AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ನೈಜೀರಿಯಾದ ಮಕ್ಕಳಿಗೆ ಕನ್ನಡ ಭಾಷೆ ಹೇಳಿ ಕೊಟ್ಟ ಡಾ. ಬ್ರೋ

ಖ್ಯಾತ ಯೂಟ್ಯೂಬರ್ ಡಾ. ಬ್ರೋ ಅಥವಾ ಗಗನ್‌ ಶ್ರೀನಿವಾಸ್‌ ಆಗಾಗ ತಮ್ಮ ವಿಡಿಯೋಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಆದರೆ ಇದೀಗ ನೈಜೀರಿಯಾದ ಪ್ರವಾಸದಲ್ಲಿದ್ದು, ಅಲ್ಲಿನ ಮಕ್ಕಳಿಗೆ ಕನ್ನಡ ಭಾಷೆಯನ್ನು ಹೇಳಿಕೊಟ್ಟು, ಕನ್ನಡಿಗರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಇದೀಗ ಡಿ ಬಾಸ್ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋವು ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಯಿನಂದಾ
| Edited By: |

Updated on: Oct 26, 2024 | 3:48 PM

Share

ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಇದೀಗ ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಡಾ. ಬ್ರೋ ನೈಜಿರಿಯಾದ ಸ್ಲಂ ಮಕ್ಕಳಿಗೆ ಕನ್ನಡ ಹೇಳಿಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಪ್ರವಾಸದ ತುಣುಕುಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಇವರು ವಿದೇಶದಲ್ಲಿ ಪುಟ್ಟ ಸ್ಕೂಲಿನ ತರಗತಿಯೊಂದರ ಮಕ್ಕಳಿಗೆ ಕನ್ನಡದಲ್ಲಿ ಪಾಠ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಡಾ. ಬ್ರೋ ನೈಜೀರಿಯಾದ ಅತಿ ದೊಡ್ಡ ಸ್ಲಂ ಪ್ರದೇಶಕ್ಕೆ ತೆರಳಿದ್ದು ಅಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆಯಲ್ಲಿ ಅಲ್ಲಿನ ಮಕ್ಕಳಿಗೆ ನಮ್ಮ ದೇಶ ಹಾಗೂ ರಾಜ್ಯದ ಬಗ್ಗೆ ಹೇಳಿದ್ದಾರೆ. ಬಳಿಕ ನಮ್ಮ ಕನ್ನಡ ಭಾಷೆಯನ್ನು ಭಾರತದ ರಾಷ್ಟ್ರ ಭಾಷೆ ಎಂದು ಹೇಳಿದ್ದು ಕನ್ನಡ ಭಾಷೆಯಲ್ಲೇ ಪಾಠ ಮಾಡಿದ್ದಾರೆ. ಡಿ ಬಾಸ್ ಹೆಸರಿನ ಖಾತೆ ಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದೊಂದಿಗೆ ‘ಒಂದು ನಿಮಿಷ ಶಾಕ್ ಕೊಟ್ರಲ್ಲ ದೇವ್ರು’ ಎಂದು ಶೀರ್ಷಿಕೆ ಬರೆಯಲಾಗಿದೆ.

ಈ ವಿಡಿಯೋದಲ್ಲಿ ಗಗನ್‌ ಶ್ರೀನಿವಾಸ್‌ ಅವರು ನೈಜೀರಿಯಾದ ಶಾಲೆಗೆ ಭೇಟಿ ನೀಡಿರುವುದನ್ನು ನೋಡಿರಬಹುದು. ನೈಜೀರಿಯಾದ ಈ ಶಾಲೆಯನ್ನು ನೋಡಿದರೆ ಕಳಪೆ ಕಟ್ಟಡದಲ್ಲಿ ಇರುವಂತಿದೆ. ಈ ವಿಡಿಯೋದ ಪ್ರಾರಂಭದಲ್ಲಿ, ನಮ್ಮ ದೇಶ ಹಾಗ ರಾಜ್ಯದ ಬಗ್ಗೆ ಮಾತನಾಡಿದ್ದು, ಆ ಬಳಿಕ ನಮ್ಮ ಕನ್ನಡ ಭಾಷೆಯನ್ನು ಭಾರತದ ರಾಷ್ಟ್ರ ಭಾಷೆ ಎಂದು ಹೇಳುವುದನ್ನು ನೋಡಬಹುದು. ಅದಲ್ಲದೇ, ʼನಾನೀಗ ನಿಮಗೆ ಇಂಡಿಯಾದ ನ್ಯಾಷನಲ್‌ ಲ್ಯಾಂಗ್ವೇಜ್‌ ಹೇಳಿಕೊಡ್ತೀನಿʼ ಎಂದಿದ್ದಾರೆ. ತದನಂತರದಲ್ಲಿ ʼಅ, ಆ, ಇ, ಈʼ ಎಂದು ಕನ್ನಡದ ಅಕ್ಷರಮಾಲೆಯನ್ನು ಅಂ, ಅಃ ವರೆಗೆ ಹೇಳಿಕೊಟ್ಟಿದ್ದಾರೆ.

ಇದನ್ನೂ ಓದಿ: 24 ಕ್ಯಾರೆಟ್ ಚಿನ್ನ ಲೇಪಿತ ಆಮ್ಲೆಟ್ ತಿಂದಿದ್ದೀರಾ? ಇಲ್ಲಿದೆ ನೋಡಿ

ಕನ್ನಡ ರಾಜ್ಯೋತ್ಸವದ ಹತ್ತಿರ ಬರುತ್ತಿರುವ ಹೊತ್ತಲ್ಲಿಯೇ ವಿದೇಶಿ ಮಕ್ಕಳಿಗೆ ಕನ್ನಡ ಭಾಷೆ ಹೇಳಿಕೊಟ್ಟು ಕನ್ನಡಿಗರ ಹೃದಯ ಗೆದ್ದಿದ್ದಾರೆ. ನೆಟ್ಟಿಗರೊಬ್ಬರು, ʼʼನೈಜೀರಿಯಾಗೆ ಹೋಗಿ ಕನ್ನಡ ಬಾವುಟ ಹಾರಿಸಿದ್ದೀಯಲ್ಲ ಗುರು” ಎಂದಿದ್ದಾರೆ. ಮತ್ತೊಬ್ಬರು, “ಕನ್ನಡವನ್ನು ಭಾರತದ ರಾಷ್ಟ್ರಭಾಷೆ ಅಂತ ಕರೆದಿದ್ದಕ್ಕೆ ಥ್ಯಾಂಕ್‌ ಬ್ರೋ” ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ