Viral Video: ಫಸ್ಟ್ ರ‍್ಯಾಂಕ್‌ ರಾಜು; ಪುಸ್ತಕ ಓದುತ್ತಲೇ ಗರ್ಬಾ ನೃತ್ಯ ಮಾಡಿದ ಯುವಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 09, 2024 | 8:57 AM

ಬ್ಯಾಕ್‌ ಬೆಂಚರ್ಸ್‌ಗಳು ತರ್ಲೆ ತಮಾಷೆ ಮಾಡೋದರಲ್ಲಿ ಎತ್ತದ ಕೈಯಾದ್ರೆ ಫಸ್ಟ್‌ ಬೆಂಚು ಸ್ಟೂಡೆಂಟ್‌ಗಳು ಓದೋ ವಿಷಯದಲ್ಲಿ ಸದಾ ಮುಂದು. ಇದೀಗ ಇಲ್ಲೊಬ್ಬ ಫಸ್ಟ್‌ ಬೆಂಚು ಸ್ಟೂಡೆಂಟ್‌ನ ವಿಡಿಯೋವೊಂದು ವೈರಲ್‌ ಆಗಿದ್ದು, ಏನೇ ಇರ್ಲಿ ನನ್ಗೆ ಓದೇ ಮುಖ್ಯ ಎನ್ನುತ್ತಾ ನವರಾತ್ರಿ ಉತ್ಸವದಲ್ಲಿ ಕೈಯಲ್ಲಿ ಪುಸ್ತಕ ಹಿಡಿದುಕೊಂಡೇ ಗರ್ಬಾ ನೃತ್ಯ ಮಾಡಿದ್ದಾನೆ. ಈ ದೃಶ್ಯ ನೋಡಿ ಬಹುಶಃ ಈತ ಫಸ್ಟ್‌ ರ‍್ಯಾಂಕ್‌ ರಾಜು ಇರ್ಬೇಕು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ದೇಶಾದ್ಯಂತ ನವರಾತ್ರಿ ಉತ್ಸವವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಇನ್ನೂ ಈ ನವರಾತ್ರಿ ಹಬ್ಬದ ದುರ್ಗಾ ಪೂಜೆಯಂದು ವಿಶೇಷವಾಗಿ ಉತ್ತರ ಭಾರತದ ಕಡೆ ದಾಂಡಿಯಾ, ಗರ್ಬಾ ನೃತ್ಯ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಈ ಬಾರಿಯ ನವರಾತ್ರಿ ಉತ್ಸವ ಕೂಡಾ ದೇಶಾದ್ಯಂತ ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದು, ನವರಾತ್ರಿ ಪೂಜೆ, ಗರ್ಭಾ ಡಾನ್ಸ್‌ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಯುವಕನೊಬ್ಬ ಏನೇ ಇರ್ಲಿ ನನ್ಗೆ ಓದೇ ಮುಖ್ಯ ಎನ್ನುತ್ತಾ ನವರಾತ್ರಿ ಉತ್ಸವದಲ್ಲಿ ಕೈಯಲ್ಲಿ ಪುಸ್ತಕ ಹಿಡಿದುಕೊಂಡೇ ಗರ್ಬಾ ನೃತ್ಯ ಮಾಡಿದ್ದಾನೆ.

ವಿಶೇಷವಾಗಿ ಫಸ್ಟ್‌ ಬೆಂಚ್‌, ರ್ಯಾಂಕ್‌ ಸ್ಟೂಡೆಂಟ್‌ಗಳು ಏನೇ ಆದ್ರೂ ಓದೋದನ್ನು ಮಾತ್ರ ಬಿಡೋದೇ ಇಲ್ಲ. ಇದೀಗ ಇಲ್ಲೊಬ್ಬ ಯುವಕ ಕೂಡಾ ನನ್ಗೆ ಓದೇ ಮುಖ್ಯ ಎನ್ನುತ್ತಾ ಗರ್ಬಾ ನೃತ್ಯ ಕಾರ್ಯಕ್ರಮದಲ್ಲೂ ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಾ ನೃತ್ಯ ಮಾಡಿದ್ದಾನೆ. ಅಂಕಿತ (Memeswalimulagi) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಓದುವ ಮಕ್ಕಳು ಎಲ್ಲಿದ್ದರೂ ಸಹ ಓದುತ್ತಾರೆ ಎಂಬ ಮಾತು ಈಗ ನಿಜವಾಯಿತು ನೋಡಿ” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಲೇ ಗರ್ಬಾ ನೃತ್ಯ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಅಕ್ಟೋಬರ್‌ 6 ರಮದು ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಲೈಕ್ಸ್‌ ಮತ್ತು ವೀವ್ಸ್‌ಗಾಗಿ ಜನ ಏನ್‌ ಬೇಕಾದ್ರೂ ಮಾಡ್ತಾರೆ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವನು ಫಸ್ಟ್‌ ರ‍್ಯಾಂಕ್‌ ರಾಜು ಇರ್ಬೇಕುʼ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹುಶಃ ಆ ಕಾರ್ಯಕ್ರಮದಲ್ಲಿ ಆತನ ಸಂಬಂಧಿಕರು ಇದ್ದಿರಬೇಕುʼ ಎಂದು ತಮಾಷೆ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 5:49 pm, Tue, 8 October 24