Viral Video: ಪ್ಯಾರಾಗ್ಲೈಡಿಂಗ್​ ಮಾಡಿದ ಶ್ವಾನ; ನೆಟ್ಟಿಗರ ಮನಗೆದ್ದಿರುವ ಅಪರೂಪದ ವಿಡಿಯೊ ಇಲ್ಲಿದೆ

ಶ್ವಾನಗಳು ಅತೀ ಬುದ್ಧಿವಂತ ಪ್ರಾಣಿಗಳು. ಇಲ್ಲೊಂದು ಶ್ವಾನ ತನ್ನ ಒಡೆಯನೊಂದಿಗೆ ಪ್ಯಾರಾಗ್ಲೈಡಿಂಗ್ ಸಾಹಸಕ್ಕೆ ಮುಂದಾಗಿದ್ದು, ಅದರ ವಿಡಿಯೊ ಈಗ ವೈರಲ್ ಆಗಿದೆ.

Viral Video: ಪ್ಯಾರಾಗ್ಲೈಡಿಂಗ್​ ಮಾಡಿದ ಶ್ವಾನ; ನೆಟ್ಟಿಗರ ಮನಗೆದ್ದಿರುವ ಅಪರೂಪದ ವಿಡಿಯೊ ಇಲ್ಲಿದೆ
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ (ಕೃಪೆ: Ouka.sam/ Instagram)
Follow us
TV9 Web
| Updated By: shivaprasad.hs

Updated on: Sep 10, 2021 | 6:33 PM

ಶ್ವಾನ ಪ್ರಿಯರು ತಮ್ಮ ನೆಚ್ಚಿನ ಸಾಕು ಪ್ರಾಣಿಗಾಗಿ ಎಂತಹುದೇ ಕಾರ್ಯವನ್ನು ಮಾಡಲು ಸಿದ್ಧರಾಗಿರುತ್ತಾರೆ. ಅವುಗಳನ್ನು ವಿವಿಧ ಟ್ರಿಪ್​​ಗಳಿಗೆ, ಅಡ್ವೆಂಚರ್​​ಗಳಿಗೆ ಅವರು ಕರೆದೊಯ್ಯುತ್ತಾರೆ. ನಾಯಿಗಳು ಕೂಡ ತಮ್ಮ ಮಾಲಿಕರ ಕಂಪೆನಿಯನ್ನು ಸಖತ್ ಎಂಜಾಯ್ ಮಾಡುತ್ತವೆ. ಅಂಥದ್ದೇ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಇದರಲ್ಲಿ ನಾಯಿಯೊಂದರ ಮಾಲಿಕ, ತನ್ನ ನೆಚ್ಚಿನ ನಾಯಿಯೊಂದಿಗೆ ಪ್ಯಾರಾಗ್ಲೈಡಿಂಗ್ ಮಾಡಿದ್ದಾನೆ. ನಾಯಿಯೂ ಇದನ್ನು ಸಖತ್ ಎಂಜಾಯ್ ಮಾಡಿದ್ದು, ನೋಡುಗರು ಅದನ್ನು ಕಣ್ತುಂಬಿಕೊಂಡಿದ್ದಾರೆ.

1 ನಿಮಿಷದ ವೈರಲ್ ಕ್ಲಿಪ್‌ನಲ್ಲಿ, ನಾಯಿ ಮತ್ತು ಮಾಲೀಕ ಪರ್ವತಗಳ ನಡುವೆ ಪ್ಯಾರಾಗ್ಲೈಡಿಂಗ್ ಮಾಡುತ್ತಿರುವುದನ್ನು ನೀವು ನೋಡಬಹುದು. ನಾಯಿ ಮತ್ತು ಮಾಲೀಕರು ಆ ಸುಂದರ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ನಾಯಿಯ ಪ್ರತಿಕ್ರಿಯೆಯನ್ನು ನೋಡಿದಾಗ, ಅದು ತನ್ನೊಡೆಯನ ಸಾಂಗತ್ಯವನ್ನು ಎಷ್ಟು ಇಷ್ಟಪಡುತ್ತದೆ ಎಂದು ವೇದ್ಯವಾಗುತ್ತದೆ. ನೆಟ್ಟಿಗರ ಮನಗೆದ್ದ, ನಾಯಿಯ ಪ್ಯಾರಾಗ್ಲೈಡಿಂಗ್ ವಿಡಿಯೊ ಇಲ್ಲಿದೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊ:

ಇದುವರೆಗೆ ಈ ಶ್ವಾನವು ನಾಲ್ಕು ಬಾರಿ ಪ್ಯಾರಾಗ್ಲೈಡಿಂಗ್​ನಲ್ಲಿ ಭಾಗಿಯಾಗಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆಯಲಾಗಿದೆ. ಅದರ ಒಡೆಯ ಅದರ ಇಚ್ಛೆಯಂತೆ ಅಡ್ವೆಂಚರ್​ಗೆ ಕರೆದೊಯ್ದಿದ್ದೇನೆ ಎಂದಿದ್ದು, ಆ ನಾಯಿ ತುಂಬಾ ಕೂಲ್ ಆಗಿ ಅದನ್ನು ಸ್ವೀಕರಿಸಿದೆಯಂತೆ. ವಿಡಿಯೊ ನೋಡಿದವರಿಗೆ ಶ್ವಾನ ಎಂಜಾಯ್ ಮಾಡುತ್ತಿರುವುದು ಅನುಭವಕ್ಕೆ ಬಂದೀತು.

ಇನ್ಸ್ಟಾಗ್ರಾಂನಲ್ಲಿ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ನಾಯಿಯ ಧೈರ್ಯಕ್ಕೆ ಕೊಂಡಾಡಿದ್ದಾರೆ. ತಾನಂತೂ ಇಂತಹ ಶ್ವಾನವನ್ನು ನೋಡಿಯೇ ಇಲ್ಲ ಎಂದು ಹಲವರು ಬರೆದುಕೊಂಡಿದ್ದಾರೆ. ಮತ್ತೆ ಕೆಲವರು ನಾಯಿಯಿ ಇಚ್ಛೆ ಪೂರೈಸಿದ ಶ್ವಾನದ ಮಾಲಿಕ ಕೂಡ ಮೆಚ್ಚುಗೆಗೆ ಅರ್ಹ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

ಮಕ್ಕಳನ್ನು ಸವಾರಿಗೆ ಕರೆದೊಯ್ಯುತ್ತಿರುವ ತಾಯಿ ಮುಳ್ಳುಹಂದಿ; ಮುದ್ದಾದ ವಿಡಿಯೊ ನೋಡಿ

Viral Video: ಮದುವೆ ದಿನದಂದೇ ಮೊಬೈಲ್​ನಲ್ಲಿ ಗೇಮ್ ಆಡುತ್ತಾ ಕುಳಿತ ವಧು ವರರು; ವಿಡಿಯೋ ವೈರಲ್

(A dog paragliding with his owner won the hearts of people see the video)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್