3ನೇ ಡೋಸ್ ಕೊರೊನಾ ಲಸಿಕೆ ವಿತರಣೆಗೆ ಚಿಂತನೆ; ಐಸಿಎಂಆರ್​ ಅನುಮತಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ

ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ಕೊರೊನಾ ಲಸಿಕೆ ನೀಡುವುದಕ್ಕೆ ಚರ್ಚೆಗಳು ಆರಂಭವಾಗಿವೆಯೇ ವಿನಃ ಸಾರ್ವಜನಿಕರಿಗೆ ನೀಡುವ ಕುರಿತು ಯಾವುದೇ ಮಾಹಿತಿ ಇಲ್ಲ. ಅಲ್ಲದೇ, ಸಾರ್ವಜನಿಕರಿಗೆ ಇನ್ನೂ 2ನೇ ಡೋಸ್ ಲಸಿಕೆ ಪಡೆಯುವುದೇ ಕಷ್ಟವಾಗಿರುವುದರಿಂದ ತಕ್ಷಣದಿಂದಲೇ ಆರೋಗ್ಯ ಕಾರ್ಯಕರ್ತರಿಗೆ 3ನೇ ಡೋಸ್ ನೀಡಲಾರಂಭಿಸಿದರೆ ಜನ ತಿರುಗಿ ಬೀಳುವ ಸಾಧ್ಯತೆ ಇದೆ.

3ನೇ ಡೋಸ್ ಕೊರೊನಾ ಲಸಿಕೆ ವಿತರಣೆಗೆ ಚಿಂತನೆ; ಐಸಿಎಂಆರ್​ ಅನುಮತಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ
ಕೊವಿಡ್ ಲಸಿಕೆ
Follow us
| Updated By: Skanda

Updated on:Aug 03, 2021 | 11:36 AM

ಬೆಂಗಳೂರು: ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಕೊರೊನಾ 3 ನೇ ಅಲೆ (Corona Third Wave) ಆತಂಕ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ 3ನೇ ಡೋಸ್​ ಲಸಿಕೆ (Corona Vaccine 3rd Dose) ನೀಡುವತ್ತ ಆರೋಗ್ಯ ಇಲಾಖೆ (Health Department) ಯೋಚಿಸಿದೆ. ಸೋಂಕಿತರನ್ನು ನಿಭಾಯಿಸುವಲ್ಲಿ, ಅವರಿಗೆ ಚಿಕಿತ್ಸೆ ನೀಡುವಲ್ಲಿ ಹೆಲ್ತ್​ ವಾರಿಯರ್ಸ್ (Health Warriors) ಅತ್ಯಂತ ಪ್ರಮುಖ ಪಾತ್ರ ವಹಿಸುವುದರಿಂದ ಅವರನ್ನು ಸೋಂಕಿನಿಂದ ಬಚಾವು ಮಾಡಲು ಈ ಸಂಬಂಧ ಚರ್ಚೆ ಶುರುವಾಗಿದೆ. ಪ್ರಸ್ತುತ 2 ಡೋಸ್ ಕೊರೊನಾ ಲಸಿಕೆ ಪಡೆದಿರುವವರಿಗೂ ಕೊರೊನಾ ಸೋಂಕು (Covid 19) ದೃಢವಾಗುತ್ತಿದ್ದು, ಅಪಾಯವನ್ನು ತಡೆಯಲು 3ನೇ ಡೋಸ್ ಅನಿವಾರ್ಯ ಎನ್ನಲಾಗುತ್ತಿದೆ. ಹೀಗಾಗಿ ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಫನಾ ಹಾಗೂ ಸರ್ಕಾರದ ಹಂತದಲ್ಲಿ ಸಮಾಲೋಚನೆ ನಡೆಯುತ್ತಿದ್ದು, 3ನೇ ಡೋಸ್​ ನೀಡುವುದಕ್ಕೆ ಐಸಿಎಂಆರ್​ (ICMR) ಅನುಮತಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ.

ಕೊರೊನಾ ಮೂರನೇ ಅಲೆ ವಿರುದ್ಧ ಹೋರಾಡಲು ವೈದ್ಯರು ತಯಾರಿ ಆರಂಭಿಸಿದ್ದು ಅವರ ಆರೋಗ್ಯವನ್ನು ರಕ್ಷಿಸುವುದು ಬಹುಮುಖ್ಯವಾಗಿದೆ. ಮೂರನೇ ಅಲೆಯಿಂದ ಪಾರಾಗಲು ಎರಡು ಡೋಸ್ ಲಸಿಕೆ ಸಾಲದು, ಮೂರನೇ ಡೋಸ್ ಲಸಿಕೆಗೆ ನೀಡಬೇಕು ಎಂದು ಫ್ರಂಟ್​ಲೈನ್ ವಾರಿಯರ್ಸ್ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ 1.99 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಎರಡು ಡೋಸ್ ವ್ಯಾಕ್ಸಿನ್ ನೀಡಲಾಗಿದೆಯಾದರೂ ಬಹುತೇಕರಿಗೆ ಪುನಃ ಪಾಸಿಟಿವ್​ ಬಂದಿರುವ ಹಿನ್ನೆಲೆಯಲ್ಲಿ ಮೂರನೇ ಅಲೆಗೆ ಪ್ರವೇಶ ನೀಡುವ ಮುನ್ನ ಮತ್ತೊಂದು ಸುತ್ತಿನ ಲಸಿಕೆಗೆ ನೀಡಲು ತಯಾರಿ ಆರಂಭವಾಗಿದೆ.

ಈಗಾಗಲೇ ICMR ನಿಂದಲೂ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ಲಸಿಕೆ ನೀಡಲು ಚರ್ಚೆ ನಡೆದಿದೆ ಎನ್ನಲಾಗಿದ್ದು, ಐಸಿಎಂಆರ್​ನ ಅಂತಿಮ ಸೂಚನೆಗೆ ಆರೋಗ್ಯ ಇಲಾಖೆ ಕಾಯುತ್ತಿದೆ. ಮೂರನೇ ಹಂತದ ಲಸಿಕೆ ಬೂಸ್ಟರ್ ಡೋಸ್ ಆಗಿ ಕಾರ್ಯ ನಿರ್ವಹಿಸಲಿದ್ದು, ಈ ಬಗ್ಗೆ ಬಿಬಿಎಂಪಿಯಿಂದಲೂ ಐಸಿಎಂಆರ್​ಗೆ ಪ್ರಸ್ತಾವನೆ ನೀಡುವ ಸಾಧ್ಯತೆ ಇದೆ.

ಸಾರ್ವಜನಿಕರಿಗೂ 3ನೇ ಡೋಸ್​ ಇದೆಯಾ? ಪ್ರಸ್ತುತ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ಕೊರೊನಾ ಲಸಿಕೆ ನೀಡುವುದಕ್ಕೆ ಚರ್ಚೆಗಳು ಆರಂಭವಾಗಿವೆಯೇ ವಿನಃ ಸಾರ್ವಜನಿಕರಿಗೆ ನೀಡುವ ಕುರಿತು ಯಾವುದೇ ಮಾಹಿತಿ ಇಲ್ಲ. ಅಲ್ಲದೇ, ಸಾರ್ವಜನಿಕರಿಗೆ ಇನ್ನೂ 2ನೇ ಡೋಸ್ ಲಸಿಕೆ ಪಡೆಯುವುದೇ ಕಷ್ಟವಾಗಿರುವುದರಿಂದ ತಕ್ಷಣದಿಂದಲೇ ಆರೋಗ್ಯ ಕಾರ್ಯಕರ್ತರಿಗೆ 3ನೇ ಡೋಸ್ ನೀಡಲಾರಂಭಿಸಿದರೆ ಜನ ತಿರುಗಿ ಬೀಳುವ ಸಾಧ್ಯತೆ ಇದ್ದು, ಲಸಿಕೆ ಪೂರೈಕೆ ಹೆಚ್ಚಳವಾದ ನಂತರವಷ್ಟೇ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ನೀಡಲಾಗುವುದು ಎಂದು ತಿಳಿದುಬಂದಿದೆ.

ತಾಂತ್ರಿಕ ಸಲಹಾ ಸಮಿತಿ ಶಿಫಾರಸು ನೆರೆರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ತಾಂತ್ರಿಕ‌‌ ಸಲಹಾ ಸಮಿತಿಯಿಂದ ಹೊಸ ಶಿಫಾರಸು ನೀಡಲಾಗಿದೆ. ಅದರ ಪ್ರಕರಾವಾಗಿ ಆಗಸ್ಟ್ 16ನೇ ತಾರೀಖಿನ ತನಕ ಕೆಲವು ಹೊಸ ನಿರ್ಬಂಧ ವಿಧಿಸಲು ತಿಳಿಸಲಾಗಿದ್ದು, ಆಗಸ್ಟ್ 15ರವರೆಗೆ ಶಾಲೆ ಆರಂಭಿಸದಂತೆ ಸಲಹೆಯನ್ನೂ ನೀಡಲಾಗಿದೆ. ಕೊವಿಡ್ ಪಾಸಿಟಿವಿಟಿ ದರ 2ಕ್ಕಿಂತ ‌ಹೆಚ್ಚಿರುವ ಜಿಲ್ಲೆಗಳಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸುವ ಅಗತ್ಯವಿದೆ. ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿ ಅಗತ್ಯವಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಸೋಂಕು ಹೆಚ್ಚಳ ಹಿನ್ನೆಲೆ ಪರಿಸ್ಥಿತಿ ಅಪಾಯಕಾರಿಯಾಗಿದ್ದು, 2 ವಾರದಲ್ಲಿ ರಾಜ್ಯದಲ್ಲಿ 3ನೇ ಅಲೆಯ ಮುನ್ಸೂಚನೆ ಸಿಗಲಿದೆ. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಿದ 2-4 ವಾರದಲ್ಲಿ ರಾಜ್ಯದಲ್ಲೂ ಕೊರೊನಾ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ಇನ್ನೆರಡು ವಾರದಲ್ಲಿ 3ನೇ ಅಲೆಯ ಚಿತ್ರಣ ಸಿಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ.

(Health Department waiting for ICMR nod to distribute third dose Corona Vaccine for Health workers to face Covid 19 third wave)

Published On - 11:08 am, Tue, 3 August 21

ಸರ್ಕಾರ ಕಿತ್ತಾಕೋಕೆ ಏನು ಕಡ್ಲೆಕಾಯಿ ಗಿಡನಾ? ಡಿಕೆ ಶಿವಕುಮಾರ್‌
ಸರ್ಕಾರ ಕಿತ್ತಾಕೋಕೆ ಏನು ಕಡ್ಲೆಕಾಯಿ ಗಿಡನಾ? ಡಿಕೆ ಶಿವಕುಮಾರ್‌
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ