AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 24 ಕ್ಯಾರೆಟ್ ಚಿನ್ನ ಲೇಪಿತ ಆಮ್ಲೆಟ್ ತಿಂದಿದ್ದೀರಾ? ಇಲ್ಲಿದೆ ನೋಡಿ

ಎಂದಾದರೂ 24 ಕ್ಯಾರೆಟ್ ಚಿನ್ನದ ಲೇಪಿತ ಆಮ್ಲೆಟ್ ತಿಂದಿದ್ದೀರಾ ? ಹೌದು ಇದೀಗ 24 ಕ್ಯಾರೆಟ್ ಚಿನ್ನ ಲೇಪಿತ ಆಮ್ಲೆಟ್​ ತಯಾರಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ. ಆಮ್ಲೆಟ್ ತಯಾರಾದ ಬಳಿಕ ಅದರ ಮೇಲೆ ಚಿನ್ನ ಲೇಪನವನ್ನು ಹಾಕಿ ಸರ್ವ್​​ ಮಾಡಿರುವುದನ್ನು ಕಾಣಬಹುದು.

ಅಕ್ಷತಾ ವರ್ಕಾಡಿ
|

Updated on:Oct 26, 2024 | 12:37 PM

Share

ಬಹಳ ಬೇಗ ತಯಾರಿಸಬಹುದಾದ ಆಮ್ಲೆಟ್‌ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬ್ಯಾಚುಲರ್ ಸೇರಿದಂತೆ ಬಹುತೇಕ ಗೃಹಿಣಿಯರು ಸರಳವಾಗಿ ಥಟ್​ ಅಂತ ಮಾಡುವ ರೆಸಿಪಿ ಅಂದ್ರೆ ಅದು ಆಮ್ಲೆಟ್. ಸಾಮಾನ್ಯವಾಗಿ ನೀವು ಸಾಕಷ್ಟು ಬಗೆಯ ಆಮ್ಲೆಟ್‌ಗಳನ್ನು ತಿಂದಿರುತ್ತೀರಿ, ಆದರೆ ಎಂದಾದರೂ 24 ಕ್ಯಾರೆಟ್ ಚಿನ್ನದ ಲೇಪಿತ ಆಮ್ಲೆಟ್ ತಿಂದಿದ್ದೀರಾ ? ಹೌದು ಇದೀಗ 24 ಕ್ಯಾರೆಟ್ ಚಿನ್ನ ಲೇಪಿತ ಆಮ್ಲೆಟ್​ನ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ. ವಿಡಿಯೋ ಕಂಡರೆ ಒಂದು ಕ್ಷಣ ಶಾಕ್​ ಆಗುವುದಂತೂ ಖಂಡಿತಾ. ವೈರಲ್​​ ಆಗಿರುವ ವಿಡಿಯೋದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರು ಆಮ್ಲೆಟ್ ಮಾಡುವುದನ್ನು ಕಾಣಬಹುದು. ಆಮ್ಲೆಟ್ ತಯಾರಾದ ಬಳಿಕ ಅದರ ಮೇಲೆ ಚಿನ್ನ ಲೇಪನವನ್ನು ಹಾಕಿ ಸರ್ವ್​​ ಮಾಡಿರುವುದನ್ನು ಕಾಣಬಹುದು ಸದ್ಯ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದನ್ನೂ ಓದಿ: ಮೊಬೈಲ್​​ ಕಿತ್ತುಕೊಳ್ಳಲು ಬಂದ ಯುವಕನಿಗೆ ನಡುರಸ್ತೆಯಲ್ಲೇ ಬಟ್ಟೆಬಿಚ್ಚಿಸಿ ಥಳಿಸಿದ ಮಹಿಳೆ LiveLimitlessVlogs ಎಂಬ ಫೇಸ್​ ಬುಕ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಅಕ್ಟೋಬರ್​ 24ರಂದು ಹಂಚಿಕೊಂಡಿರುವ ವಿಡಿಯೋ ಕೇವಲ ಎರಡು ದಿನಗಳಲ್ಲಿ 4 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:37 pm, Sat, 26 October 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ