Viral Video: ಚಲಿಸುತ್ತಿರುವ ರೈಲಿನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಬಾಲಕ

ವಿಡಿಯೋದಲ್ಲಿ ಹುಡುಗರ ಗುಂಪೊಂದು ರೈಲ್ವೇ ಟ್ರ್ಯಾಕ್ ಬಳಿ ನಿಂತು ಚಲಿಸುತ್ತಿರುವ ರೈಲಿನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ರೈಲು ಹತ್ತಿರ ಬರುತ್ತಿದ್ದಂತೆ ಹುಡುಗರು ಫೋನ್​ ಹಿಡಿದು ರೆಡಿಯಾಗಿದ್ದಾರೆ. ಆದರೆ ವೇಗವಾಗಿ ಬಂದ ರೈಲು ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಆತ ಸೇತುವೆಯಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ.

Follow us
ಅಕ್ಷತಾ ವರ್ಕಾಡಿ
|

Updated on:Oct 27, 2024 | 3:06 PM

ಬಾಂಗ್ಲಾದೇಶ: ಸೋಶಿಯಲ್​ ಮೀಡಿಯಾಗಳಲ್ಲಿ ಫೇಮಸ್​ ಆಗಲು ಯಾವ ಮಟ್ಟಕ್ಕೂ ಬೇಕಾದರೂ ಇಳಿದು ರೀಲ್ಸ್ ಮಾಡುವವರು ಇದ್ದಾರೆ. ಇದೀಗ ಹುಡುಗರ ಗುಂಪೊಂದು ರೈಲ್ವೆ ಹಳಿ ಮೇಲೆ ನಿಂತು ರೀಲ್ಸ್​​ ಮಾಡಿದ್ದು, ವೇಗವಾಗಿ ಬಂದ ರೈಲು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಈ ಘಟನೆ ಬಾಂಗ್ಲಾದೇಶದ ರಂಗ್‌ಪುರದಲ್ಲಿ ನಡೆದಿದೆ ಎಂದು ವದಿಯಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಹುಡುಗರ ಗುಂಪೊಂದು ರೈಲ್ವೇ ಟ್ರ್ಯಾಕ್ ಬಳಿ ನಿಂತು ಚಲಿಸುತ್ತಿರುವ ರೈಲಿನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ರೈಲು ಹತ್ತಿರ ಬರುತ್ತಿದ್ದಂತೆ ಹುಡುಗರು ಫೋನ್​ ಹಿಡಿದು ರೆಡಿಯಾಗಿದ್ದಾರೆ.ವೇಗವಾಗಿ ಬಂದ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸೇತುವೆಯಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ.

ಇದನ್ನೂ ಓದಿ: ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ವಿಡಿಯೋ ವೈರಲ್

@iSoumikSaheb ಎಂಬ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. ಅಕ್ಟೋಬರ್ ​26ರಂದು ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. “ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಲು ಇಂತಹ ಹುಚ್ಚು ಸಾಹಸಗಳನ್ನು ಮಾಡಿ ಪ್ರಾಣ ಕಳೆದುಕೊಳ್ಳಬೇಡಿ” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:05 pm, Sun, 27 October 24