Viral Video: ತಾಯಿಯನ್ನು ಕೊಲ್ಲಲು ಬಂದಿದ್ದಾರೆಂದು ಭಾವಿಸಿ ವೈದ್ಯರ ಮೇಲೆ ದಾಳಿಗೆ ಮುಂದಾದ ಮರಿ ಘೇಂಡಾಮೃಗ

ವಾಸ್ತವವಾಗಿ, ತಾಯಿ ಘೇಂಡಾಮೃಗ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರು ಅದಕ್ಕೆ ಚಿಕಿತ್ಸೆ ನೀಡಲು ಬಂದಿದ್ದಾರೆ, ಆದರೆ ಪುಟ್ಟ ಘೇಂಡಾಮೃಗಕ್ಕೆ ಇದು ತಿಳಿದಿಲ್ಲ. ತನ್ನ ತಾಯಿಯ ಅಪಾಯದಲ್ಲಿದೆ ಎಂದು ಅದು ಭಾವಿಸಿ ಅವರ ಮೇಲೆ ದಾಳಿ ನಡೆಸಲು ಮುಂದಾಗಿದೆ ಈ ಪುಟ್ಟ ಘೇಂಡಾಮೃಗ.

Viral Video: ತಾಯಿಯನ್ನು ಕೊಲ್ಲಲು ಬಂದಿದ್ದಾರೆಂದು ಭಾವಿಸಿ ವೈದ್ಯರ ಮೇಲೆ ದಾಳಿಗೆ ಮುಂದಾದ ಮರಿ ಘೇಂಡಾಮೃಗ
ವೈದ್ಯರ ಮೇಲೆ ದಾಳಿಗೆ ಮುಂದಾದ ಮರಿ ಘೇಂಡಾಮೃಗ

Updated on: Jun 01, 2024 | 6:34 PM

ಘೇಂಡಾಮೃಗದ ಮರಿಯೊಂದು ತನ್ನ ತಾಯಿಯನ್ನು ರಕ್ಷಿಸಲು ಮುಂದಾದ ಹೃದಯ ಸ್ಪರ್ಶಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತನ್ನ ತಾಯಿ ಘೇಂಡಾಮೃಗಕ್ಕೆ ಚಿಕಿತ್ಸೆ ನೀಡಲು ಬಂದ ವೈದ್ಯರ ಮೇಲೆ ದಾಳಿ ನಡೆಸಲು ಈ ಪುಟ್ಟ ಮರಿ ಮುಂದಾಗಿದ್ದು, ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ತನ್ನ ತಾಯಿ ಅಪಾಯದಲ್ಲಿದೆ ಎಂದು ಭಾವಿಸಿದ ಮರಿ ಘೇಂಡಾಮೃಗ ತಾಯಿಯನ್ನು ರಕ್ಷಿಸಲು ತನ್ನಿಂದ ಆದಷ್ಟು ಪ್ರಯತ್ನಗಳನ್ನು ಮಾಡುವುದನ್ನು ಕಾಣಬಹುದು.

ಚಿಕ್ಕ ಘೇಂಡಾಮೃಗವು ತನ್ನ ಕೊಂಬಿನಿಂದ ವೈದ್ಯರ ಮೇಲೆ ಹೇಗೆ ದಾಳಿ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಾಸ್ತವವಾಗಿ, ತಾಯಿ ಘೇಂಡಾಮೃಗ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರು ಅದಕ್ಕೆ ಚಿಕಿತ್ಸೆ ನೀಡಲು ಬಂದಿದ್ದಾರೆ, ಆದರೆ ಪುಟ್ಟ ಘೇಂಡಾಮೃಗಕ್ಕೆ ಇದು ತಿಳಿದಿಲ್ಲ. ತನ್ನ ತಾಯಿಯು ಒಂದು ರೀತಿಯ ಅಪಾಯದಲ್ಲಿದೆ ಎಂದು ಅದು ಭಾವಿಸಿ ಅವರ ಮೇಲೆ ದಾಳಿ ನಡೆಸಲು ಮುಂದಾಗಿದೆ.

ವೈರಲ್​​ ವಿಡಿಯೊ ಇಲ್ಲಿದೆ ನೋಡಿ:

ಇದನ್ನೂ ಓದಿ: ಕಾಮಿಡಿ ಶೋ ನೋಡಿ ನಕ್ಕು ನಕ್ಕು ಮೂರ್ಛೆ ತಪ್ಪಿ ಬಿದ್ದ ವ್ಯಕ್ತಿ; ಆಸ್ಪತ್ರೆಗೆ ದಾಖಲು

@AMAZlNGNATURE ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 3.7 ಮಿಲಿಯನ್​​ ಅಂದರೆ 30 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಿಡಿಯೋ ಒಂದು ಕ್ಷಣ ನಿಮ್ಮನ್ನು ಭಾವುಕರನ್ನಾಗಿಸುವುದಂತೂ ಖಂಡಿತಾ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us