AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪನ್ನು ತೆಗೆದು ಹಾಕಿದ್ದು ವಯಸ್ಸಾಗಿದೆ ಎಂದಲ್ಲ; ಅಪ್ಪ-ಮಗ ಸೇರಿ ಲೂಟಿ ಮಾಡಿದ್ರು ಅಂತಾ ತೆಗೆದ್ರು: ಸಿದ್ದರಾಮಯ್ಯ

siddaramaiah: ಮುಖ್ಯಮಂತ್ರಿ ಬೊಮ್ಮಾಯಿ‌ ಬಗ್ಗೆ ಈಗ ಮಾತಾಡಲ್ಲ. ಹೋಗಲಿ ಮೂರು-ನಾಲ್ಕು ತಿಂಗಳು, ಆಮೇಲೆ ಅವರ ಬಗ್ಗೆ ಮಾತಾಡುತ್ತೇನೆ. ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಯಡಿಯೂರಪ್ಪ. ಹಾಗಾಗಿ ಅವರು ಎನು ಮಾಡ್ತಾರೆ? ಸ್ಟ್ಯಾಂಪ್ ಆಗುವುದು ಬಿಟ್ಟು- ಹಿರಿಯ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ

ಯಡಿಯೂರಪ್ಪನ್ನು ತೆಗೆದು ಹಾಕಿದ್ದು ವಯಸ್ಸಾಗಿದೆ ಎಂದಲ್ಲ; ಅಪ್ಪ-ಮಗ ಸೇರಿ ಲೂಟಿ ಮಾಡಿದ್ರು ಅಂತಾ ತೆಗೆದ್ರು: ಸಿದ್ದರಾಮಯ್ಯ
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 03, 2021 | 1:23 PM

ಬೆಂಗಳೂರು: ರಾಜ್ಯದಲ್ಲಿ ಬಿ ಎಸ್​ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಿದ್ದಾರೆ. ವಯಸ್ಸು ಆಗಿದೆ ಎಂದು ತೆಗೆದಿಲ್ಲ. ಬದಲಾಗಿ ದುಡ್ಡು ಹೊಡೆದ್ರು ಅಂತಾ ತೆಗೆದಿದ್ದು. ಅಪ್ಪ-ಮಗ ಜೋಡಿ ಲೂಟಿ ಮಾಡಿದರು ಅಂತಾ ತೆಗೆದರು ಎಂದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಐಟಿ, ಇಡಿ ಇದೆ ಎಂದು ಹೇಳಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದಾರೆ. ಆರ್​ಟಿಜಿಎಸ್ ಮೂಲಕ ಯಡಿಯೂರಪ್ಪ ಹಣ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ಮದುವೆ ಊಟ ಮಾಡೇ ಇಲ್ಲ. ಬರೀ ತಿಥಿ ಊಟ ಮಾಡಿದವರು ಅವರು. ಅವರಿಗೆ ಮುಂಬಾಗಿಲಿಂದ ಬಂದು ಗೊತ್ತೇ ಇಲ್ಲ. ಹಿಂಬಾಗಿಲಿಂದ ಬಂದವರೇ. ನಮ್ಮ ಎಂಎಲ್​ಎಗಳನ್ನು ಕರೆದುಕೊಂಡು ಸರ್ಕಾರ‌ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇನ್ನು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬಗ್ಗೆ ಈಗ ಮಾತಾಡಲ್ಲ. ಹೋಗಲಿ ಮೂರು-ನಾಲ್ಕು ತಿಂಗಳು, ಆಮೇಲೆ ಅವರ ಬಗ್ಗೆ ಮಾತಾಡುತ್ತೇನೆ. ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಯಡಿಯೂರಪ್ಪ. ಹಾಗಾಗಿ ಅವರು (ಬೊಮ್ಮಾಯಿ) ಎನು ಮಾಡ್ತಾರೆ? ಸ್ಟ್ಯಾಂಪ್ ಆಗುವುದು ಬಿಟ್ಟು ಎಂದು ಹಿರಿಯ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಕಟಕಿಯಾಡಿದ್ದಾರೆ.

ಕೋವಿಡ್ ಬರೋಕೆ ಪದ್ಮನಾಭ ನಗರ ಕ್ಷೇತ್ರದ ಆರ್ ಅಶೋಕ ಕಾರಣ.. ಸಿದ್ದರಾಮಯ್ಯ ಆಕ್ಷೇಪಾರ್ಹ ಹೇಳಿಕೆ:

ಕೋವಿಡ್ ಬರೋಕೆ ಈ ಕ್ಷೇತ್ರದ ಶಾಸಕ ಆರ್ ಅಶೋಕ ಕಾರಣ ಎಂದು ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ. ನಾವು ಕಂಡು, ಕೇಳಿರಲಿಲ್ಲ. ಚೀನಾದಿಂದ ನಮ್ಮ ದೇಶಕ್ಕೆ ಬಂದಿದೆ.. ಕೋವಿಡ್ ಬರೋಕೆ ನಾವು ಕಾರಣನಾ? ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ. ಕೋವಿಡ್ ಬರೋಕೆ ಈ ಕ್ಷೇತ್ರದ (ಪದ್ಮನಾಭ ನಗರ -Padmanabhanagar) ಆರ್ ಅಶೋಕ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪಾರ್ಹವಾಗಿ  ಟೀಕಿಸಿದ್ದಾರೆ.

ಅವರು (ಆರ್ ಅಶೋಕ- r ashok) ಸಿಎಂ ಆಗದೆ ಇರಬಹುದು.. ಆದ್ರೆ ಕಂದಾಯ ಸಚಿವರಾಗಿದ್ದರಲ್ಲ. ಅಶೋಕ ಅವರನ್ನು ಅನೇಕ ಭಾರಿ ಗೆಲ್ಲಿಸಿದ್ದೀರಿ. ಜನರಿಗೆ ಆಹಾರ, ಔಷಧಿ, ಬೆಡ್ ಗಳು ಕೊಡುವುದು ಅಶೋಕ್ ಜವಾಬ್ದಾರಿ ಎಂದು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈದಾನ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ? ಅಧಿಕಾರಗಳು ಎಚ್ಚರಿಕೆಯಿಂದ ಇರಬೇಕು: ಪದ್ಮನಾಭನಗರದಲ್ಲಿ ಕಾರ್ಯಕ್ರಮ ನಡೆಸಲು ಅಶೋಕ್ ಅನುಮತಿ ಪಡೆಯಬೇಕಂತೆ! ಈ‌ ಮೈದಾನ ಏನೂ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ? ಇದು ಪಬ್ಲಿಕ್ ಪ್ರಾಪರ್ಟಿ. ಅಧಿಕಾರಿಗಳು ಇದಕ್ಕೆ ಮಣೆ ಹಾಕಬಾರದು ಎಂದು ಕಟಕಿಯಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಗಳು ಎಚ್ಚರಿಕೆಯಿಂದ ಇರಬೇಕು. ಅಶೋಕ ಒಬ್ಬ ಶಾಸಕ ಅಷ್ಟೇ.. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿಕಾರಿಗಳನ್ನೂ ಎಚ್ಚರಿಸಿದರು.

ಕೋವಿಡ್ ಬರೋಕೆ ಪದ್ಮನಾಭ ನಗರ ಕ್ಷೇತ್ರದ ಆರ್ ಅಶೋಕ ಕಾರಣ.. ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

(bs yediyurappa remove from cm post not because of age but because corruption says siddaramaiah)

Published On - 1:19 pm, Tue, 3 August 21

ಕೊಲೆ ಪಾತಕಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿ ಮಾಡಿದ ಸಾಹಸ ನೋಡಿ
ಕೊಲೆ ಪಾತಕಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿ ಮಾಡಿದ ಸಾಹಸ ನೋಡಿ
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್