ಮಕ್ಕಳನ್ನು ಸವಾರಿಗೆ ಕರೆದೊಯ್ಯುತ್ತಿರುವ ತಾಯಿ ಮುಳ್ಳುಹಂದಿ; ಮುದ್ದಾದ ವಿಡಿಯೊ ನೋಡಿ

ತಾಯಿ ಮುಳ್ಳು ಹಂದಿಯೊಂದು ತನ್ನ ಎರಡು ಮರಿಗಳನ್ನು ಕರೆದುಕೊಂಡು ಸುತ್ತಾಟಕ್ಕೆ ಹೊರಟಿರುವ ವಿಡಿಯೊ ನೆಟ್ಟಿಗರ ಮನ ಗೆದ್ದಿದೆ. ಆ ವಿಡಿಯೊ ಇಲ್ಲಿದೆ.

ಮಕ್ಕಳನ್ನು ಸವಾರಿಗೆ ಕರೆದೊಯ್ಯುತ್ತಿರುವ ತಾಯಿ ಮುಳ್ಳುಹಂದಿ; ಮುದ್ದಾದ ವಿಡಿಯೊ ನೋಡಿ
ತನ್ನ ಮರಿಯೊಂದಿಗೆ ಮುಳ್ಳುಹಂದಿ (ಸಾಂದರ್ಭಿಕ ಚಿತ್ರ/ Credits: Nat Geo Kids)
Follow us
TV9 Web
| Updated By: shivaprasad.hs

Updated on: Aug 28, 2021 | 2:48 PM

ಅಂತರ್ಜಾಲದಲ್ಲಿ ಪ್ರಾಣಿ ಪ್ರಪಂಚದ ಮುದ್ದಾದ ವಿಡಿಯೊಗಳು ಸಾಕಷ್ಟು ಕಾಣಲು ಸಿಗುತ್ತವೆ. ನೋಡಲು, ಕೇಳಲು ಭಯವಾಗುವ ಪ್ರಾಣಿಗಳು ತಮ್ಮ ಮರಿಗಳೊಂದಿಗೆ ಆಟವಾಡುತ್ತಿರುವ ದೃಶ್ಯಗಳನ್ನು ನೋಡಿದಾಗ ಎಂಥವರಿಗಾದರೂ ಮುದ್ದು ಮಾಡೋಣ ಅಂತನ್ನಿಸುತ್ತದೆ. ಅಂಥದ್ದೇ ಒಂದು ವಿಡಿಯೊದಲ್ಲಿ, ಮುಳ್ಳು ಹಂದಿಯು ತನ್ನ ಎರಡು ಮರಿಗಳೊಂದಿಗೆ ಸವಾರಿ ಹೊರಟಿದೆ. ಎರಡು ಮುದ್ದಾದ ಮರಿಗಳು ಲಗುಬಗೆಯಿಂದ ಅಮ್ಮನನ್ನು ಹಿಂಬಾಲಿಸುತ್ತಾ, ಅಮ್ಮ ನಿಂತಾಗ ಹಾಲು ಕುಡಿಯುತ್ತಾ ತೆರಳುತ್ತಿರುವ ದೃಶ್ಯ ವೈರಲ್ ಆಗಿದ್ದು ನೆಟ್ಟಿಗರ ಮನಗೆದ್ದಿದೆ.

‘ತಾಯಿ ಮುಳ್ಳು ಹಂದಿಯು ತನ್ನ ಮರಿಗಳನ್ನು ಹೊಸ ಯಾತ್ರೆಗೆ ಕರೆದೊಯ್ಯುತ್ತಿರುವುದು’ ಎಂಬರ್ಥದಲ್ಲಿ ಕ್ಯಾಪ್ಶನ್ ನೀಡಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ತಾಯಿ- ಮಕ್ಕಳ ಈ ದೃಶ್ಯ ಪುಟ್ಟದಾಗಿದ್ದರೂ ಕೂಡಾ, ಮತ್ತೆ ಮತ್ತೆ ನೋಡುವಂತಿದೆ.

ತಾಯಿ ಮುಳ್ಳುಹಂದಿ ಹಾಗೂ ಅದರ ಎರಡು ಮರಿಗಳ ಸವಾರಿ:

ಎರಡು ದಿನಗಳ ಕೆಳಗೆ ಹಂಚಿಕೊಳ್ಳಲಾದ ಈ ವಿಡಿಯೊ ನೆಟ್ಟಿಗರ ಮನಗೆದ್ದಿದ್ದು, ಒಳ್ಳೆಯ ವೀಕ್ಷಣೆ ಗಳಿಸುತ್ತಿದೆ. ವಿಧವಿಧವಾದ ಕಾಮೆಂಟ್​ಗಳಿಂದ ನೆಟ್ಟಿಗರು ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ‘ಇದುವರೆಗೆ ಮುಳ್ಳುಹಂದಿಯ ಮರಿಗಳನ್ನು ನೋಡೇ ಇರಲಿಲ್ಲ. ಎಷ್ಟು ಮುದ್ದಾಗಿವೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, ‘ಎಂತಹಾ ಅದ್ಭುತವಾದ ದೃಶ್ಯವಿದು’ ಎಂದು ಕಾಮೆಂಟ್ ಮಾಡಿದ್ದಾರೆ.

ಅಂಥದ್ದೇ ಮತ್ತೊಂದು ಮುದ್ದಾದ ವಿಡಿಯೊ ಇಲ್ಲಿದೆ:

ಮುಳ್ಳುಹಂದಿಗಳಲ್ಲೂ ಹಲವಾರು ವಿಧಗಳಿದ್ದು, ಅವುಗಳ ಬೆನ್ನಿನ ಭಾಗದಲ್ಲಿ ಮುಳ್ಳಿನ ರಚನೆಯಿರುವುದರಿಂದ ಮುಳ್ಳು ಹಂದಿ ಎಂದು ಕರೆಯುತ್ತಾರೆ.

ಇದನ್ನೂ ಓದಿ:

ಯಾರಿಗೂ ತಲೆಕೆಡಿಸಿಕೊಳ್ಳದೆ ವಿಮಾನದೊಳಗೆ ಸಿಗರೇಟು ಸೇದಿದ ಮಹಿಳೆ; ಗಾಬರಿ ಬಿದ್ದ ಸಹ ಪ್ರಯಾಣಿಕರು ಮಾಡಿದ್ದೇನು?

ಜಲ್​​ಗಾಂವ್​​ನಲ್ಲಿರುವ ಬಿಜೆಪಿ ಕಚೇರಿಯೊಳಗೆ ಕೋಳಿಗಳನ್ನು ಬಿಟ್ಟ ಶಿವಸೇನಾ; ಬಿಜೆಪಿ ಕಾರ್ಯಕರ್ತರಿಂದ ಶುದ್ಧೀಕರಣ

(Porcupine Mommy takes Her two Babies Out on an Adventure watch video)