Viral: ಪಾರ್ಶ್ವವಾಯುಗೆ ತುತ್ತಾದ ಸಂದರ್ಭದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ನೀಡಿದ ಪತಿ

ಪತಿಯ ಕಷ್ಟಕಾಲದಲ್ಲಿ ಆತನ ಜೊತೆ ನಿಲ್ಲದೆ, ಆತನ ಜೊತೆ ಯಾರು ಬಾಳುತ್ತಾರೆ ಎಂದು ಪತಿರಾಯನಿಗೆ ಕೈಕೊಟ್ಟು ಹೋದವರ ಸುದ್ದಿಯನ್ನು ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತಾನು ಪಾರ್ಶ್ವವಾಯುಗೆ ತುತ್ತಾಗಿ 6 ವರ್ಷಗಳ ಕಾಲ ಹಾಸಿಗೆ ಹಿಡಿದಾಗ, ಯಾವುದೇ ಕಾರಣಕ್ಕೂ ಬಿಟ್ಟು ಹೋಗದೆ ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಿದಂತಹ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ನೀಡಿ ವ್ಯಕ್ತಿಯೊಬ್ಬ ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಈ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಪಾರ್ಶ್ವವಾಯುಗೆ ತುತ್ತಾದ ಸಂದರ್ಭದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ನೀಡಿದ ಪತಿ
Edited By:

Updated on: Oct 27, 2024 | 3:29 PM

ಹೆಂಡತಿಯ ಗುಣ ನಡತೆ ಸರಿಯಿಲ್ಲ, ಆಕೆ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಲ ಎಂಬಿತ್ಯಾದಿ ಕಾರಣಕ್ಕೆ ಡಿವೋರ್ಸ್‌ ಕೊಟ್ಟು ಬೇರೊಂದು ಮದುವೆಯಾದವರ ಕಥೆಗಳನ್ನು ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಕಷ್ಟ ಕಾಲದಲ್ಲಿ ಜೊತೆಯಾಗಿ ನಿಂತಿದ್ದ ಹೆಂಡ್ತಿಗೆ ಕೈಕೊಟ್ಟು ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಹೌದು ಆ ವ್ಯಕ್ತಿ ತಾನು ಪಾರ್ಶ್ವವಾಯುಗೆ ತುತ್ತಾಗಿ 6 ವರ್ಷಗಳ ಕಾಲ ಹಾಸಿಗೆ ಹಿಡಿದಾಗ, ಆತನನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗದೆ ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಿದಂತಹ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಈ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಮಲೇಷ್ಯಾದಲ್ಲಿ ನಡೆದಿದ್ದು, ಇಲ್ಲಿನ ವ್ಯಕ್ತಿಯೊಬ್ಬ ತಾನು ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದ ಸಂದರ್ಭದಲ್ಲಿ ತನ್ನನ್ನು ಮಗುವಿನಂತೆ ಆರೈಕೆ ಮಾಡಿದ ಪತ್ನಿಗೆ ಡಿವೋರ್ಸ್‌ ನೀಡಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಮಲೇಷ್ಯಾದ ನಿವಾಸಿಯಾಗಿರುವ ಈತ 2016 ರಲ್ಲಿ ನೂರುಲ್‌ ಸಯಾಜ್ ಸೈಜ್ವಾನಿ ಎಂಬ ಮಹಿಳೆಯನ್ನು ಮದುವೆಯಾಗುತ್ತಾನೆ. ಮದುವೆಯಾದ ಎರಡೇ ವರ್ಷಕ್ಕೆ ಆತ ಭೀಕರ ಕಾರು ಅಪಘಾತದಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿಯುತ್ತಾನೆ. ಈ ಸಂದರ್ಭದಲ್ಲಿ ಸೈಜ್ವಾನಿ ಆತನನ್ನು ಬಿಟ್ಟು ಹೋಗದೆ ಸತತ ಆರು ವರ್ಷಗಳ ಕಾಲ ಅಂದರೆ ಅತ ಸಂಪೂರ್ಣವಾಗಿ ಗುಣಮುಖವಾಗುವವರೆಗೂ ನಾಸೊಗ್ಯಾಸ್ಟ್ರಿಕ್‌ ಟ್ಯೂಬ್‌ ಮೂಲಕ ಊಟ ಮಾಡಿಸುವುದರಿಂದ ಹಿಡಿದು ಡೈಪರ್‌ ಚೇಂಜ್‌ ಮಾಡುವವರೆಗೂ ಪತಿರಾಯನನ್ನು ಮಗುವಿನಂತೆ ಆರೈಕೆ ಮಾಡಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾಳೆ.

ಇದನ್ನೂ ಓದಿ: ಚಲಿಸುತ್ತಿರುವ ರೈಲಿನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಬಾಲಕ

ವಿಚಿತ್ರ ಏನೆಂದರೆ ಹೆಂಡತಿಯ ಆರೈಕೆಯಿಂದ ಸಂಪೂರ್ಣವಾಗಿ ಗುಣಮುಖನಾದ ಕೆಲವೇ ಸಮಯಗಳ ಬಳಿಕ ತನ್ನನ್ನು ಆರೈಕೆ ಮಾಡಿದ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ಕೊಟ್ಟು, ವಿಚ್ಛೇದನದ ಒಂದು ವಾರದ ಬಳಿಕ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಸೈಜ್ವಾನಿ ಸೋಷಿಯಲ್‌ ಮೀಡಿಯಾದಲ್ಲಿ ಪತಿಯ ಎರಡನೇ ಮದುವೆಗೆ ಶುಭ ಕೋರಿದ್ದು, ಚಿನ್ನದಂತ ಹೆಂಡತಿಯನ್ನು ಬಿಟ್ಟು ಹೋದ ಆತನಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us