Video: ಎಮ್ಮೆಯ ಕರುವಿನ ಹಲ್ಲುಜ್ಜಲು ಪುಟಾಣಿಯ ಪರದಾಟ, ವೈರಲ್ ಆಯ್ತು ದೃಶ್ಯ
ಪುಟಾಣಿಗಳು ಏನು ಮಾಡಿದ್ರೂ ಕೂಡ ಚಂದನೇ. ಈ ಪುಟ್ಟ ಮಕ್ಕಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಪುಟಾಣಿಯೊಂದು ಎಮ್ಮೆಯ ಕರುವಿನ ಹಲ್ಲುಜ್ಜಲು ಪರದಾಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ಪುಟಾಣಿಗಳು (little kids) ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲ ವಿಡಿಯೋ ನೋಡಿದ್ರೆ ನಗು ತಡೆಯಲು ಆಗಲ್ಲ. ಈ ಪುಟಾಣಿಗಳು ಮಾಡುವ ಎಡವಟ್ಟುಗಳನ್ನು ಕಂಡಾಗ ನಗು ಮುಗ್ಗರಿಸಿಕೊಂಡು ಬರುತ್ತದೆ. ಇದೀಗ ಪುಟಾಣಿಯೊಂದು ಬೆಳ್ಳಂಬೆಳ್ಳಗ್ಗೆ ಎಮ್ಮೆಯ ಕರುವಿಗೆ (Buffalo calf) ಹಲ್ಲು ಉಜ್ಜಿಸುವುದರಲ್ಲಿ ಬ್ಯುಸಿಯಾಗಿದೆ. ಹಲ್ಲುಜ್ಜಲು ಪರದಾಡುತ್ತಿರುವ ಈ ಪುಟಾಣಿ ವಿಡಿಯೋ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.
ದೀಪಕ್ ಕುಮಾರ್ (Deepak kumar) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಎಮ್ಮೆಯ ಕರುವಿಗೆ ಹಲ್ಲುಜ್ಜಿಸುತ್ತಿರುವುದನ್ನು ಕಾಣಬಹುದು. ಈ ಪುಟಾಣಿಯೂ ತಾನು ಮಾಡುತ್ತಿರುವ ಕೆಲಸವನ್ನು ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: ಬಾಯಿ ಚಪ್ಪರಿಸಿಕೊಂಡು ಪಾನಿ ಪುರಿ ಸವಿದ ಕೊರಿಯನ್ ಪುಟಾಣಿಗಳು
ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಅದ್ಭುತ ಮಗ ಎಂದಿದ್ದಾರೆ. ಇನ್ನೊಬ್ಬರು, ಜೆಂಟಲ್ ಡೆಂಟಲ್ ಕ್ಲಿನಿಕ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಬಾಲ್ಯದ ದಿನಗಳೇ ಆಗಿತ್ತು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Tue, 16 December 25




