AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಳಚೆ ನೀರಿನಲ್ಲಿ ಯುವಕರಿಬ್ಬರ ಭಾರೀ ಫೈಟ್;‌ ವೈರಲ್‌ ಆಯ್ತು ವಿಡಿಯೋ

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ಕೆಲವೊಂದು ವಿಡಿಯೋಗಳು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ಇದೀಗ ವೈರಲ್‌ ಆಗಿದ್ದು, ಹುಡುಗರಿಬ್ಬರು ಚರಂಡಿಯಲ್ಲಿ ಬಿದ್ದು, ಹೊರಳಾಡಿ ಅದೇ ಕೊಚ್ಚೆ ನೀರಿನಲ್ಲಿ ಹಂದಿಗಳಂತೆ ಜಗಳವಾಡಿದ್ದಾರೆ. ಈ ದೃಶ್ಯವನ್ನು ಕಂಡು ಇದೆಂಥಾ ಅವಸ್ಥೆ ಮಾರ್ರೆ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.

ಮಾಲಾಶ್ರೀ ಅಂಚನ್​
| Edited By: |

Updated on: Oct 27, 2024 | 2:09 PM

Share

ಈ ಸಮಾಜದಲ್ಲಿ ಜಗಳಗಳಿಗೆ ಕೊರತೆಯೇ ಇಲ್ಲ ಬಿಡಿ. ಪ್ರತಿನಿತ್ಯ ಒಂದಲ್ಲಾ ಒಂದು ವಿಷಯಗಳಿಗೆ ಜಗಳಗಳು ನಡೆಯುತ್ತಲೇ ಇರುತ್ತವೆ. ಮಹಿಳಾ ಮಣಿಗಳ ನಡುವೆ ನೀರಿನ ವಿಚಾರವಾಗಿ ಬಿಂದಿಗೆ ಜಗಳ ನಡೆದರೆ, ಕೆಲ ಪುರುಷರ ನಡುವೆ ಹಣ, ಆಸ್ತಿ ವಿಚಾರವಾಗಿ ಜಗಳಗಳು ನಡೆಯುತ್ತವೆ. ಈ ಗುದ್ದಾಟ, ಜಗಳಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದರಲ್ಲಿ ಕೆಲವು ಸೀರಿಯಸ್‌ ಫೈಟಿಂಗ್‌ ಸೀನ್‌ಗಳು ಕೂಡಾ ತಮಾಷೆಯ ರೀತಿಯಲ್ಲಿ ಕಾಣುತ್ತದೆ. ಸದ್ಯ ಅಂತಹದ್ದೊಂದು ವಿಡಿಯೋ ಇದೀಗ ವೈರಲ್‌ ಆಗಿದ್ದು, ಹುಡುಗರಿಬ್ಬರು ಚರಂಡಿಯಲ್ಲಿ ಬಿದ್ದು, ಹೊರಳಾಡಿ ಅದೇ ಕೊಚ್ಚೆ ನೀರಿನಲ್ಲಿ ಹಂದಿಗಳಂತೆ ಜಗಳವಾಡಿದ್ದಾರೆ. ಈ ದೃಶ್ಯವನ್ನು ಕಂಡು ಇದೆಂಥಾ ಅವಸ್ಥೆ ಮಾರ್ರೆ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.

ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಹಂದಿಗಳು ಕೊಚ್ಚೆ ನೀರಿನಲ್ಲಿ ಬಿದ್ದು ಹೊರಳಾಡುವಂತೆ ಹುಡುಗರಿಬ್ಬರು ಚರಂಡಿ ನೀರಲ್ಲಿ ಬಿದ್ದು, ಹೊರಳಾಡಿ ಜಗಳವಾಡುವಂತಹ ದೃಶ್ಯವನ್ನು ಕಾಣಬಹುದು. ರಸ್ತೆ ಬದಿಯಲ್ಲಿನ ಚರಂಡಿಯೊಳಗೆ ಬಿದ್ದು, ಅಲ್ಲಿಂದ ಹೊರ ಬಾರದೇ ಅದೇ ಕೊಳಚೆ ನೀರಲ್ಲಿ ಹುಡುಗರಿಬ್ಬರು ಜಗಳವಾಡಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಗೆ ಬಂದ ವ್ಯಕ್ತಿಯೊಬ್ಬರು ದೊಣ್ಣೆಯಲ್ಲಿ ಇಬ್ಬರಿಗೂ ಒಂದೇಟು ಕೊಟ್ಟು ಅಲ್ಲಿಂದ ಓಡಿಸಿದ್ದಾರೆ.

ಇದನ್ನೂ ಓದಿ: ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ವಿಡಿಯೋ ವೈರಲ್

ಅಕ್ಟೋಬರ್‌ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಛೀ ಛೀ… ಆ ಗಲೀಜು ನೀರಲ್ಲಿ ಅದ್‌ ಹೆಂಗೆ ಕಾದಾಡಿದ್ರೋʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ಆ ಇಬ್ಬರು ಮಾದಕ ವ್ಯಸನಿಗಳಾಗಿರಬೇಕು, ಅದೇ ಅಮಲಿನಲ್ಲಿಯೇ ಚರಂಡಿಯಲ್ಲಿ ಬಿದ್ದು ಜಗಳ ಕಾಯ್ದಿದ್ದಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ಕೊಚ್ಚೆ ನೀರಲ್ಲೂ ಅದು ಹೇಗೆ ಜಗಳವಾಡಲು ಮನಸ್ಸು ಬಂತೋʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ