್ತಿಲ್ಲ. ರಿಯಲ್ಮೆ ನಾರ್ಜೊ 50 ಸಿರೀಸ್ ಸೆಪ್ಟೆಂಬರ್ 24ಕ್ಕೆ ಭಾರತದಲ್ಲಿ ಲಾಂಚ್ ಅಗೋದು ಪಕ್ಕಾ ಆಗಿದೆ ಮಾರಾಯ್ರೇ. ಸದರಿ ವಿಷಯವನ್ನು ಕಂಪನಿಯು ಮಾಧ್ಯಮ ಆಮಂತ್ರಣದ ಮೂಲಕ ಖಚಿತಪಡಿಸಿದೆ. ರಿಯಲ್ಮೆ ನಾರ್ಜೊ 50 ಸಿರೀಸ್ ಒಂದಿಗೆ ರಿಯಲ್ಮೀ ಬ್ಯಾಂಡ್ 2 ಮತ್ತು ರಿಯಲ್ಮೀ ಸ್ಮಾರ್ಟ್ ಟಿವಿ ನಿಯೋ 32-ಇಂಚ್ ಸಹ ಅದೇ ದಿನ ಲಾಂಚ್ ಆಗಲಿವೆಯೆಂದು ಕಂಪನಿ ತಿಳಿಸಿದೆ. ನರ್ಜೊ 50 ಸಿರೀಸ್ ನಲ್ಲಿ ರೀಯಲ್ಮೆ ಎರಡು ಪೋನ್​ಗಳನ್ನು ಮಾರ್ಕೆಟ್ ಗೆ ಬಿಡುಗಡೆ ಮಾಡುವ ಸಿದ್ಧತೆ ಮಾಡಿಕೊಂಡಿದೆ-ರೀಯಲ್ಮೆ ನಾರ್ಜೊ 50 ಮತ್ತು ನಾರ್ಜೊ 50 ಪ್ರೊ. ಸೋರಿಕೆ ಯ ಮೂಲಕ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಂಪನಿಯು ರಿಯಲ್ಮೀ ನರ್ಜೊ 50ಎ ಮಾಡೆಲ್ ಅನ್ನು ತಯಾರುಗೊಳಿಸುತ್ತಿದೆ.

ಕಂಪನಿಯ ಮಾಧ್ಯಮ ಆಮಂತ್ರಣ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯಪಡಿಸಿರುವ ಪ್ರಕಾರ ಲಾಂಚ್ ಈವೆಂಟ್ ಮಧ್ಯಾಹ್ನ 12.30 ಕ್ಕೆ ಆರಂಭವಾಗಲಿದೆ ಮತ್ತು ಇದು ವರ್ಚ್ಯುಯಲ್ ಆಗಿ ನಡೆಯಲಿದೆ. ರಿಯಲ್‌ಮಿ ನಾರ್ಜೊ 50 ಸರಣಿಯ ಆಗಮನವನ್ನು ಗೇಲಿ ಮಾಡುವ ಒಂದು ಮೀಸಲು ಪುಟವನ್ನು ಪ್ರಕಟಿಸಿದೆ ಮತ್ತು ಈ ಪುಟವು ಪ್ರಮುಖ ಸ್ಪೆಸಿಫೀಕೇಶನ್ಗಳನ್ನು ಸಹ ಕೀಟಲೆ ಮಾಡಿದೆ.

ಇದನ್ನು 12ಎನ್ ಎಮ್ ಮೀಡಿಯಾ ಟೆಕ್ ಹೆಲಿಯೋ ಜಿ85 ಆಕ್ಟಾ-ಕೋರ್ ಎಸ್ ಒ ಸಿ ನಿಂದ ಎಆರ್ ಎಮ್ ಮಲಿ ಜಿ52 ಜಿಪಿಯು ಜೊತೆ ಜೋಡಿಸಲಾಗಿದೆ ಎಂದು ಚುಡಾಯಿಸಲಾಗಿದೆ. ರಿಯಲ್ಮೀ ನಾರ್ಜೊ 50 ಸರಣಿಯು 6,000 ಎಮ್ ಎ ಎಚ್ ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು, ಅದು 53 ಗಂಟೆಗಳ ಸ್ಟ್ಯಾಂಡ್‌ಬೈ ಸಮಯ, 48 ಗಂಟೆಗಳ ಕರೆ, 111 ಗಂಟೆಗಳ ಸ್ಪೋಟಿಫೈ, 26 ಗಂಟೆಗಳ ವಾಟ್ಸಾಪ್ ಮತ್ತು 8 ಗಂಟೆಗಳ ಗೇಮಿಂಗ್ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ರಸ್ತೆ ಮಧ್ಯೆ ಕುಣಿದು ವಿಡಿಯೋ ಹರಿಬಿಟ್ಟ ಯುವತಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ನೋಟೀಸು ನೀಡಿದ ಪೊಲೀಸರು

Published on: Sep 18, 2021 04:07 PM