‘ಮಾಸ್ಕ್​ ಧರಿಸಿ ವ್ಯಾಕ್ಸಿನ್ ಹಿಡಿದ ಗಣಪ’ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗಣೇಶ ಚತುರ್ಥಿಗೆ ಶುಭಾಶಯ

Ganesh Chaturthi 2021: ಗಣೇಶ ಒಂದು ಕೈಯ್ಯಲ್ಲಿ ವ್ಯಾಕ್ಸಿನ್ ಹಿಡಿದಿದ್ದಾನೆ. ಜತೆಗೆ ಮುಖಗವಸಿನ ವಿನ್ಯಾಸದೊಂದಿಗೆ ಗಣಪನ ಚಿತ್ರ ರಚಿಸಲಾಗಿದೆ. ಹಬ್ಬದ ಸಂಭ್ರಮದ ಜತೆಗೆ ಸಾಂಕ್ರಾಮಿಕದ ಬಗ್ಗೆ ಗಮನವಿರಲಿ ಎಂಬ ಸಾರವನ್ನು ಆರೋಗ್ಯ ಇಲಾಖೆ ಸಾರುತ್ತಿದೆ.

'ಮಾಸ್ಕ್​ ಧರಿಸಿ ವ್ಯಾಕ್ಸಿನ್ ಹಿಡಿದ ಗಣಪ' ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗಣೇಶ ಚತುರ್ಥಿಗೆ ಶುಭಾಶಯ
ಮಾಸ್ಕ್​ ಧರಿಸಿ ವ್ಯಾಕ್ಸಿನ್ ಹಿಡಿದ ಗಣಪ

ಹಬ್ಬದ ಆಚರಣೆಯ ಜತೆಗೆ ಆರೋಗ್ಯವನ್ನು ಮರೆಯುವಂತಿಲ್ಲ. ಕೊವಿಡ್​19 ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ತಂದಿರುವ ನಿಯಮಾವಳಿಗಳನ್ನು ಹಬ್ಬದ ನಡುವೆ ಮರೆಯದಿರಿ ಎನ್ನುತ್ತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ವಿನ್ಯಾಸದೊಂದಿಗೆ ಚಿತ್ರಿಸಲಾದ ಗಣಪನ ಚಿತ್ರದೊಂದಿಗೆ ಹಬ್ಬದ ಶುಭಾಶಯ ತಿಳಿಸಿದೆ. ಮುಖಗವಸು ವಿನ್ಯಾಸದೊಂದಿಗೆ ತಯಾರಿಸಿದ ಗಣಪನ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದೆ.

ಮುಖಗವಸು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ. ಪ್ರಸ್ತುತದ ಪರಿಸ್ಥಿತಿಯಲ್ಲಿ ಆರೋಗ್ಯದ ಕುರಿತಾಗ ಜನರು ನಿಗಾ ಇಡಲೇಬೇಕು. ಹಾಗಾಗಿ ನಿಯಮಗಳನ್ನು ಎಲ್ಲರೂ ಪಾಲಿಸಿ ಎಂಬ ಉದ್ದೇಶದೊಂದಿಗೆ ವಿನ್ಯಾಸಗೊಳಿಸಲಾದ ಈ ಚಿತ್ರ ಎಲ್ಲರಿಗೆ ಆಕರ್ಷಕವಾಗಿದೆ. ಗಣೇಶ ಒಂದು ಕೈಯ್ಯಲ್ಲಿ ವ್ಯಾಕ್ಸಿನ್ ಹಿಡಿದಿದ್ದಾನೆ. ಜತೆಗೆ ಮುಖಗವಸಿನ ವಿನ್ಯಾಸದೊಂದಿಗೆ ಗಣಪನ ಚಿತ್ರ ರಚಿಸಲಾಗಿದೆ. ಹಬ್ಬದ ಸಂಭ್ರಮದ ಜತೆಗೆ ಸಾಂಕ್ರಾಮಿಕದ ಬಗ್ಗೆ ಗಮನವಿರಲಿ ಎಂಬ ಸಾರವನ್ನು ಆರೋಗ್ಯ ಇಲಾಖೆ ಸಾರುತ್ತಿದೆ.

ಗೌರಿ ಗಣೇಶ ಹಬ್ಬದ ಶುಭಾಶಯಗಳು. ಆರೋಗ್ಯ ಸಹಾಯವಾಣಿಗೆ 104ಕ್ಕೆ ಕರೆ ಮಾಡಿ. ಎಲ್ಲರಿಗೂ ಆರೋಗ್ಯ, ಎಲ್ಲಡೆಯೂ ಆರೋಗ್ಯ ಎಂಬ ಉದ್ದೇಶದ ಜತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದೆ.

ಇದನ್ನೂ ಓದಿ:

ಕೋವಿಡ್​ ಮೂರನೇ ಅಲೆ ಭಾರತವನ್ನು ಅಪ್ಪಳಿಸದಂತೆ ತಡೆಯುವ ಗುರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದಾರೆ: ಆರೋಗ್ಯ ಇಲಾಖೆ

3ನೇ ಡೋಸ್ ಕೊರೊನಾ ಲಸಿಕೆ ವಿತರಣೆಗೆ ಚಿಂತನೆ; ಐಸಿಎಂಆರ್​ ಅನುಮತಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ

(Ganesha with mask Greetings to Ganesh Chaturthi 2021 from Department of Health and Family Welfare)

Read Full Article

Click on your DTH Provider to Add TV9 Kannada