AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ವಿಡಿಯೋ ವೈರಲ್

ಜೀವನದಲ್ಲಿ ಸ್ವಲ್ಪ ಕಷ್ಟಗಳು ಎದುರಾದರೂ ನನ್ನಿಂದ ಏನು ಸಾಧ್ಯವಿಲ್ಲ ಎನ್ನುವ ಜನರ ಕೆಲವು ವ್ಯಕ್ತಿಗಳ ಬದುಕು ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿಯಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರಿಗೆ ಎರಡು ಕೈಗಳಿಲ್ಲ. ಆದರೆ ತಾನೇ ದುಡಿದು ತಿನ್ನಬೇಕು ಎನ್ನುವ ಛಲದಿಂದ ಝೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ವ್ಯಕ್ತಿಯ ಆತ್ಮವಿಶ್ವಾಸವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಸಾಯಿನಂದಾ
| Edited By: |

Updated on: Oct 26, 2024 | 6:13 PM

Share

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲವಿದ್ದರೆ, ಯಾರ ಮೇಲೂ ಅವಲಂಬಿತರಾಗಬೇಕಿಲ್ಲ. ಪ್ರಪಂಚದ ಯಾವುದೇ ಶಕ್ತಿಯು ನಿಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ. ಈಗಿನ ಕಾಲದಲ್ಲಿ ಕೈಕಾಲು ಸರಿಯಿದ್ದು ಕೂತು ತಿನ್ನುವವರ ನಡುವೆ ಅಂಗ ಊನತೆಯನ್ನು ಮೆಟ್ಟಿ ನಿಂತು ಮೈ ಬಗ್ಗಿಸಿ ದುಡಿಯುವವರನ್ನು ನೋಡಿದಾಗ ನಿಜಕ್ಕೂ ಸ್ಫೂರ್ತಿಯಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರಿಗೆ ಎರಡು ಕೈಗಳಿಲ್ಲ, ಛಲಬಿಡದ ಈ ವ್ಯಕ್ತಿಯೂ ಝೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಕೈಗಳಿಲ್ಲದೆ ಸ್ಕೂಟರ್ ಓಡಿಸುತ್ತಿರುವುದನ್ನು ನೋಡಬಹುದು. ಹೌದು, ಝೊಮ್ಯಾಟೊ ಟೀ ಶರ್ಟ್ ಹಾಕಿಕೊಂಡು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವ್ಯಕ್ತಿಗೆ ತನ್ನ ಎರಡೂ ಕೈಗಳಿಲ್ಲ. ಆದರೂ ತನ್ನ ಸ್ಕೂಟರ್‌ನ ಹ್ಯಾಂಡಲ್ ಅನ್ನು ಕಬ್ಬಿಣದ ಅಂಚಿನ ಸಹಾಯದಿಂದ ನಿರ್ವಹಿಸುತ್ತಿರುವುದನ್ನು ಕ್ಲಿಪ್‌ನಲ್ಲಿ ನೋಡಬಹುದು. ಈ ವೀಡಿಯೊವನ್ನು @Gulzar_sahab ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: 24 ಕ್ಯಾರೆಟ್ ಚಿನ್ನ ಲೇಪಿತ ಆಮ್ಲೆಟ್ ತಿಂದಿದ್ದೀರಾ? ಇಲ್ಲಿದೆ ನೋಡಿ

ಈ ವಿಡಿಯೋವು ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು ‘ಈ ಪರಿಸ್ಥಿತಿಯಲ್ಲಿಯೂ ಒಬ್ಬರು ಕಷ್ಟಪಟ್ಟು ದುಡಿಯಬೇಕು. ಏಕೆಂದರೆ ಬದುಕುವುದಕ್ಕಾಗಿ ಎಂದಿದ್ದಾರೆ. ಮತ್ತೊಬ್ಬರು, ನೆಪ ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವ ಜನರಿಗೆ ಈ ವೀಡಿಯೊ ದೊಡ್ಡ ಪಾಠವನ್ನು ಕಲಿಸುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ನೀವು ಬದುಕಲು ಬಯಸಿದರೆ, ನಿಮ್ಮ ವೈಫಲ್ಯತೆಯನ್ನು ಮೆಟ್ಟಿ ನಿಲ್ಲಬೇಕು’ ಎಂದು ಬರೆದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ