ಗಣೇಶ ಮೂರ್ತಿ ಮಾರಾಟಕ್ಕೆ ತಯಾರಕರ ವಿಭಿನ್ನ ತಂತ್ರ; ಖರೀದಿಸಿದ ಗಣಪತಿ ಹಿಂದಿರುಗಿಸಿದರೆ 10 ಸಾವಿರ ರೂ. ವಾಪಾಸ್
ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಮೂರ್ತಿ ಎತ್ತರ ನಗದಿಯ ಬಿಬಿಎಂಪಿ ಮಾರ್ಗಸೂಚಿ ಹಿನ್ನಲೆ ಎತ್ತರದ ಮೂರ್ತಿಗಳ ವಿಸರ್ಜನೆಯಿಂದ ಪರಿಸರ ಹಾನಿ ತಡೆಯಲು ಯೋಜನೆ ರೂಪಿಸಲಾಗಿದೆ. ದೊಡ್ಡ ಮೂರ್ತಿ ಜೊತೆಗೆ ಚಿಕ್ಕದಾದ ಪರಿಸರ ಸ್ನೇಹಿ ಮೂರ್ತಿ ನೀಡಲಾಗುತ್ತಿದ್ದು, ಚಿಕ್ಕದಾದ ಪರಿಸರ ಸ್ನೇಹಿ ಮೂರ್ತಿ ಮಾತ್ರ ವಿಸರ್ಜನೆ ಮಾಡಬೇಕು.
ಬೆಂಗಳೂರು: ಗಣೇಶನ ಮೂರ್ತಿಗಳನ್ನು ಮಾರಾಟ ಮಾಡಲು ತಯಾರಕರು ವಿಭಿನ್ನ ತಂತ್ರ ರೂಪಸಿದ್ದಾರೆ. ಗಣಪತಿ ವಿಗ್ರಹಗಳನ್ನು ಬಾಡಿಗೆಗೆ ನೀಡಲು ಯೋಜನೆ ರೂಪಿಸಿದ್ದು, 10 ಅಡಿ ಗಣೇಶ ಮೂರ್ತಿಗೆ 20 ಸಾವಿರ ರೂಪಾಯಿ ದರ ನಿಗದಿ ಮಾಡಿದ್ದಾರೆ. ಗಣಪತಿ ವಿಗ್ರಹವನ್ನು ಖರೀದಿ ಮಾಡಿ ಹಿಂದಿರುಗಿಸಿದರೆ 10 ಸಾವಿರ ರೂಪಾಯಿ ವಾಪಾಸ್ ನೀಡಲಾಗುವುದು.
ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಮೂರ್ತಿ ಎತ್ತರ ನಗದಿಯ ಬಿಬಿಎಂಪಿ ಮಾರ್ಗಸೂಚಿ ಹಿನ್ನಲೆ ಎತ್ತರದ ಮೂರ್ತಿಗಳ ವಿಸರ್ಜನೆಯಿಂದ ಪರಿಸರ ಹಾನಿ ತಡೆಯಲು ಯೋಜನೆ ರೂಪಿಸಲಾಗಿದೆ. ದೊಡ್ಡ ಮೂರ್ತಿ ಜೊತೆಗೆ ಚಿಕ್ಕದಾದ ಪರಿಸರ ಸ್ನೇಹಿ ಮೂರ್ತಿ ನೀಡಲಾಗುತ್ತಿದ್ದು, ಚಿಕ್ಕದಾದ ಪರಿಸರ ಸ್ನೇಹಿ ಮೂರ್ತಿ ಮಾತ್ರ ವಿಸರ್ಜನೆ ಮಾಡಬೇಕು. ದೊಡ್ಡ ಮೂರ್ತಿ ಹಿಂದುರುಗಿಸಿ ಡಿಪಾಸಿಟ್ ಹಣ ವಾಪಸ್ ಪಡಿಯುವಂತೆ ಷರತು ಹಾಕಿ ಬಾಡಿಗೆ ನೀಡಲಾಗುತ್ತಿದೆ. ಈಗಾಗಲೇ 9 ಮಂದಿ ರೆಂಟ್ ಗಣೇಶ ಬುಕಿಂಗ್ ಮಾಡಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಗಣೇಶ್ ಹಬ್ಬದ ಸಂಭ್ರಮ ಕಡಿಯಾಳಿಯಲ್ಲಿ ಮಾರಾಟಕ್ಕೆ ಗಣೇಶ ಮೂರ್ತಿಗಳು ಸಿದ್ಧವಾಗಿದ್ದು, ಮೂರ್ತಿಗಳ ಖರೀದಿಗೆ ಮುಂಜಾನೆಯಿಂದಲೇ ಜನರು ಆಗಮಿಸುತ್ತಿದ್ದಾರೆ. ಈಗಾಗಲೇ ಗಣೇಶಮೂರ್ತಿ ಬುಕ್ಕಿಂಗ್ ಮಾಡಿ ಖರೀದಿಗೆ ಸಾರ್ವಜನಿಕರು ಮುಂದಾಗಿದ್ದಾರೆ. ಕಳೆದ ವರ್ಷಕ್ಕಿಂತ ಉತ್ತಮ ವ್ಯಾಪಾರವಾಗಿದೆ. ಗಣೇಶ ಹಬ್ಬದ ಆಚರಣೆ ಐದು ದಿನಗಳ ಕಾಲ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ಅನುಮತಿಯಿಂದ ಮೂರ್ತಿ ವ್ಯಾಪಾರದಲ್ಲಿ ಸಂಕಷ್ಟ ಇಲ್ಲ ಎಂದು ಮಾರಾಟಗಾರರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿ ಹಿನ್ನಲೆ ಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಗಣೇಶ ಚತುರ್ಥಿ ಹಿನ್ನಲೆ ಚಿಕ್ಕಬಳ್ಳಾಪುರದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಗಣೇಶನ ಭಕ್ತರ ದಂಡೆ ದೇವಸ್ಥಾನದಲ್ಲಿ ಸೇರಿದೆ. ಗಣಪತಿಗೆ ಪಂಚಾಮೃತ ಅಭಿಷೇಕ ಮುಗಿದು ಮಹಾಮಂಗಳಾರತಿ ನಡೆಯುತ್ತಿದ್ದು, ಭಕ್ತರು ವಿಘ್ನ ನಿವಾರಕ ಗಣೇಶನ ದರ್ಶನ ಪಡೆದು ಪಾವನರಾಗುತ್ತಿದ್ದಾರೆ.
ಗಣೇಶ ಭಕ್ತರಿಗೆ ಕರ್ಜಿಕಾಯಿ ಪ್ರಸಾದ ವಿತರಣೆ ಚಿಕ್ಕಬಳ್ಳಾಪುರ ನಗರದ ಬಲಮುರಿ ಗಣೇಶ ದೇವಸ್ಥಾನದಲ್ಲಿ ಕರ್ಜಿಕಾಯಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ.ದೇವರ ದರ್ಶನ ಪಡೆದ ಭಕ್ತರು ಕರ್ಜಿಕಾಯಿ ಪ್ರಸಾದ ಸೇವಿಸುತ್ತಿದ್ದಾರೆ. ಬೆಳಿಗ್ಗೆಯಿಂದ ದೇವರ ಪೂಜೆಯಲ್ಲಿ ಬಾಗಿಯಾಗಿದ್ದ ಭಕ್ತ ವೃಂದ, ಗಣೇಶನ ಹಬ್ಬದ ಸಂಭ್ರಮಾಚರಣೆಯಲ್ಲಿ ತಲ್ಲೀನರಾಗಿದ್ದಾರೆ.
ಇದನ್ನೂ ಓದಿ: ಮೈಸೂರಿನ ಮಾರುಕಟ್ಟೆಯಲ್ಲಿ ವಿವಿಧ ರೂಪದ ಗಣೇಶ ಮೂರ್ತಿ; ಗಣಪತಿಯ ಚಿತ್ರಣ ಇಲ್ಲಿದೆ
Ganesha chaturthi 2021: ಗಣಪತಿ ಉತ್ಸವದ ಆಚರಣೆ ಆರಂಭವಾಗಿದ್ದು ಯಾವಾಗ? ಗಣೇಶೋತ್ಸವದ ಉದ್ದೇಶ ಏನು?
Published On - 11:50 am, Fri, 10 September 21