ಬೆಂಗಳೂರು: ರಾಜಕುಮಾರ್ ರಸ್ತೆಯಲ್ಲಿ ಮೂರು ಸರ್ಕಾರಿ ಬಸ್ಗಳ ನಡುವೆ ಡಿಕ್ಕಿ, ಹಲವರಿಗೆ ಗಾಯ
2 ಕೆಎಸ್ಆರ್ಟಿಸಿ ಬಸ್, 1 ವಾಯವ್ಯ ಸಾರಿಗೆ ಬಸ್ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ಮೂರು ಸರ್ಕಾರಿ ಬಸ್ಗಳು ಡಿಕ್ಕಿ ಹೊಡೆದು, ಬಸ್ಗಳಲ್ಲಿದ್ದ ಪ್ರಯಾಣಿಕರಿಗೆ ಗಾಯವಾದ ಘಟನೆ ಬೆಂಗಳೂರು ನಗರದ ರಾಜ್ಕುಮಾರ್ ರಸ್ತೆಯಲ್ಲಿ ಸಂಭವಿಸಿದೆ. 2 ಕೆಎಸ್ಆರ್ಟಿಸಿ ಬಸ್, 1 ವಾಯವ್ಯ ಸಾರಿಗೆ ಬಸ್ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಗಲಕೋಟೆ: ಚಿಕ್ಕಪಡಸಲಗಿ ಸೇತುವೆಯ ಮೇಲೆ ಕಾರು ಅಪಘಾತ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಕಾರು ಅಪಘಾತ ಸಂಭವಿಸಿದೆ. ತಡೆಗೋಡೆ ಮಧ್ಯೆ ಸಿಲುಕಿ ಕಾರು ನೇತಾಡುತ್ತಿದ್ದು, ಕಾರಿನ ಚಾಲಕ ಅಪಘಾತದ ಬಳಿಕ ನಾಪತ್ತೆಯಾಗಿದ್ದಾರೆ. ಸದ್ಯ ಈ ಸಂಬಂಧ ಜಮಖಂಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಕಾರು-ಲಾರಿ ಮುಖಾಮುಖಿ ಡಿಕ್ಕಿ ಗೌರಿ ಹಬ್ಬಕ್ಕೆ ಅಕ್ಕನ ಕರೆದೊಯ್ಯಲು ಬಂದ ಯುವಕ ಹಾಗೂ ಅಕ್ಕನ ಮಗು ಕೊನೆಯುಸಿರೆಳೆದಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿಲುವಾಗಿಲು ಬಳಿ ಅಕ್ಕ-ಭಾವ ಹಾಗೂ ಮಗುವನ್ನ ಜೊತೆಯಲ್ಲೇ ತವರಿಗೆ ಕರೆದೊಯ್ಯುವಾಗ ಈ ಭೀಕರ ಅಪಘಾತವಾಗಿದೆ. ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ ಶಂಕರ್(22) ಹಾಗೂ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಲಾಳನಪುರದ ಶಂಕರ್ ಹಾಗು ಅರಕಲಗೂಡಿನ ಮಗು ಮೃತಪಟ್ಟವರು. ಗೌರಿ ಗಣೇಶ ಹಬ್ಬಕ್ಕಾಗಿ ಅಕ್ಕನಿಗೆ ಬಾಗಿನ ಕೊಟ್ಟು ಹಬ್ಬಕ್ಕೆ ಕರೆದೊಯ್ಯುತ್ತಿದ್ದ ತಮ್ಮ ಹಬ್ಬಕ್ಕೆಂದು ರಜೆ ಮೇಲೆ ಊರಿಗೆ ಬಂದಿದ್ದ ಬಿ.ಎಸ್.ಎಫ್ ಯೋಧ. ಮಧು ಮತ್ತು ಪತ್ನಿ ಚೈತ್ರಾಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಅರಕಲಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗೌರಿ ಹಬ್ಬಕ್ಕೆ ಅಕ್ಕನ ಕರೆದೊಯ್ಯಲು ಬಂದ ಯುವಕ ಹಾಗೂ ಅಕ್ಕನ ಮಗು ಕೊನೆಯುಸಿರೆಳೆದಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿಲುವಾಗಿಲು ಬಳಿ ಅಕ್ಕ-ಭಾವ ಹಾಗೂ ಮಗುವನ್ನ ಜೊತೆಯಲ್ಲೇ ತವರಿಗೆ ಕರೆದೊಯ್ಯುವಾಗ ಈ ಭೀಕರ ಅಪಘಾತವಾಗಿದೆ. ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ ಶಂಕರ್(22) ಹಾಗೂ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಲಾಳನಪುರದ ಶಂಕರ್ ಹಾಗು ಅರಕಲಗೂಡಿನ ಮಗು ಮೃತಪಟ್ಟವರು. ಗೌರಿ ಗಣೇಶ ಹಬ್ಬಕ್ಕಾಗಿ ಅಕ್ಕನಿಗೆ ಬಾಗಿನ ಕೊಟ್ಟು ಹಬ್ಬಕ್ಕೆ ಕರೆದೊಯ್ಯುತ್ತಿದ್ದ ತಮ್ಮ ಹಬ್ಬಕ್ಕೆಂದು ರಜೆ ಮೇಲೆ ಊರಿಗೆ ಬಂದಿದ್ದ ಬಿ.ಎಸ್.ಎಫ್ ಯೋಧ. ಮಧು ಮತ್ತು ಪತ್ನಿ ಚೈತ್ರಾಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಅರಕಲಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಪಾದಚಾರಿಗೆ KSRTC ಬಸ್ ಡಿಕ್ಕಿ: ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವು
Accident In majestic: ಮೆಜೆಸ್ಟಿಕ್ನಲ್ಲಿ ಕೆಎಸ್ಆರ್ಟಿಸಿ ವೋಲ್ವೋ ಬಸ್ ಅಪಘಾತ; ವ್ಯಕ್ತಿ ಸಾವು
Published On - 12:33 pm, Fri, 10 September 21