ಕಾರು ಚಲಾಯಿಸುತ್ತಿದ್ದ ಯುವತಿ ರಿವರ್ಸ್ ಗೇರ್ನಲ್ಲಿದ್ದಾಗ ಏಕಾಏಕಿ ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ಕಂದಕಕ್ಕೆ ಬಿದ್ದು ಆಕೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದಲ್ಲಿ 23 ವರ್ಷದ ಯುವತಿ ಆಕಸ್ಮಿಕವಾಗಿ ರಿವರ್ಸ್ ಗೇರ್‌ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರು ಹಿಂಬದಿಯ ಕ್ರ್ಯಾಶ್ ಬ್ಯಾರಿಯರ್ ಅನ್ನು ಮುರಿದು ಕಂದಕಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾಳೆ.
ಕಾರು ರಿವರ್ಸ್ ಗೇರ್ ನಲ್ಲಿದ್ದಾಗ ಯುವತಿ ಕ್ಲಚ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ನೇರವಾಗಿ ಕಂದಕಕ್ಕೆ ಬಿದ್ದಿದೆ.
ಸುಲಿಭಂಜನ್ ಪ್ರದೇಶದಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಯುವತಿಯನ್ನು ಶ್ವೇತಾ ಸುರ್ವಾಸೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತ ಶಿವರಾಜ್ ಮುಳೆ ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರು ಓಡಿಸಲು ಕಲಿಸಿದ್ದ.
रील्स बनविताना सावधानी बाळगा. रीलच्या नादात कार रिव्हर्स घेताना ब्रेक ऐवजी पाय एक्स्लेटरवर पडल्याने कार थेट दरीत कोसळून तरुणीचा मृत्यू! छत्रपती संभाजीनगर जवळील शुलीभंजन येथील घटना. #Reels #Chhtrapati_Sambhajinagar pic.twitter.com/rkzbFY6kL4
— Nandkishor Patil (@Nandupatil67) June 17, 2024
ಶ್ವೇತಾಗೆ ಕಾರು ಓಡಿಸುವಾಗ ರೀಲ್‌ಗಳನ್ನು ತಯಾರಿಸುವ ಆಸೆ ಇತ್ತು. ಮೊಬೈಲನ್ನು ಶಿವರಾಜ್ ಗೆ ಕೊಟ್ಟು ತನ್ನ ರೀಲ್ಸ್ ಮಾಡುವಂತೆ ಕೇಳಿದ್ದಳು. ಇದ್ದಕ್ಕಿದ್ದಂತೆ ಕಾರು ರಿವರ್ಸ್ ಗೇರ್‌ನಲ್ಲಿ ಚಲಿಸಲು ಪ್ರಾರಂಭಿಸಿತು ಮತ್ತು ಶ್ವೇತಾ ಎಕ್ಸಲೇಟರ್ ಅನ್ನು ಒತ್ತಿದ್ದಾಳೆ. ಥಟ್ಟನೆ ಶ್ವೇತಾಳ ಕಾರು ವೇಗವಾಗಿ ಹಿಂದಕ್ಕೆ ಚಲಿಸತೊಡಗಿತು.
ಮತ್ತಷ್ಟು ಓದಿ:
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ; ಸಿನಿಮಾ ಸ್ಟೈಲ್ಲ್ಲಿ ಕೆರೆಗೆ ಹಾರಿದ ಕಾರು!
ಶಿವರಾಜ್ ಕ್ಲಚ್ ಕ್ಲಚ್ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸಲೇ ಇಲ್ಲ, ಅಷ್ಟರಲ್ಲಾಗಲೇ ಕಾರು ಕೆಳಗೆ ಬಿದ್ದಿದೆ. ಕಾರು ಚಾಲನೆ ಮಾಡುವಾಗ ಆಕೆಯ ಸ್ನೇಹಿತ ಶಿವರಾಜ್ ಎಂಬಾತ ವಿಡಿಯೋ ಮಾಡುತ್ತಿದ್ದ, ಕಾರು ರಿವರ್ಸ್ ಗೇರ್ನಲ್ಲಿದ್ದಾಗ ಅಕಸ್ಮಾತ್ ಆಗಿ ಆಕ್ಸಲರೇಟರ್ ಒತ್ತಿದ್ದರಿಂದ ಈ ಅವಘಡ ಸಂಭವಿಸಿದೆ.
ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ತಲುಪಲು ಗಂಟೆಗಳ ಸಮಯವನ್ನು ತೆಗೆದುಕೊಂಡಿತು, ತಕ್ಷಣ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ, ಆಕೆ ಸಾವನ್ನಪ್ಪಿದ್ದಾಳೆ.
ಒಂದೊಮ್ಮೆ ಕಾರು ರಿವರ್ಸ್ ಗೇರ್ನಲ್ಲಿರುವಾಗ ಆಕ್ಸಲರೇಟರ್ ಒತ್ತಿದರೆ ಕಾರು ನಾವಂದುಕೊಂಡಿದ್ದಕ್ಕಿಂತ ವೇಗವಾಗಿ ಚಲಿಸುವ ಸಾಧ್ಯತೆ ಇರುತ್ತದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Tue, 18 June 24