ಬೆಂಗಳೂರು: ಚಿತ್ರಹಿಂಸೆ ನೀಡಿ 10 ವರ್ಷ ಬಾಲಕನ ಹತ್ಯೆ; ತಾಯಿ ಹಾಗೂ ರೌಡಿ ಶೀಟರ್ ಬಂಧನ
ಬೆಂಗಳೂರಿನಲ್ಲಿ 10 ವರ್ಷದ ಬಾಲಕನೊಬ್ಬನ ಹತ್ಯೆಯ ಆಘಾತಕಾರಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಯಿ ಹಾಗೂ ರೌಡಿ ಶೀಟರ್ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನಲ್ಲಿ 10 ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪತಿ ತೊರೆದಿದ್ದರಿಂದ ಮಗುವನ್ನು ನೋಡಿಕೊಳ್ಳಲು ಕಷ್ಟವಾಗಿದ್ದ ತಾಯಿಯೊಬ್ಬಳು, ಅದನ್ನು ರೌಡಿಶೀಟರ್ ಬಳಿ ಬಿಟ್ಟಿದ್ದಳು. ಆದರೆ ಮಗುವಿಗೆ ಪ್ರತಿ ದಿನವೂ ಚಿತ್ರಹಿಂಸೆ ನೀಡಿ ರೌಡಿಶೀಟರ್ ತೊಂದರೆ ಕೊಡುತ್ತಿದ್ದ. ಫೆಬ್ರವರಿಯಲ್ಲಿ ಕೊಠಡಿಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಾಗ, ಬಾಲಕ ಪ್ರಾಣ ಬಿಟ್ಟಿದ್ದ. ನಂತರ ಶವವನ್ನು ತಾಯಿ ಹಾಗೂ ರೌಡಿಶೀಟರ್ ತಮಿಳುನಾಡಿಗೆ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದರು. ಕೊಲೆ ಪ್ರಕರಣ ದಾಖಲಿಸಿದ್ದ, ತಮಿಳುನಾಡು ಪೊಲೀಸರಿಗೆ ಗುರುತು ಪತ್ತೆಯಾಗಿರಲಿಲ್ಲ. 7 ತಿಂಗಳ ನಂತರ ಬಾಲಕನ ತಾಯಿ ನಾಪತ್ತೆಯ ಪ್ರಕರಣ ದಾಖಲಿಸಿದ್ದರು. ತನಿಖೆಕೈಗೊಂಡ ಪೊಲೀಸರಿಗೆ ಹತ್ಯೆಯ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ: ಗಂಡ ಬಿಟ್ಟಿದ್ದರಿಂದ ಮಗು ನೋಡಿಕೊಳ್ಳುವುದು ಕಷ್ಟವಾಗಿದ್ದ ತಾಯಿ, ಮೈಕೊಲೇಔಟ್ ವ್ಯಾಪ್ತಿಯ ರೌಡಿಶೀಟರ್ ಬಳಿ ಮಗುವನ್ನು ಜನವರಿಯಲ್ಲಿ ಬಿಟ್ಟಿದ್ದಳು. ಮಗು ನೋಡಿಕೊಳ್ಳುತ್ತೇನೆ ಎಂದಿದ್ದ ಆತ ಬಾಲಕನಿಗೆ ಪ್ರತಿದಿನವೂ ದೈಹಿಕ ಹಿಂಸೆ ನೀಡುತ್ತಿದ್ದ. ಕೊಠಡಿಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದುದರಿಂದ ಫೆಬ್ರವರಿ ತಿಂಗಳಲ್ಲಿ ಬಾಲಕ ಪ್ರಾಣಬಿಟ್ಟಿದ್ದ. ನಂತರ ತಮಿಳುನಾಡಿಗೆ ಬಾಲಕನ ಶವ ಸಾಗಿಸಿದ್ದ ಅವರು, ನಿರ್ಜನ ಪ್ರದೇಶದಲ್ಲಿ ಬಾಲಕನ ಮೃತದೇಹ ಎಸೆದಿದ್ದರು.
ಮರಣೋತ್ತರ ಪರೀಕ್ಷೆ ಮಾಡಿಸಿದ್ದ ತಮಿಳುನಾಡು ಪೊಲೀಸರಿಗೆ ಬಾಲಕನ ಗುರುತು ಪತ್ತೆಯಾಗಿರಲಿಲ್ಲ. ಅವರು ಕೊಲೆ ಪ್ರಕರಣವನ್ನು ದಾಖಲಿಸಿದ್ದರು. 7 ತಿಂಗಳ ನಂತರ ಬಾಲಕನ ತಾಯಿ ಮೈಕೋಲೇಔಟ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಳು. ಬಾಲಕ ಯಾವಾಗಿನಿಂದ ನಾಪತ್ತೆ ಎಂದು ಪೊಲೀಸರು ಪ್ರಶ್ನಿಸಿ ತನಿಖೆ ಕೈಗೊಂಡಾಗ ದೈಹಿಕ ಹಿಂಸೆ ನೀಡಿ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಕೊಲೆ ಪ್ರಕರಣ ದಾಖಲಿಸಿ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದ್ದು, ರೌಡಿಶೀಟರ್ ಹಾಗೂ ತಾಯಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:
10 ವರ್ಷ ಬಾಲಕನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ತಾಯಿ, ರೌಡಿ ಶೀಟರ್ ಹಾಗೂ ಆತನ ಪ್ರೇಯಸಿಯನ್ನು ಬಂಧಿಸಿದ ಪೊಲೀಸರು
Coronavirus cases in India: ದೇಶದಲ್ಲಿ 34,973 ಹೊಸ ಕೊವಿಡ್ ಪ್ರಕರಣ ಪತ್ತೆ, 260 ಮಂದಿ ಸಾವು
Ford India: ಉತ್ಪಾದನೆ ನಿಲ್ಲಿಸುವುದಾಗಿ ಫೋರ್ಡ್ ಇಂಡಿಯಾ ಘೋಷಣೆ; ಡೀಲರ್ಗಳ 2 ಸಾವಿರ ಕೋಟಿ ರೂ. ಕಥೆ ಏನು?
(A 10 year old boy killed in Bengaluru mother and a rowdy sheeter are arrested by police)
Published On - 11:42 am, Fri, 10 September 21