ಮೂರನೇ ಅಲೆಯ ಮಧ್ಯೆಯೂ ಮೋಜು ಮಸ್ತಿ.. ನ್ಯೂ ಹಾರಿಜಾನ್ ಕಾಲೇಜು ಆಗುತ್ತಾ ಕೊರೊನಾ ಹಾಟ್ ಸ್ಪಾಟ್?

ಮೂರನೇ ಅಲೆಯ ಮಧ್ಯೆಯೂ ಮೋಜು ಮಸ್ತಿ.. ನ್ಯೂ ಹಾರಿಜಾನ್ ಕಾಲೇಜು ಆಗುತ್ತಾ ಕೊರೊನಾ ಹಾಟ್ ಸ್ಪಾಟ್?
ನ್ಯೂ ಹಾರಿಜಾನ್ ಕಾಲೇಜು ವಿದ್ಯಾರ್ಥಿಗಳಿಂದ ಮೋಜು ಮಸ್ತಿ

ಮೂರನೇ ಅಲೆಯ ಮಧ್ಯೆಯೂ ನ್ಯೂ ಹಾರಿಜಾನ್ ಕಾಲೇಜ್​ನಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಸರ್ಕಾರದ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಸ್ನೇಹಿತರ ದಿನೋತ್ಸವ ಹೆಸರಲ್ಲಿ ನ್ಯೂ ಹಾರಿಜಾನ್ ಕಾಲೇಜು ಮೋಜು ಮಸ್ತಿ ಮಾಡಿದೆ.

TV9kannada Web Team

| Edited By: sandhya thejappa

Aug 03, 2021 | 1:43 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Coronavirus) ಮೂರನೇ ಅಲೆ ಆತಂಕ ಶುರುವಾಗಿದೆ. ಕೊರೊನಾ ಮೂರನೇ ಅಲೆಯನ್ನು ಪ್ರಾರಂಭದಲ್ಲೆ ತಡೆಯಲು ಬಿಬಿಎಂಪಿ ತಯಾರಿ ನಡೆಸಿಕೊಳ್ಳುತ್ತಿದೆ. ಈಗಾಗಲೇ ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದೂ ಬೆಂಗಳೂರಿನ ನ್ಯೂ ಹಾರಿಜಾನ್ ಕಾಲೇಜಿನಲ್ಲಿ ರೂಲ್ಸ್ ಬ್ರೇಕ್ ಆಗಿದೆ. ಕೊವಿಡ್ ನಿಯಮ ಉಲ್ಲಂಘಿಸಿ ಕಾಲೇಜಿನಲ್ಲಿ ಮೋಜು ಮಸ್ತಿ ಮಾಡಿದ್ದಾರೆ.

ಮೂರನೇ ಅಲೆಯ ಮಧ್ಯೆಯೂ ನ್ಯೂ ಹಾರಿಜಾನ್ ಕಾಲೇಜ್​ನಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಸರ್ಕಾರದ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಸ್ನೇಹಿತರ ದಿನೋತ್ಸವ ಹೆಸರಲ್ಲಿ ನ್ಯೂ ಹಾರಿಜಾನ್ ಕಾಲೇಜು ಮೋಜು ಮಸ್ತಿ ಮಾಡಿದೆ. ಎಲ್ಲಾ ವಿದ್ಯಾರ್ಥಿಗಳನ್ನ ಕರೆದು ಮೊನ್ನೆ ರಾತ್ರಿ ಕಾಲೇಜಿನಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಕಾಲೇಜಿನೊಳಗೆ ಓಪನ್ ಸ್ಪೇಸ್​ನಲ್ಲಿ ತ್ರಿ ಇಡಿಯಟ್ ಸಿನಿಮಾ ಹಾಕಿ ಸಂಭ್ರಮಿಸಿದ್ದಾರೆ. ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫ್ರೆಂಡ್ ಶಿಪ್ ಡೇ ಹೆಸರಲ್ಲಿ ವಿದ್ಯಾರ್ಥಿಗಳು ಎಲ್ಲರೂ ಸೇರಿ ಕುಣಿದು ಎಂಜಾಯ್ ಮಾಡಿದ್ದಾರೆ. ಈ ವೇಳೆ ಯಾವ ವಿದ್ಯಾರ್ಥಿಗಳು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಹೀಗಾಗಿ ನ್ಯೂ ಹಾರಿಜಾನ್ ಕಾಲೇಜು ಕೊರೊನಾ ಹಾಟ್ ಸ್ಪಾಟ್ ಆಗುತ್ತಾ ಎಂಬ ಆತಂಕ ಶುರುವಾಗಿದೆ.

ಇದನ್ನೂ ಓದಿ

ಗಣಿನಾಡಲ್ಲಿ ಕೊರೊನಾ 3ನೇ ಅಲೆ ಆತಂಕ, ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರೋ ಬಗ್ಗೆ ತಜ್ಞರಿಂದ ವಾರ್ನಿಂಗ್

3ನೇ ಡೋಸ್ ಕೊರೊನಾ ಲಸಿಕೆ ವಿತರಣೆಗೆ ಚಿಂತನೆ; ಐಸಿಎಂಆರ್​ ಅನುಮತಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ

(friendship day celebrated at New Horizon College amid Corona third wave in Bengaluru)

Follow us on

Related Stories

Most Read Stories

Click on your DTH Provider to Add TV9 Kannada