
ಇಂದೋರ್, ಡಿಸೆಂಬರ್ 17: ವಾಹನ ಚಲಾಯಿಸುವ ವೇಳೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (helmet) ಧರಿಸುವುದು ಕಡ್ಡಾಯ. ಒಂದು ವೇಳೆ ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದರೆ ದಂಡ ಬೀಳುವುದಂತೂ ಖಂಡಿತ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿ ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ ಈ ವ್ಯಕ್ತಿಯೂ ನೀಡಿದ ಉತ್ತರಕ್ಕೆ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಆ ಬಳಿಕ ಪೊಲೀಸರು ಹೆಲ್ಮೆಟ್ ತಯಾರಕರಿಗೆ ವಿಶೇಷ ಮನವಿ ಮಾಡಿದ್ದು ಈ ಘಟನೆಯೂ ಮಧ್ಯಪ್ರದೇಶದ ಇಂದೋರ್‌ನಲ್ಲಿ (Indore in Madhya Pradesh) ನಡೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿವೇಕಾನಂದ್ ತಿವಾರಿ (Vivekanand Tiwari) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಸಂಚಾರಿ ಪೊಲೀಸರು “ಎಲ್ಲರಿಗೂ ಹೆಲ್ಮೆಟ್‌ಗಳು ಅವಶ್ಯಕ. ಕಂಪನಿಗೆ ವಿನಂತಿ: ಎಲ್ಲಾ ಗಾತ್ರದ ಹೆಲ್ಮೆಟ್‌ಗಳನ್ನು ತಯಾರಿಸಿ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತಾ ಬರುತ್ತಿರುವುದನ್ನು ಕಾಣಬಹುದು. ಟ್ರಾಫಿಕ್ ಪೊಲೀಸರು ಸವಾರನನ್ನು ತಡೆದು ನಿಲ್ಲಿಸಿ ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಈ ವ್ಯಕ್ತಿಯೂ ಸರ್ ನನ್ನ ತಲೆ ಸೈಜ್‌ಗೆ ಊರಿನಲ್ಲಿ ಎಲ್ಲೂ ಹೆಲ್ಮೆಟ್ ಸಿಗಲ್ಲ ಎಂದು ಪ್ರಾಮಾಣಿಕ ಉತ್ತರ ನೀಡಿದ್ದಾನೆ. ಹೀಗೆನ್ನುತ್ತಿದ್ದಂತೆ ಪೊಲೀಸರಿಗೆ ಅನುಮಾನ ಬಂದಿದ್ದು, ಬಳಿಯಿದ್ದು ಹೆಲ್ಮೆಟ್ ನೀಡಿ ಇದನ್ನು ಧರಿಸುವಂತೆ ಹೇಳಿದ್ದಾರೆ. ಈ ವ್ಯಕ್ತಿಯ ತಲೆಯ ಗಾತ್ರ ದೊಡ್ಡದಾಗಿದ್ದು, ಹೀಗಾಗಿ ಹೆಲ್ಮೆಟ್ ಧರಿಸಲು ಸಾಧ್ಯವಾಗಿಲ್ಲ. ಇದನ್ನು ನೋಡುತ್ತಿದ್ದಂತೆ ಪೊಲೀಸರು ಬಿದ್ದು ಬಿದ್ದು ನಕ್ಕಿದ್ದಾರೆ. ಕೊನೆಗೆ ಈ ವಿಡಿಯೋದಲ್ಲಿ ಹೆಲ್ಮೆಟ್ ಕಂಪನಿಗೆ ವಿಶೇಷ ಮನವಿ ಮಾಡಿದ್ದು, ವ್ಯಕ್ತಿಗಳ ತಲೆ ಗಾತ್ರ ದೊಡ್ಡದಿದೆ. ಅವರಿಗೆ ಹೆಲ್ಮೆಟ್ ಧರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು ಅತ್ಯವಶ್ಯಕ. ಹೀಗಾಗಿ ದೊಡ್ಡ ಗಾತ್ರದ ಹೆಲ್ಮೆಟ್ ಉತ್ಪಾದಿಸಿ ಎಂದು ಹೇಳಿರುವುದನ್ನು ನೋಡಬಹುದು.
ಇದನ್ನೂ ಓದಿ:ಮಕ್ಕಳಿಗಾಗಿ ಬಸ್ಸಿನಲ್ಲಿ ಆಟಿಕೆ ಸ್ಟೀರಿಂಗ್ ಅಳವಡಿಸಿದ ಬಸ್ ಚಾಲಕ
ಈ ವಿಡಿಯೋ 26 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಪೊಲೀಸರ ಮನವಿಗೆ ಸ್ಪಂದಿಸಿದ ಸ್ಟೀಲ್‌ಬರ್ಡ್ ಹೆಲ್ಮೆಟ್ ಕಂಪನಿ ನಾವು ಈ ವ್ಯಕ್ತಿಗೆ ಹೆಲ್ಮೆಟ್ ಉಡುಗೊರೆ ನೀಡಲು ಬಯಸಿದ್ದೇವೆ. ದಯವಿಟ್ಟು ವ್ಯಕ್ತಿಯ ಸಂಪರ್ಕ ಇದ್ದರೆ ತಿಳಿಸಿದೆ. ಮತ್ತೊಬ್ಬರು ಇಂತಹ ಪೊಲೀಸರು ಇರ್ಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಪಾಪ ಅವರವರ ಕಷ್ಟ ಅವರವರಿಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Wed, 17 December 25