AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೊದಲ ವರ್ಷದ ಹುಟ್ಟುಹಬ್ಬಕ್ಕೆ ವಿಧವಿಧದ ಗಿಫ್ಟ್; ಅವುಗಳೊಂದಿಗೆ ಪಾಂಡಾದ ಆಟ ನೋಡಿ

ಚೀನಾದ ಒಂದು ವರ್ಷದ ಪಾಂಡಾವೊಂದು ತನ್ನ ತುಂಟಾಟದಿಂದ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದೆ. ಅದಕ್ಕೀಗ ಒಂದು ವರ್ಷದ ಸಂಭ್ರಮ.

Viral Video: ಮೊದಲ ವರ್ಷದ ಹುಟ್ಟುಹಬ್ಬಕ್ಕೆ ವಿಧವಿಧದ ಗಿಫ್ಟ್; ಅವುಗಳೊಂದಿಗೆ ಪಾಂಡಾದ ಆಟ ನೋಡಿ
ಪಾಂಡಾ
TV9 Web
| Edited By: |

Updated on: Aug 28, 2021 | 4:45 PM

Share

ಪಾಂಡಾಗಳು ಪ್ರಾಣಿಗಳಲ್ಲೇ ಅತ್ಯಂತ ಮುದ್ದಿನ ಪ್ರಾಣಿಗಳೆಂದು ಹೆಸರು ಮಾಡಿದವುಗಳು. ವಿಶ್ವದ ಎಲ್ಲೆಡೆ ಇವು ಕಂಡುಬರುವುದಿಲ್ಲ. ಆದ್ದರಿಂದಲೇ, ಅವುಗಳ ತುಂಟಾಟವನ್ನು, ಚೇಷ್ಟೆಯನ್ನು ವಿಡಿಯೊಗಳ ಮುಖಾಂತರ ಎಲ್ಲರೂ ಮನದುಂಬಿ ಆನಂದಿಸುತ್ತಾರೆ. ಸದ್ಯ ಪಾಂಡಾವೊಂದರ ತುಂಟಾಟದ ವಿಡಿಯೊ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಪಾಂಡಾ ಪ್ರಿಯರಿಗೆ ಸ್ಮಿತ್​ಸೋನಿಯನ್ ಜೂ ಬಗ್ಗೆ ತಿಳಿದೇ ಇರುತ್ತದೆ. ಕಾರಣ, ಅಲ್ಲಿರುವ ಶಿಯಾವೋ ಕಿ ಜಿ ಎಂಬ ಪಾಂಡಾ ತನ್ನ ತುಂಟಾದಿಂದ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದೆ. ಅಲ್ಲಿನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಆ ಪಾಂಡಾದ ತುಂಟಾಟದ ವಿಡಿಯೊಗಳನ್ನು ಹಂಚಿಕೊಳ್ಳಲಾಗುತ್ತದೆ. 

ಶಿಯಾವೋ ಕಿ ಜಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿರುವ ರಾಷ್ಟ್ರೀಯ ಉದ್ಯಾನವನವು, ಇಡೀ ವಾರವನ್ನು ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ವಿಶೇಷ ಉಡುಗೊರೆಗಳನ್ನೂ ನೀಡಲಾಗಿದೆ. ಪ್ರತೀ ದಿನವೂ ಹೊಸ ಉಡುಗೊರೆಯನ್ನು ಅದಕ್ಕೆ ನೀಡಿ, ಅದಕ್ಕೆ ದಿನವೂ ಹೊಸ ಅಚ್ಚರಿಯನ್ನು ನೀಡಿದ್ದಾರೆ ಅಲ್ಲಿನ ಸಿಬ್ಬಂದಿಗಳು. ಇದನ್ನು ಸಂತಸದಿಂದ ಸ್ವೀಕರಿಸಿರುವ ಪಾಂಡಾ, ಉಡುಗೊರೆಗಳೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿರುವ ವಿಡಿಯೊಗಳನ್ನು ಹಂಚಿಕೊಳ್ಳಲಾಗಿದೆ.

ಶಿಯಾವೋ ಕಿ ಜಿ ಹುಟ್ಟುಹಬ್ಬಕ್ಕೆ ವಿಶೇಷ ತಿಂಡಿಯೊಂದನ್ನೂ ನೀಡಿದ್ದ ಉದ್ಯಾನವನವು, ಅದನ್ನು ಶಿಯಾವೋ ತನ್ನ ತಾಯಿ ಮೇಯಿ ಶಿಯಾಂಗ್ ಜೊತೆ ತಿನ್ನುವ ವಿಡಿಯೊವನ್ನು ಹಂಚಿಕೊಂಡಿತ್ತು. ಆ ವಿಡಿಯೊ ಇಲ್ಲಿದೆ.

ಶಿಯಾವೋ ಕಿ ಜಿ ತನ್ನ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಇದಕ್ಕಾಗಿ ಉದ್ಯಾನವನದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶಿಯಾವೋ ಪಾಂಡಾದ ಬೆಳವಣಿಗೆಯ ಹಾದಿ:

ಶಿಯಾವೋನ ತುಂಟಾಟವನ್ನು ನೋಡಿದ ನೆಟ್ಟಿಗರು ಆನಂದಪಟ್ಟಿದ್ದಾರೆ. ಎಷ್ಟು ಬೇಗ ಅದಕ್ಕೆ ವರ್ಷ ತುಂಬಿತು ಎಂದು ಕೆಲವರು ಹರ್ಷ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು, ಅದರ ತುಂಟಾಟಕ್ಕೆ ನಾವು ಅಭಿಮಾನಿಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ನೋಡಿ:

Whatsapp Scam: ವಾಟ್ಸ್​ಆ್ಯಪ್​ನಲ್ಲಿ ಬರುವ ಸ್ಕ್ಯಾಮ್ ಮೆಸೇಜ್ ಪತ್ತೆ ಮಾಡುವುದು ಈಗ ಸುಲಭ: ಹೀಗೆ ಮಾಡಿ

ಮಕ್ಕಳನ್ನು ಸವಾರಿಗೆ ಕರೆದೊಯ್ಯುತ್ತಿರುವ ತಾಯಿ ಮುಳ್ಳುಹಂದಿ; ಮುದ್ದಾದ ವಿಡಿಯೊ ನೋಡಿ

(Giant Panda Xiao Qi Ji turns one year old and see what he gets as a gift)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ