
ವಿಶ್ವದಲ್ಲಿ ಭಾರತ ಬೇರೆ ಬೇರೆ ವಿಚಾರಗಳಲ್ಲಿ ಸುದ್ದಿ ಮಾಡುತ್ತಿರುತ್ತದೆ. ಅದರಲ್ಲೂ ದುಬಾರಿ ವಸ್ತುಗಳಿಂದಲ್ಲೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಮತ್ತೊಂದು ದುಬಾರಿ ವಿಚಾರವಾಗಿ ಸುದ್ದಿಯಾಗಿದೆ. ಭಾರತದಲ್ಲಿ ಹೆಚ್ಚು ಚಹಾ ಪ್ರಿಯರು (Expensive tea India) ಇದ್ದರೆ. ಚಹಾ ಎಲ್ಲರೂ ಇಷ್ಟಪಡುವ ಪಾನೀಯ, ಹಾಗಾಗಿ ಒತ್ತಡ ಇರಲಿ, ಸಂತೋಷವಿರಲಿ ಎಲ್ಲದಕ್ಕೂ ಈ ಚಹಾ ಎಂಬುದು ಬಹಳ ಮುಖ್ಯವಾಗಿರುತ್ತದೆ. ಭಾರತದಲ್ಲಿ ಚಹಾದ ಬಳಕೆ ಹೆಚ್ಚು. ಇನ್ನು ವಿದೇಶದಲ್ಲೂ ಕೂಡ ಭಾರತದ ಚಹಾ ಹೆಚ್ಚು ಪ್ರಮುಖ್ಯತೆಯನ್ನು ಪಡೆದುಕೊಂಡಿದೆ. ಭಾರತದಲ್ಲಿ 10 ರೂ.ಗೆ ಚಹಾ ಸಿಗುತ್ತದೆ. ಆದರೆ ಇದರ ನಡುವೆ ಒಂದು ಸುದ್ದಿ ಭಾರೀ ವೈರಲ್ ಆಗಿದೆ. ಭಾರತದಲ್ಲಿ ತುಂಬಾ ದುಬಾರಿ ಚಹಾದ ಪುಡಿವೊಂದು ಇದೆ. ಈ ಚಹಾ ತೋಟವನ್ನು ಶ್ರೀಮಂತ ತೋಟ ಎಂದು ಕರೆಯಲಾಗುತ್ತದೆ.
ಈ ಚಹಾದ ಪುಡಿಯನ್ನು ಸಣ್ಣ ಮಟ್ಟದಲ್ಲಿ ತಯಾರಿ ಮಾಡಲಾಗುತ್ತದೆ. ಆದರೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದು ಹೆಚ್ಚು ಬೆಲೆಯನ್ನು ಹೊಂದಿದ್ದು, ಈ ಚಹಾದ ಪುಡಿಯನ್ನು ಸಾಮಾನ್ಯ ಜನ ಬಳಸುವುದಿಲ್ಲ. ಹೆಚ್ಚು ಹಣ ಕೊಟ್ಟ ಖರೀದಿ ಮಾಡಲು ಬೇರೆಯೇ ಗುಂಪುಗಳು ಇದೆ. ವೈನ್ ಸಂಗ್ರಹದಂತೆ ಇದನ್ನು ಕೂಡ ಸಂಗ್ರಹ ಮಾಡುತ್ತಾರೆ. ನಂತರ ಅದರಲ್ಲಿ ಬರುವ ರುಚಿ ಹಾಗೂ ಸುವಾಸನೆಯೇ ಅದರ ಬೆಲೆಯನ್ನು ಹೆಚ್ಚಿಸುತ್ತದೆ. ಅಂತರರಾಷ್ಟ್ರೀಯ ಚಹಾ ದಿನದಂದು, ಭಾರತದಲ್ಲಿ ತಯಾರಿಸಲಾದ ಆರು ಅತ್ಯಂತ ದುಬಾರಿ ಚಹಾ ಪುಡಿಗಳನ್ನು ಗುರುತಿಸಲಾಗಿದೆ.
ಇದನ್ನೂ ಓದಿ: ಎಮ್ಮೆಯ ಕರುವಿನ ಹಲ್ಲುಜ್ಜಲು ಪುಟಾಣಿಯ ಪರದಾಟ, ವೈರಲ್ ಆಯ್ತು ದೃಶ್ಯ
ಆರು ಅತ್ಯಂತ ದುಬಾರಿ ಚಹಾ ಪುಡಿಗಳಲ್ಲಿ ಮನೋಹರಿ ಗೋಲ್ಡ್ ಒಂದು. ಇದು ಅಸ್ಸಾಂನ ಪ್ರಸಿದ್ಧ ಚಹಾವಾಗಿದ್ದು, ಇದು ಚಿನ್ನದ ಬೆಲೆಯನ್ನು ಹೊಂದಿದೆ. ಇದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಕೈಯಿಂದ ಕೀಳಲಾಗುತ್ತದೆ, ಇದು ಅಪರೂಪದ ಚಹಾದ ಎಲೆ. ಈ ಚಹಾವು ಗುವಾಹಟಿಯಲ್ಲಿ ನಡೆದ ಹರಾಜಿನಲ್ಲಿ ದಾಖಲೆಗಳನ್ನು ಮುರಿದಿದೆ ಮತ್ತು ಭಾರತದ ಅತ್ಯಂತ ದುಬಾರಿ ಚಹಾಗಳಲ್ಲಿ ಒಂದಾಗಿದೆ. 2022 ರಲ್ಲಿ, ಹರಾಜಿನಲ್ಲಿ ಅದನ್ನು ಪ್ರತಿ ಕೆಜಿಗೆ 1.15 ಲಕ್ಷ ರೂ.ಗೆ ಮಾರಾಟ ಮಾಡಲಾಯಿತು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ